spot_img
spot_img

ಸಹಿಷ್ಣುತೆಯಿಂದ ಬಾಳುವುದೇ ಭಾವೈಕ್ಯತೆ – ಎಸ್ ಕೆ ಬೆಳ್ಳುಬ್ಬಿ

Must Read

spot_img
- Advertisement -

ವಿಜಯಪುರ – ನಮ್ಮಗಳ ಧರ್ಮ ಯಾವುದಾದರೇನು ನಾವು ವಾಸಿಸುವ ನೆಲ ಭಾರತ. ನಾವೆಲ್ಲರೂ ಭಾರತೀಯರು ಎನ್ನುವ ಮನೋಭಾವನೆಯಿಂದ ಸರ್ವಜನಾಂಗದವರು ಸಹಿಷ್ಣುತಾ ಭಾವದಿಂದ ದೇಶದಲ್ಲಿ ಜೀವಿಸುವದೇ ಭಾವೈಕ್ಯತೆಯ ಸಂಕೇತವಾಗಬೇಕು ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಕೊಲ್ಹಾರ ಪಟ್ಟಣದ ಆಜಾದ ನಗರದಲ್ಲಿ ಕಾನಕಾಯೆ ಗಪಾರಿಯಾ ಗುರುಕುಲದ ಉರುಸು ನಿಮಿತ್ತವಾಗಿ ನಡೆದ 20ನೇ ಶತಮಾನದ ಸೂಫಿ ಸಂತ ಶ್ರೀಗುರು ಅಲ್ ಹಾಜ್ ಶಾಹಮಹಮ್ಮದ ಅಬ್ದುಲಗಫಾರಿ ಕಾದ್ರಿಯವರ 21ನೇ ಉರುಸಿನ ನಿಮಿತ್ತವಾಗಿ ನಡೆದ 24ನೇ ಸರ್ವ ಧರ್ಮ ಸದ್ಭಾವನಾ ಸಮಾರಂಭದಲ್ಲಿ ಮಾತನಾಡುತ್ತಿದ್ದರು.      

ಜಗತ್ತಿನಲ್ಲಿ ನಾಲ್ಕು ಯುಗಗಳ ಕಾಲಕ್ಕೆ ತಕ್ಕಂತೆ ಭೂಮಿಯ ಮೇಲೆ ಭಗವಂತನ ಅವತಾರವಾಗಿದ್ದು ಆತನ ಅನುಯಾಯಿಗಳಾಗಿ ಮನುಜಕುಲ ಒಂದೆ ಭಾವನೆ ತತ್ವದ ಅಡಿಯಲ್ಲಿ ನಾವುಗಳು ಜೀವಿಸಬೇಕು ಎಂದು ಕರೆ ಕೊಟ್ಟರು.

- Advertisement -

ರಾಜ್ಯಮಟ್ಟದ ಸರ್ವಧರ್ಮದ ಸದ್ಭಾವನಾ 19ನೇಯ ಅಲಹಾಬಾದ ಪ್ರತಿಷ್ಠಿತ ಮೌಲಾನಾ ಭಾವೈಕ್ಯತಾ ಪ್ರಶಸ್ತಿಯನ್ನು ಪ್ರಸಕ್ತ ಸಾಲಿನಲ್ಲಿ ಜಾನಪದ ವಿದ್ವಾಂಸ ಡಾ. ಶಂಭು ಬಳಿಗಾರ ಅವರಿಗೆ ಕೊಡಮಾಡಲು ನಿರ್ಧರಿಸಿದಂತೆ ಅವರ ಆರೋಗ್ಯದ ಸಮಸ್ಯೆಯಿಂದ ಅನುಪಸ್ಥಿತಿಯಲ್ಲಿ ಅವರ ಧರ್ಮ ಪತ್ನಿ ಶ್ರೀಮತಿ ಪ್ರೇಮಾ ಶಂಭು ಬಳಿಗಾರ ಪ್ರಶಸ್ತಿಯನ್ನು ಶ್ರೀಗಳ ಗಣ್ಯಮಾನ್ಯರ ಸಮ್ಮುಖದಲ್ಲಿ ಸ್ವೀಕರಿಸಿದರು.

ಲಾಲಾ ಹುಸೇನ ಕಲಾದಗಿ ಮಾತನಾಡಿ, ತಲೆತಲಾಂತರಗಳಿಂದ ಶರಣ ಸಂಪ್ರದಾಯ ಮತ್ತು ಸೂಫಿ ಸಂತರ ತತ್ವಸಿದ್ದಾಂತಗಳು ಮನುಜಕುಲದ ಉದ್ದಾರಕ್ಕಾಗಿಯೇ ಶ್ರಮಿಸಿದ್ದು ಅವರ ಗುರಿ ಹಿಂದೂ ಮುಸ್ಲಿಂ ಕ್ರೈಸ್ತ ಜೈನ ಭೌಧ್ದ ಇನ್ನಿತರ ಧರ್ಮ ಎನ್ನುವ ಭಾವ ಇರಲಿಲ್ಲ ಸರ್ವಧರ್ಮಿಯರು ಪರಸ್ಪರ ಅನ್ಯೋನ್ಯತೆಯಿಂದ ಮಾನವರಾಗಿ ಬದುಕುವದನ್ನು ನೋಡುವದಾಗಿತ್ತು ಅದರಂತೆ ಸಮಾಜದಲ್ಲಿ ನಾವು ನೀವುಗಳು ಬದುಕುವಾಗ ಅಕ್ಷರವಂತ ಜ್ಞಾನಿಗಳಿಂದಲೇ ಅಹಂ ಮತ್ತು ಅಹಂಕಾರ ಕೋಮುವಾದದ ಮನೋಭಾವ ಸೃಷ್ಟಿಯಾಗುತ್ತಿದ್ದು ಅಂತಹ ಘಟನೆಗಳು ನಡೆಯಬಾರದು ಎಂದರೆ ಯಾವುದೇ ಧರ್ಮದ ಮತಾಂಧ ವ್ಯಕ್ತಿಯಿಂದ ನಡೆಯುವ ಕೋಮುವಾದವನ್ನು ಹತ್ತಿಕ್ಕುವ ಕೆಲಸ ನಮ್ಮದಾಗಬೇಕು ಎಂದರು.

ಯರನಾಳದ ಸಂಗನಬಸವ ಶ್ರೀಗಳು ಮಾತನಾಡಿ ಸಾಮಾಜಿಕ ಕ್ಷೇತ್ರದಲ್ಲಿ ಬದುಕುವ ಜೀವಿಗಳಲ್ಲಿ ವಿವಿಧತೆ ಇದ್ದರೂ ವಿವಿಧ ಧರ್ಮದವರಾಗಿದ್ದರೂ ಏಕತಾ ಮನೋಭಾವನೆಯಿಂದ ಐಕ್ಯತೆಯ ಸಂದೇಶವನ್ನು ವಿಶ್ವಕ್ಕೆ ತೋರಿಸಿದ ಭಾರತೀಯ ಸಂಸ್ಕೃತಿ ಜಗತ್ತಿಗೆ ಮಾದರಿಯಾಗಿದ್ದು ಆದರೆ ರಾಜಕಾರಣಿಗಳ ಸ್ವಾರ್ಥ ಹಿತಾಸಕ್ತಿಯಿಂದ ಇಂದಿನ ದಿನಮಾನಗಳಲ್ಲಿ ಜಾತಿಗೊಬ್ಬ ಗುರು ಕುಲಕ್ಕೊಬ್ಬ ಹಿರಿಯನನ್ನು ನೇಮಕಮಾಡಿ ಮಾನವಜನಾಂಗವನ್ನು ಬೇರ್ಪಡಿಸಿ ತಮ್ಮಗಳ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

- Advertisement -

ಬೇಲೂರ ಹಿರೇಮಠದ ಪ್ರಭುಕುಮಾರ ಶಿವಾಚಾರ್ಯರು ಮಾತನಾಡಿ, ಭೂತ ಮತ್ತು ಭವಿಷತ್‌ಕಾಲದ ಬಗ್ಗೆ ಒಂದಿಷ್ಟು ಚಿಂತನೆ ಮಾಡದೇ ಮೂಢನಂಬಿಕೆಯನ್ನು ಹೋಗಲಾಡಿಸಿ ವರ್ತಮಾನ ಕಾಲದಲ್ಲಿ ಸಾಧ್ಯವಿಲ್ಲ ಎನ್ನುವದನ್ನು ಸಾಧ್ಯವಾಗಿಸುವ ವ್ಯಕ್ತಿಗಳೆಂದರೆ ಶರಣರು  ಸಂತರು ದಾರ್ಶನಿಕರು ಹಾಗೂ ಸೂಫಿ ತತ್ವವನ್ನು ನಂಬಿ ಜೀವನ ನಡೆಸುವವರು ಅವರ ಉದ್ದೇಶ ಮನುಜ ಮತ ವಿಶ್ವ ಪಥ ಎಂದು ತಿಳಿಸಲು ಸದಾಕಾಲ ದೇಶ ಸಂಚಾರ ಮಾಡಿ ಸರ್ವ ಭಕ್ತರಲ್ಲಿ ತಮ್ಮ ಚಿಂತನೆಯ ಪಾಠವನ್ನು ಬೋಧಿಸುವ ಶ್ರೇಷ್ಠ ವ್ಯಕ್ತಿಗಳಾಗಿದ್ದವರು, ಸೂಫಿ ಎಂದರೆ ಪಾರ್ಶಿ ಭಾಷೆ ಸಂತ ಎಂದರೆ ಸಂಸ್ಕೃತಭಾಷೆ ಎರಡೂ ಸೇರಿ ಸೂಫಿ ಸಂತ ಹೆಸರು ಬಂದಿರುವದೇ ಮಾನವಕುಲ ಸಾಮರಸ್ಯದ ಜೀವನ ಸಾಗಿಸಲಿ ಎನ್ನುವದೇ ಆಗಿತ್ತು ಎಂದು ಹೇಳಿದರು.

ಯುವ ವಾಗ್ಮಿ ಸಲೀಂ ಅತ್ತಾರ ಮಾತನಾಡಿ, ಸೂಫಿಗಳು ತನುವಿನಲ್ಲಿ ನಿರ್ಮೋಹಿಗಳಾಗಿ ಮನದಲ್ಲಿ ನಿರಂಹಕಾರಿಗಳಾಗಿ ಪ್ರಾಣದಲ್ಲಿ ನಿರ್ಭಯರಾಗಿ ಚಿತ್ತದಲ್ಲಿ ನಿರಪೇಕ್ಷಿಗಳಾಗಿ ವಿಷಯಗಳಲ್ಲಿ ಉದಾಸೀನ ರಾಗಿ ಭಾವದಲ್ಲಿ ದಿಗಂಬರ ರಾಗಿ ಜ್ಞಾನದಲ್ಲಿ ಪರಮಾನಂದ ಭರಿತರಾಗಿ ಮನದ ವಿಕಾರಗಳನ್ನೆಲ್ಲ ಜಯಿಸಿ ಫಕೀರರಾಗಿ ದೇಶ ಸಂಚಾರ ಕೈಗೊಳ್ಳುವ ಮಹಾನ್ ಸಂತರು ಅಂತಹ ಸೂಫಿ ಪರಂಪರೆಯಲ್ಲಿ ಇಪ್ಪತ್ತನೇ ಶತಮಾನದ ಸೂಪಿಸಂತರಾದ ಹಜರತ್ ಶಾಹ್ ಮೊಹಮ್ಮದ್ ಅಬ್ದುಲ್ ಗಫಾರ್ ಖಾದ್ರಿಯವರ ಕೊಡುಗೆ ಅಪಾರವಾಗಿದೆ ಎಂದರು.

ಅಧ್ಯಕ್ಷತೆಯನ್ನು ಖಾನಕಾಯೆ ಗಫಾರಿಯಾ ಆಶ್ರಮದ ಪೀಠಾಧಿಕಾರಿ ಡಾ. ಭಕ್ತಿಯಾರಖಾನ ಕಾದ್ರಿ ವಹಿಸಿದ್ದರು ಖ್ಯಾತ ಸಂಶೋಧಕ ಡಾ. ಕೃಷ್ಣಕೊಲ್ಹಾರ ಕುಲಕರ್ಣಿ, ಚಂದ್ರಶೇಖರಯ್ಯ ಗಣಕುಮಾರ, ನಂದಬಸಪ್ಪ ಚೌದರಿ, ಉಸ್ಮಾನಸಾಬ ಪಟೇಲ, ಈರಣಗೌಡ ಕೋಮಾರ, ಮಲ್ಲು ದೇಸಾಯಿ ರೋಣಿಹಾಳ, ಈರಣ್ಣ ಔರಸಂಗ, ಬಿ.ಎಸ್.ಹಂಗರಗಿ, ಇಸ್ಮಾಯಿಲಸಾಬ ತಹಶೀಲ್ದಾರ, ಬಿ.ಡಿ.ಕಲಾದಗಿ, ಹಟೇಲಸಾಬ ಕಂಕರಪೀರ, ಪಟ್ಟಣ ಪಂಚಾಯತ ಸದಸ್ಯರಾದ ಬಾಬು ಭಜಂತ್ರಿ, ತೌಶೀಪ ಗಿರಗಾಂವಿ, ದಸ್ತಗೀರ ಕಲಾದಗಿ, ಎಂ.ಆರ್.ಕಲಾದಗಿ ಪ್ರಮುಖರು ಆಗಮಿಸಿದ್ದರು. ಜಿಯಾಉಲ್‌ಖಾನ ಕುರಾನ ಪಠಿಸಿದರು, ನೌಶಾದ ಡಾಂಗೆ ನಾಥ ಹೇಳಿದರು. ಕುದಾತಖಾನ್ ಪಠಾಣ ಸ್ವಾಗತಿಸಿದರು. ಅಯುಬಖಾನ ಪಠಾಣ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ ಬ. ಗಣಿ ನಿರೂಪಿಸಿದರು. ಸಭೆಯಲ್ಲಿ ಗಣ್ಯಮಾನ್ಯರನ್ನು ಗೌರವಿಸಲಾಯಿತು.

- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group