ಸಿಂದಗಿ: ಭಾಜಪ ಪಕ್ಷದ ಮಂಡಲ ನೂತನ ಅಧ್ಯಕ್ಷರಾಗಿ ತಾಲೂಕಿನ ಡಂಬಳ ಗ್ರಾಮದ ದಿ. ಮಾಜಿ ಜಿಪಂ ಸದಸ್ಯ ಶಂಕರಗೌಡ ಪಾಟೀಲ ಅವರ ಸುಪುತ್ರ ಸಂತೋಷ ಪಾಟೀಲರು ಆಯ್ಕೆಯಾಗಿದ್ದಾರೆ.
ಅವರಿಗೆ ತಾಲೂಕಿನ ಪಂಚಮಸಾಲಿ ಸಮಾಜವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ನಂತರ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ ಮಾತನಾಡಿ, ಸಮಾಜದ ಅಭಿವೃದ್ಧಿಗೆ ನಾನು ಯಾವುದೇ ಪಕ್ಷದಲ್ಲಿದ್ದರು ಕೂಡ ಹೋರಾಟದ ಮುಂಚೂಣಿಯಲ್ಲಿರುತ್ತೇನೆ. ಭಾಜಪ ಪಕ್ಷದ ಪ್ರಪ್ರಥಮ ಅಧ್ಯಕ್ಷರಾಗಿ ದಿವಂಗತ ಸುಬಾಷಗೌಡ ಪಾಟೀಲ, ಈರಣ್ಣ ಪಡೆಕನೂರ ನಂತರ ಪಂಚಮಸಾಲಿ ಸಮಾಜದ ಮೂರನೇಯವನಾಗಿ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೇನೆ ಪಕ್ಷದ ತತ್ವಸಿದ್ದಾಂತದಂತೆ ಕಾರ್ಯನಿರ್ವಹಿಸುತ್ತೇನೆ ನಿಮ್ಮೆಲ್ಲರ ಸಹಕಾರ ಇರಲಿ ಎಂದರು.
ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಮಾತನಾಡಿ, ಸಮಾಜದಲ್ಲಿ ಯಾವುದೇ ಪಕ್ಷದ ಸ್ಥಾನ ಪಡೆದುಕೊಂಡರೆ ಶುಭ ಹಾರೈಸುವುದು ಸಮಾಜದ ಆದ್ಯ ಕರ್ತವ್ಯವಾಗಿದೆ. ಸಮಾಜಕ್ಕೆ ಅನ್ಯಾಯವಾದಾಗ ಯಾವುದೇ ಪಕ್ಷದಲ್ಲಿದ್ದರು ಹೋರಾಟಕ್ಕೆ ಸಹಕಾರ ನೀಡಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವ್ಹಿ.ಬಿ.ಕುರುಡೆ ಮಾತನಾಡಿ, ದಿ.ಶಂಕರಗೌಡ ಪಾಟೀಲರು ನೇರ ನಿಷ್ಠುರ ರಾಜಕಾರಣಿ ಅವರಂತೆ ಸಂತೋಷ ಪಾಟೀಲರಿಗೆ ಭಾಜಪ ಪಕ್ಷ ಮಂಡಲ ಅಧ್ಯಕ್ಷ ಸ್ಥಾನ ನೀಡಿದ್ದು ಸ್ವಾಗತಾರ್ಹ ಇವರು ತಾಲೂಕಿನ ಶಾಸಕನಾಗಿ ಆಯ್ಕೆಯಾಗುವುದು ನನ್ನ ಕೊನೆಯಾಸೆ ಆಗಿದೆ ಸಮಾಜದ ಸಹಕಾರ ಇದ್ದೇ ಇರುತ್ತದೆ ಎಂದು ಅಭಿಮತ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಆನಂದ ಶಾಬಾದಿ, ಮೀಸಲಾತಿ ಹೋರಾಟ ಸಮಿತಿ ಅದ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಕಸಾಪ ಅಧ್ಯಕ್ಷ ಶಿವು ಬಡಾನುರ, ಗುರು ಬಸರಕೋಡ, ಆರ್.ಆರ್.ಪಾಟೀಲ, ಶ್ರೀಶೈಲ ಚಳ್ಳಗಿ, ರುದ್ರಗೌಡ ಬಿರಾದಾರ, ಶಿವು ಸಬರದ ಸೇರಿದಂತೆ ಅನೇಕರಿದ್ದರು.