ಸಿಂದಗಿ: ಪ್ರತಿ ಮಗುವಿನಲ್ಲಿ ಪ್ರತಿಭೆ ಇದ್ದೆ ಇರುತ್ತದೆ. ಆ ಪ್ರತಿಭೆಯನ್ನು ಪ್ರಾಮಾಣಿಕತೆಯಿಂದ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿರುವುದು ಆದ್ಯ ಕರ್ತವ್ಯವಾಗಿದೆ ಎಂದು ಶಿಕ್ಷಕ ಮಕ್ಕಳ ಸಾಹಿತಿ ಬಸವರಾಜ ಅಗಸರ ಹೇಳಿದರು.
ತಾಲೂಕಿನ ಬ್ಯಾಕೋಡ ಗ್ರಾಮದ ಶಿಕ್ಷಕ ಅನಿಲ ಚೋರಗಸ್ತಿ ಅವರು ಪುತ್ರಿ ಅರ್ಚನ ಚೋರಗಸ್ತಿ ಅವಳು ಸೈನಿಕ ಶಾಲೆಯ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಆಯ್ಕೆಯಾಗಿರುವ ನಿಮಿತ್ತ ಅವರ ಸದನದಲ್ಲಿ ಕುಮಾರಿ ಅರ್ಚನಗೆ ಅವರು ಸನ್ಮಾನಿಸಿ ಗೌರವಿಸಿ ಮಾತನಾಡಿ, ವಿದ್ಯಾರ್ಥಿಗೆ ಸಹಾಯ ಮಾಡಿದರೆ ಅದು ಮತ್ತೊಬ್ಬರಿಗೆ ಗೊತ್ತಾಗ ಬಾರದು ಮಕ್ಕಳು ಉತ್ತಮ ಗುರಿಯಲ್ಲಿ ಸಾಗಬೇಕು. ನಾವು ಕಲಿತಿದ್ದನ್ನು ಇನ್ನೊಬ್ಬರಿಗೆ ಕಲಿಸಬೇಕು. ವಿದ್ಯೆ ನಿರಂತರವಾಗಿ ಹರಿಯಬೇಕು ಸಮಾಜದಲ್ಲಿ ಪ್ರತಿಭೆ ಇರುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ ಎಂದರು.
ಶಿಕ್ಷಕ ಸಾಹಿತಿ ಗುಂಡಣ್ಣ ಮೋರಟಗಿ ಮಾತನಾಡಿ, ಮಕ್ಕಳ ಪ್ರತಿಭೆ ಗುರುತಿಸಿ ಅವರನ್ನು ಪ್ರೋತ್ಸಾಹಿಸಬೇಕು.ತಮ್ಮ ಮಕ್ಕಳು ಯಾವ ವಿಷಯದಲ್ಲಿ ಹೆಚ್ಚು ಆಸಕ್ತಿ ತೋರುತ್ತಾರೋ ಅತ್ತ ಪೋಷಕರು ಒತ್ತು ನೀಡಬೇಕು. ಅವರಿಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡುವುದು ಪೋಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಚಿತ್ರಕಲಾ ಶಿಕ್ಷಕ ಶ್ರೀನಾಥ ಚೋರಗಸ್ತಿ, ಶ್ರೀಮತಿ ವಿಜಯಲಕ್ಷ್ಮೀ ಅನಿಲ ಚೋರಗಸ್ತಿ, ಶಿಕ್ಷಕ ಅನೀಲ ಚೋರಗಸ್ತಿ ಇದ್ದರು.