spot_img
spot_img

ಅರೇ.! ಹಾಡು ಬರೆದು ಹಾಡಿದರೆ ಇಷ್ಟೆಲ್ಲಾ ಹಣ ಸಿಗುತ್ತಾ..! ಗ್ಯಾರಂಟಿ ರಾಮಣ್ಣ

Must Read

- Advertisement -

ಹಾಸನ ಜಿಲ್ಲಾ ಹಿರಿಯ ನಾಗರಿಕರ ಸಾಂಸ್ಕೃತಿಕ ಕಲಾ ಸಂಘದ ಕಲಾವಿದರು ಇದೇ ಭಾನುವಾರ 12ರಂದು ಜಿಲ್ಲಾ ಕ.ಸಾ.ಪ. ಭವನದಲ್ಲಿ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರದರ್ಶಿಸುತ್ತಿದ್ದಾರೆ. ಈ ನಾಟಕ ಬರೆದ ಗ್ಯಾರಂಟಿ ರಾಮಣ್ಣ ಸ್ವತಃ ಗಾಯಕರು. ಕಂಚಮಾರನಹಳ್ಳಿ ಪ್ರಗತಿ ಗ್ರಾಮೀಣ ಅಭಿವೃದ್ಧಿ ಮತ್ತು ತರಬೇತಿ ಸಂಸ್ಥೆಯ 22ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಲಾವಿದರನ್ನು ಸನ್ಮಾನಿಸಲಾಗುತ್ತಿದೆ.

ಅರೇ! ವರ್ಷಗಳು ಎಷ್ಟು ಬೇಗ ಉರುಳಿ ಹೋಗಿವೆ.! ರಾಮಣ್ಣ ನನಗೆ ಪರಿಚಯವಾಗಿದ್ದು 1996ರಲ್ಲಿ ಹಾಸನ ಜಿಲ್ಲೆಯಲ್ಲಿ ಆರಂಭವಾದ ಸಾಕ್ಷರತಾ ಆಂದೋಲನದಲ್ಲಿ. 

ಪ್ರಮಾಣ ಮಾಡೋಣ… ಸಾಕ್ಷರತೆಯ ಸಾರುವೆವೆಂದು… ಓದು ಬರಹ ಕಲಿಸುವೆವೆಂದು ಪ್ರಮಾಣ ಮಾಡೋಣ… ಹಾಡು ರಚಿಸಿ  ಹಾಡಿದ್ದರು ರಾಮಣ್ಣ.  ಅಕ್ಷರ ಅಭಿಷೇಕ ಯೋಜನೆ ಜಿಲ್ಲೆಗೆ ಬರುವ ಮುನ್ನ ಬಿ.ಜೆ.ವಿ.ಎಸ್.ನಿಂದ ಸಾಕ್ಷರತಾ ಜಾಥಾ ನಡೆದಿತ್ತು. ಆಗ ಗೊರೂರಿನಲ್ಲಿದ್ದ ನಾನು ಹತ್ತಿರದ ಅರಕಲಗೊಡು ತಾಲ್ಲೂಕಿನಲ್ಲಿ ಹೋಗಿ ಭಾಗವಹಿಸುತ್ತಿದ್ದೆ. ಇದಕ್ಕೆ ಆಗಿನ ಶಾಸಕರಾಗಿದ್ದ ಎ.ಟಿ.ರಾಮಸ್ವಾಮಿಯವರು ಜೊತೆಗೂಡಿ ಸಾಗಿದ್ದರು. ಅದಾಗಿ ಅಕ್ಷರ ಅಭಿಷೇಕ ಪ್ರಾಜೆಕ್ಟ್‍ನಲ್ಲಿ ನಾನು ಪಠ್ಯ ಪುಸ್ತಕ ರಚನಾ ಸಮಿತಿಯ ಕಾರ್ಯದರ್ಶಿಯಾಗಿ ಯಾವುದೇ ಸಂಬಳ ಸಾರಿಗೆ ಇಲ್ಲದೇ ಕೆಲಸ ಮಾಡಿದ್ದೆ. ಇದು ನನಗೆ ಮುಂದೆ ನವಸಾಕ್ಷರರಿಗಾಗಿ ಸಾಕ್ಷರರಾಗೋಣ, ಕೆರೆ ಸಂರಕ್ಷಣೆ, ಸುಗ್ಗಿ ಹಬ್ಬ ಸಂಕ್ರಾಂತಿ, ಭಾವ್ಯಕ್ಯ ಭಾರತ  ಪುಸ್ತಕಗಳನ್ನು ಪ್ರಕಟಿಸಲು ನೆರವಾಗಿತ್ತಷ್ಟೇ. ಸೈಯದ್ ಸಜ್ಜದ್ ಪಾಶಾ  ಜಿಲ್ಲಾಧಿಕಾರಿ ಮಹೇಂದ್ರ ಜೈನ್ ಅವರಿಂದ ಕೊಡಿಸಿದ ಪ್ರಶಂಸನಾ ಪತ್ರ ನೆನಪಾಗಿ ಉಳಿಯತ್ತಷ್ಟೇ.   

- Advertisement -

ರಾಮಣ್ಣ ಹಳ್ಳಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಗಾಯಕ.  ಅರಸೀಕೆರೆ ತಾ. ಗಂಡಸಿ ಹೋ. ಆಲದಹಳ್ಳಿ ಗ್ರಾಮದ ಸೋಮೇಗೌಡ ಮತ್ತು ಚಿಕ್ಕಮ್ಮ ರವರ 3ನೇ ಮಗನಾಗಿ ತಾ. 9-8-1954ರಲ್ಲಿ ಜನಿಸಿದರು. ಮನೆಯಲ್ಲಿ ತುಂಬಾ ಬಡತನವಿದ್ದುದರಿಂದ ವಿದ್ಯಾಭ್ಯಾಸದಿಂದ ವಂಚಿತರಾಗಿ ಅಪ್ಪನ ಜೊತೆ ಕುರಿ ಮೇಯಿಸಲು ಹೋಗುತ್ತಿದ್ದರು. ಸುಬ್ಬೇಗೌಡ ಮೇಷ್ಟ್ರು ಇವರ ಪ್ರತಿಭೆ ಗುರುತಿಸಿ ಹೈಸ್ಕೂಲ್ ತನಕ ಓದಿಗೆ ನೆರವಾದರು.

1980ರ ದಶಕದಲ್ಲಿ ರೈತಸಂಘದ ಆರ್ಭಟವಿತ್ತು. ಕೆಲವು ಕಡೆ ಸರಳ ಮದುವೆ ನಡೆಸಿದ್ದರು. ಒಮ್ಮೆ ಚಗಚಗೆರೆ ಗ್ರಾಮದಲ್ಲಿ ನಡೆದ ಸರಳ ಮದುವೆಗೆ ರಾಮಣ್ಣ ಹೋದರು. ಮದುವೆಯಲ್ಲಿ ಕೆಲವು ಕಲಾವಿದರು ರೈತ ಸಂಘದ ಹಾಡು ಹೇಳುತ್ತಿದ್ದರು. ಇವರಿಗೂ ಹಾಡುವ ತೆವಲಿತ್ತಾಗಿ ಅಲ್ಲೇ ಸರಳ ಮದುವೆ ಕುರಿತ್ತಾಗಿ ಒಂದು ಹಾಡು ಗೀಚಿ ವೇದಿಕೆ ಹತ್ತಿ ಎಂತಾ ಭೂತಾವು ಹಿಡಿದೈತೊ..ಹಾಡಿದ್ದರು. ಅಲ್ಲಿದ್ದವರು ಖುಷಿಯಾಗಿ ಖಂಜರ ಬಾರಿಸಿದ್ದರು. ಜನ ಚಪ್ಪಾಳೆ ಹಾಕಿ 2ರೂ. 5 ರೂ. ಹತ್ತು ರೂ. ನೋಟುಗಳನ್ನು ನನ್ನ ಅಂಗಿಗೆ ಪಿನ್ನದಲ್ಲಿ ಚುಚ್ಚಿ ಕಲೆಕ್ಷನ್ 78 ರೂ. ಆಗಿತ್ತು.. ಹೀಗೆ ಹೇಳುತ್ತಾ ಹೋದ ರಾಮಣ್ಣ ಅನಂತರಾಜು, ನನ್ನ ಇಡೀ ಜೀವನದಲ್ಲಿ 5 ರೂ. ನೋಟು  ನೋಡದೆ ಇದ್ದ ಆ ದಿನಗಳಲ್ಲಿ ಇದರಿಂದ ಎಷ್ಟು  ಖುಷಿಯಾಯಿತು ಎಂದರೆ, ಅರೇ.! ಹಾಡು ಬರೆದು ಹಾಡಿದರೆ ಇಷ್ಟೆಲ್ಲಾ ಹಣ ಸಿಗುತ್ತಾ..? ಎನಿಸಿದ್ದು ಖರೆ.  ಅಂದಿನಿಂದ ನನ್ನ ಬದುಕಿನ ದಿಕ್ಕೆ ಬದಲಾಯಿತು. ಹಾಡೇ ನನ್ನ ಜೀವನವಾಯಿತು. ಮನೆ ತೊರೆದು ಎಲ್ಲಿ ರೈತಸಂಘದ ಕಾರ್ಯಕ್ರಮವಿದ್ದರೂ ಅಲ್ಲಿ ಹಾಜರಾಗಿ ಹಾಡು ಬರೆದೆ. ಹಾಡಿದೆ. 1981ರಲ್ಲಿ ರೈತ ಸಂಘದಿಂದ ಹಸಿರು ಧ್ವನಿ ಕ್ಯಾಸೆಟ್ ಹುಬ್ಬಳ್ಳಿಯಲ್ಲಿ ಬಿಡುಗಡೆಯಾಯಿತು. ನನಗೆ ಹೆಸರು ಬಂತು. ರೈತ ಗೀತೆ, ಜನಪದ ಗೀತೆ, ಅರಿವಿನ ಗೀತೆ, ಬೀದಿ ನಾಟಕ.. ಹೀಗೆ ಊರೂರು ಸುತ್ತಿ ಹಾಡುವುದು ನಿರಂತರವಾಯಿತು. 1996ರಲ್ಲಿ ಧಾರವಾಡದಲ್ಲಿ ರಾಮೇಗೌಡನಾಗಿದ್ದ ನನಗೆ ಗ್ಯಾರಂಟಿ ರಾಮಣ್ಣ ಬಿರುದು ನೀಡಿ ಮುಂದೆ ರಾಮಣ್ಣ ಪಕ್ಕಕ್ಕೆ ಗ್ಯಾರಂಟಿ ಅಂಟಿಕೊಂಡಿತು.

- Advertisement -

ಈವರೆಗೂ 500ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿರುವೆ ಎನ್ನುವ ಇವರ  ಹಸಿರು, ಕಾಲದ ಕೂಗು, ಓದಿನ ಹಾಡು, ಬೆಳಕಿನಡೆಗೆ ಬಾರಾ ಕ್ಯಾಸೆಟ್‍ಗಳು ಬೆಳಕು ಕಂಡಿವೆ. ಜ್ಞಾನ ಚಕ್ರ, ಅಕ್ಷರ ಕಲಿಕೆ, ಗಾನ ಗುಚ್ಚ, ಗಾನ ಸಂಗಮ ಹಾಡುಗಳ ಸಂಕಲನ ಪ್ರಕಟಗೊಂಡಿವೆ. ಜೀತ, ಪಿಡುಗು, ಬಲಿಪಶು, ಓಟು ಏಟು, ನ್ಯಾಯಕ್ಕೆ ನೇಣುಗಂಬ, ತಿಗಣೆಗಳು, ಬೀಗ  ನಾಟಕಗಳನ್ನು ಬರೆದಿದ್ದಾರೆ. ಯುವಜನ ಮೇಳಗಳಲ್ಲಿ ಭಾವಗೀತೆ, ಲಾವಣ , ಗೀಗಿ ಪದ, ಸುಗ್ಗಿ ಹಾಡು, ನಾಟಕ  ಸ್ಪರ್ಧೆಗಳಲ್ಲಿ ತಾಲ್ಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಹಲವು ವರ್ಷ ಭಾಗವಹಿಸಿ ಬಹುಮಾನ  ಬಾಚಿದ್ದಾರೆ. ಈಗ ರಾಮಣ್ಣ ಹಾಸನ ತಾ. ಕಂಚಮಾರನಹಳ್ಳಿ ಗ್ರಾಮದ ವಾಸಿ. ನಾನು ಮೊಟ್ಟ ಮೊದಲ ಬಾರಿಗೆ ಕನ್ನಡ ಕಲಾ ಸಾಹಿತ್ಯ ವೇದಿಕೆ ನಾಟಕ ತಂಡ ಕಟ್ಟಿಕೊಂಡು ಕಂಚಮಾರನಹಳ್ಳಿಯಲ್ಲಿ ನಡೆದ ಹಾಸನ ತಾ. ಮಟ್ಟದ ಯುವಜನ ಮೇಳದಲ್ಲಿ ವರದಕ್ಷಿಣೆ ಭೂತ ನಾಟಕವಾಡಿಸಿದ್ದೆ. ರಾಮಣ್ಣ ತಂಡ ಪ್ರಥಮ, ದೊಡ್ಡಬೀಕನಹಳ್ಳಿ ತಂಡ 2ನೇ ್ತ ನಮ್ಮದು 3ನೇ ಸ್ಥಾನ. ಇಲ್ಲಿ ನೋಡಿ ಕಲಿತ ಅನುಭವದಿಂದ ನಾನೂ ಕೂಡ ಗೀಗಿ ಪದ, ಲಾವಣ , ಭಾವಗೀತೆ, ಸುಗ್ಗಿ ಹಾಡು ಮತ್ತು ಕುಂಟು ನಾಯಿ ಎಂಬ ನಾಟಕ ರಚಿಸಿ ಮತ್ತೇ ಕಟ್ಟಾಯದಲ್ಲಿ ಸ್ಪರ್ಧಿಸಿದಾಗಲೂ ಇದೇ ರಿಜಲ್ಟ್. ಆದರೆ ನನ್ನ ನಿರ್ದೇಶನದಲ್ಲಿ ಗೊರೂರಿನ ಹುಡುಗಿಯರು  ಹುಡುಕಾಟ ನಾಟಕ ಒಳಗೊಂಡು  10 ಸ್ಫರ್ದೆಗಳಲ್ಲಿ 6 ಪ್ರಥಮ ಉಳಿದ ನಾಲ್ಕು ದ್ವಿತೀಯ ಬಹುಮಾನ ಪಡೆದಿದ್ದರು. ಮುಂದೆ  ನಾನು ಬರೆದ ವ್ಯವಸ್ಥೆ ನಾಟಕಕ್ಕೆ ಬೆನ್ನುಡಿ ಬರೆದು ಕೊಟ್ಟಿದ್ದ ನಿವೃತ ತಹಸೀಲ್ದಾರ್ ಮತ್ತು ಭ್ರಷ್ಟಾಚಾರ ನಿರ್ಮೂಲನ ವೇದಿಕೆ ಅಧ್ಯಕ್ಷರಾಗಿದ್ದ ಮ.ಬ.ಚನ್ನಬಸಪ್ಪನವರು  ಸ್ಥಳೀಯ ದಿನಪತ್ರಿಕೆಗಳು  ಹಾಸನ ಪ್ರಭ, ಮುಂಜಾವುಗಳಲ್ಲಿ ನಮ್ಮಿಬ್ಬರ ಕಲಾಸೇವೆ ಕುರಿತ್ತಾಗಿ ಸುಧೀರ್ಘ ಲೇಖನ ಬರೆದಿದ್ದರು. 40 ವರ್ಷಗಳ ರಾಮಣ್ಣನವರ ನಿರಂತರ ಕಲಾ ಸೇವೆಗೆ  ಹತ್ತಾರು ಪ್ರಶಸ್ತಿಗಳು ಸಂದಿವೆ. 2014ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, 2020ರಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ರೈತ ಜೀವಿ, ನಾಟಕ ರತ್ನ, ಶ್ರಮ ಜೀವಿ, ಸಾಹಿತ್ಯ ಜೀವಿ ಬಿರುದು ದಕ್ಕಿವೆ. ಇವರ ಜೀವಿತಾವಧಿಯೂ ಕಲಾಸೇವೆಗಾಗಿಯೇ ಕಳೆದಿದೆ.


ಗೊರೂರು ಅನಂತರಾಜು, ಹಾಸನ.

9449462879.

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.

- Advertisement -
- Advertisement -

Latest News

ಸರ್ವರಿಗೂ ಸಮಬಾಳು, ಸಮಪಾಲು ನೀಡುವುದು ಕಾಂಗ್ರೆಸ್ – ಲಕ್ಷ್ಮಿ ಹೆಬ್ಬಾಳಕರ

ಮೂಡಲಗಿ - ನಮ್ಮ ಪಕ್ಷವು ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ತತ್ವದಡಿ ಕೆಲಸ ಮಾಡುತ್ತದೆ. ನಾವು ಐದೂ ಗ್ಯಾರಂಟಿಗಳನ್ನು ನೆರವೇರಿಸಿದ್ದೇವೆ. ಮಹಿಳಾ ಸಬಲೀಕರಣಕ್ಕೆ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group