Homeಸುದ್ದಿಗಳುಸ್ಲಂ ಎರಿಯಾ ಬಡ ಜನರಿಗೆ ಸೂರು ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಮನವಿ

ಸ್ಲಂ ಎರಿಯಾ ಬಡ ಜನರಿಗೆ ಸೂರು ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಮನವಿ

ಸಿಂದಗಿ: ವಾರ್ಡ 13 ರಲ್ಲಿರುವ ಸ್ಲಂ ಏರಿಯಾ ಬಡ ಜನರಿಗೆ ಸೂರು ಕಲ್ಪಿಸಿ ಕೊಡುವಂತೆ ಆಗ್ರಹಿಸಿ ಭಾಜಪ ಕಾರ್ಯಕರ್ತರ ನೇತೃತ್ವದಲ್ಲಿ ಸ್ಲಂ ನಿವಾಸಿಗಳು ಪ್ರತಿಭಟನೆ ನಡೆಸಿ ತಹಶೀಲ್ದಾರ ಕಾರ್ಯಾಲಯದ ಉಪ ತಹಶೀಲ್ದಾರ ಇಂದಿರಾಬಾಯಿ ಬಳಗಾನೂರ ಅವರ ಮೂಲಕ ಜಿಲ್ಲಾದಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಭಾಜಪ ಮಂಡಲ ಅಧ್ಯಕ್ಷ  ಸಂತೋಷ ಪಾಟೀಲ ಡಂಬಳ ಮಾತನಾಡಿ, ವಾರ್ಡ ನಂ-13 ನಲ್ಲಿರುವ ಸ್ಲಮ್ ಏರಿಯಾದಲ್ಲಿ ಸುಮಾರು ವರ್ಷಗಳಿಂದ ತುಂಬಾ ಕಡು ಬಡವ ದಲಿತರು ಮತ್ತು ಅಲ್ಪಸಂಖ್ಯಾತರು ಜನರು ಸುಮಾರು 45 ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದು ಜೀವನ ಸಾಗಿಸುತ್ತ ಬದುಕು ಕಟ್ಟಿಕೊಳ್ಳುತ್ತಿದ್ದಾರೆ ಅವರಿಗೆ ಬೇರೆ ಕಡೆ ಸೂರು ಕಲ್ಪಿಸಿಕೊಟ್ಟು ಸ್ಥಳಾತರಿಸಬೇಕು ಹಾಗೂ ಸ್ಲಂ ಜನರಿಗೆ ಸೂರು ಕಲ್ಪಿಸುವವರೆಗೆ ಅಲ್ಲಿಯೇ ಇರಲು ತಾವುಗಳು ಅವಕಾಶ ಮಾಡಿ ಕೊಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸಿದ್ದು ಬುಳ್ಳಾ, ಶ್ರೀಶೈಲ ಚಳ್ಳಗಿ, ಮಹಾಂತೇಶ ಸಾತಿಹಾಳ, ಪೀರು ಕೇರೂರ, ವಿಠ್ಠಲ ನಾಯ್ಕೋಡಿ, ಪ್ರಶಾಂತ ಕದ್ದರಕಿ, ಶಮೀರ ಬಿಜಾಪುರ, ಮಲ್ಲು ಪೂಜಾರಿ, ಮಡು ಬೋನಾಳ, ಸಾಯಬಣ್ಣ ದೇವರಮನಿ, ರಮೇಶ ರತ್ನಾಕರ,  ಮಲ್ಲಪ್ಪ ಜಾಲವಾದಿ, ಸಂಜೀವ ಹೋಳಿ, ಅಮೀನ ಬಡಿಗೇರ, ಚಂದ್ರಶೇಖರ ಮಡಿವಾಳರ, ರಜಾಕ ತಾಂಬೋಳಿ, ಯಮನಾಬಾಯಿ ತಿಳಗೂಳ, ಮಾಬು ಗಿರಣಿ, ಅನ್ನಪೂರ್ಣ ಪಟ್ಟಣಶೆಟ್ಟಿ, ಮುನ್ನಿಯಪ್ಪ ಆಕಳಂದ, ರೇಣುಕಾ ತಳವಾರ, ಮೈರೂನ ಮಣೂರ, ರೇಣುಕಾ ಮಾದರ, ಕಾಂತಮ್ಮ ಚಾಂದಕವಠೆ, ಲಕ್ಷ್ಮೀ ಮಾದರ ಸೇರಿದಂತೆ ನೂರಾರು ಸ್ಲಂ ನಿವಾಸಿಗಳು ಇದ್ದರು.

RELATED ARTICLES

Most Popular

error: Content is protected !!
Join WhatsApp Group