spot_img
spot_img

ಬೆಂಗಳೂರು ಮಹಾನಗರ ಪಾಲಿಕೆ ದಕ್ಷಿಣ ವಲಯದ ಪಾಲಿಕೆ ಶೌಚಾಲಯ ಅವ್ಯವಸ್ಥೆಯ ಆಗರ

Must Read

- Advertisement -

ಬೆಂಗಳೂರು ಮಹಾನಗರ ಪಾಲಿಕೆಯ ತುಷಾರ್ ಗಿರಿನಾಥ್, ಐಎಎಸ್ ಅವರಿಗೆ ಪರಿಸರ ಪ್ರೇಮಿ ತೀರ್ಥಹಳ್ಳಿ ಅನಂತ ಕಲ್ಲಾಪುರ ಅವರ ಪತ್ರ

ಮಾನ್ಯರೆ, ಬೆಂಗಳೂರಿನ ದಕ್ಷಿಣ ವಲಯದಲ್ಲಿ ಇರುವ ( ಜಂಟಿ ಆಯುಕ್ತರ ಕಚೇರಿ ಜಗದೀಶ್ ಕೆ) 9ನೇ ಮೇನ್, 9ನೇ ಕ್ರಾಸ್, 2ನೇ ಬ್ಲಾಕ್ ಜಯನಗರ, ಬೆಂಗಳೂರು 5600119901462568, 22975701
bbmpgmail.com

ನಾನು ಇಲ್ಲಿಗೆ ಕೆಲಸದ ನಿಮಿತ್ತ ಜುಲೈ 11 ರಂದು ಹೋದಾಗ ಅಲ್ಲಿ ಕಛೇರಿ ಹಿಂಭಾಗದಲ್ಲಿ ಇರುವ ಹಾಗೂ ಬಿ.ಬಿ.ಎಂ.ಪಿ .ಗೆ ಸಂಬಂಧ ಪಟ್ಟ ಕಟ್ಟಡದಲ್ಲಿ ಇರುವ ಶೌಚಾಲಯಕ್ಕೆ ಮೂತ್ರ ವಿಸರ್ಜನೆ ಮಾಡಲು ಹೋದಾಗ ಶೌಚಾಲಯ ತನ್ನ ಕಥೆ ಹಾಗೂ ದುಃಖ ವನ್ನು ಹೇಳುತ್ತಾ ನನ್ನ ಬಳಿ ಅದರ ವ್ಯಥೆ ಯನ್ನು ನನ್ನ ಬಳಿ ತಿಳಿಸಿ ಇಲ್ಲಿ ಬಂದು ಮೂತ್ರ ವಿಸರ್ಜನೆ ಮಾಡುವವರಿಗೆ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಹೆಚ್ಚು ಇರುತ್ತದೆ ಹಾಗೂ ಯುರಿನಲ್ ಮಾಡುವ ಜಾಗದಲ್ಲಿ ಸೊಂಕು ತಗಲುವುದು ಖಚಿತ ಎಂದು ಅದರ ಭಾವನೆ ವ್ಯಕ್ತಪಡಿಸಿತ್ತು ಆಗ ನನಗೆ ಬಹಳ ದುಃಖವಾಗಿ ಅದರ ಭಾವನೆಗಳನ್ನು ಪದಗಳ ಮೂಲಕ ನಿಮಗೆ ಪತ್ರಿಕೆಯ ಮೂಲಕ ಪತ್ರ ಬರೆಯುತ್ತಾ ಇದ್ದೇನೆ.

- Advertisement -

ಮಹಾನಗರ ಪಾಲಿಕೆಯ ಶೌಚಾಲಯ ದ ಕಥೆಯೇ ಹೀಗಾದರೆ ನಗರದ ತುಂಬಾ ಇರುವ ಶೌಚಾಲಯ ಗಳನ್ನು ಮಹಾನಗರ ಪಾಲಿಕೆ ಹೇಗೆ ನಿಭಾಯಿಸುತ್ತದೆ… ಅರ್ಥಾತ್ ನಗರದ ಸ್ವಚ್ಛತೆ ಹೇಗೆ ಎಂಬುದು ನನ್ನ ಮನದಲ್ಲಿ ಮೂಡಿದ ಮಿಲಿಯನ್ ಡಾಲರ್ ಪ್ರಶ್ನೆ !

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮಾರುಕಟ್ಟೆ ಯ ಒಂದನೇ ಮಹಡಿ ಯಲ್ಲಿ ಇರುವ ವರು ತಿಂಗಳಿಗೆ 1350 ರೂ ಬಾಡಿಗೆ ಕಟ್ಟುತ್ತಾರೆ ಆ ಹಣದಲ್ಲಿ ಕಟ್ಟಡದಲ್ಲಿ ಇರುವ ಶೌಚಾಲಯ ಸ್ವಚ್ಛತೆ ಬಗ್ಗೆ ಮಹಾನಗರ ಪಾಲಿಕೆ ಮನಸ್ಸು ಮಾಡಲಿ. ಏಕೆಂದರೆ ಅಂದಾಜು 75 ಸಾವಿರ ರೂಪಾಯಿ ಬಾಡಿಗೆ ಸಂಗ್ರಹ ಆಗುತ್ತದೆ ಎನ್ನುತ್ತಾರೆ ಕಟ್ಟಡದಲ್ಲಿ ಬಾಡಿಗೆಗೆ ಇರುವ ಬಾಡಿಗೆದಾರರು …
ಅದೆಲ್ಲ ಇರಲಿ, ಈಗ ಪ್ರಸುತ್ತ ಇರುವ ವಿಷಯಕ್ಕೆ ಬರೋಣ

- Advertisement -

ಶೌಚಾಲಯದ ಕಥೆ ಹಾಗೂ ಮಹಾನಗರ ಪಾಲಿಕೆಯ ಕಟ್ಟಡದ ವ್ಯಥೆ ಬೆಂಗಳೂರು ಮಹಾನಗರ ಪಾಲಿಕೆ
ದಕ್ಷಿಣ ವಲಯದ ಪಾಲಿಕೆ ( ಶೌಚಾಲಯ ) ಅವ್ಯವಸ್ಥೆಯ ಆಗರ

ಬೆಂಗಳೂರು: ಜಯನಗರ: ಬಿ.ಬಿ.ಎಂ.ಪಿ ಕಟ್ಟಡದ ಹಿಂಭಾಗದಲ್ಲಿ ಇರುವ ಮೊದಲನೇ ಮಹಡಿ ಯಲ್ಲಿ ಇರುವ ಮೂತ್ರ ವಿಸರ್ಜನೆ ಘಟಕ ದುರ್ವಾಸನೆ ಯಿಂದ ಕೂಡಿದ್ದು ಅಲ್ಲಿ ಮೂತ್ರ ವಿಸರ್ಜನೆ ಮಾಡಲು ಹೋದವರಿಗೆ ಸೋಂಕು ತಗಲುವುದು ಖಚಿತ. ಇದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ, 9ನೇ ಮೇನ್, 9ನೇ ಕ್ರಾಸ್, 2ನೇ ಬ್ಲಾಕ್ ಜಯನಗರ, ಬೆಂಗಳೂರು – ದಕ್ಷಿಣ ವಲಯದ ಬೃಹತ್ ಕೊಡುಗೆ.

ಶೌಚಾಲಯದ ಕಮೋಡುಗಳನ್ನು ವೈಟ್ ಸಿಮೆಂಟ್ ನಿಂದ ತಾತ್ಕಾಲಿಕವಾಗಿ ಪ್ಲಾಸ್ಟರ್ ಮಾಡಲಾಗಿದ್ದು , ಅದನ್ನು ಸರಿಯಾದ ರೀತಿಯಲ್ಲಿ ಬೋಲ್ಟ್ ಮತ್ತು ನಟ್ ಹಾಕಿ ಗೋಡೆಯ ಒಳಭಾಗದಲ್ಲಿ ಜೋಡಿಸಲಾಗಿಲ್ಲ, ಮೇಲ್ಭಾಗದಲ್ಲಿ ಇರುವ ನೀರಿನ ಸಂಪರ್ಕ ಕಲ್ಪಿಸುವ ಪೈಪ್ ನಿಂದ ಕಮೋಡಿನ ಒಳಗೆ ನೀರು ಸರಿಯಾಗಿ ಬರುವುದಿಲ್ಲ ಹಾಗೂ ಅಲ್ಲಿ ಬರುವ ಗಬ್ಬು ವಾಸನೆ ಮೂಗಿಗೆ ಬಡಿಯುವ ಜೊತೆ ಜೊತೆಗೆ ಮೂತ್ರ ವಿಸರ್ಜನೆ ಮಾಡುವಾಗ ಕೈ ಕಾಲಿನ ಮೇಲೆ ಕಮೋಡು ಯಾವಾಗ ಬೇಕಾದರೂ ಬೀಳಬಹುದು ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ.

ಪ್ರತಿ ನಿತ್ಯ ಶೌಚಲಾಯದ ಸ್ವಚ್ಛತೆ ಮಾಡದೆ ಇರುವ ಸಿಬ್ಬಂದಿ. ದಕ್ಷಿಣ ವಲಯದ ಬೆಂಗಳೂರು ಮಹಾನಗರ ಪಾಲಿಕೆ, 9ನೇ ಮೇನ್, 9ನೇ ಕ್ರಾಸ್, 2ನೇ ಬ್ಲಾಕ್ ಜಯನಗರ, ಬೆಂಗಳೂರು, ಮಹಾನಗರ ಪಾಲಿಕೆಯದೇ ಕಟ್ಟಡ ಹಾಗೂ ಅವರದ್ದೇ ಜವಾಬ್ದಾರಿ ಸ್ವಚ್ಛತೆಯ ನಿರ್ವಹಣೆ. ಆದರೆ ಬಿ.ಬಿ.ಎಂ.ಪಿ ಕಛೇರಿ ಯ ಹಿಂಭಾಗದಲ್ಲಿ ಇರುವ ಮೊದಲನೇ ಮಹಡಿಯಲ್ಲಿ ಸ್ವಚ್ಛತೆ ಮರೀಚಿಕೆ ಆಗಿದ್ದು. ಶೌಚಾಲಯದಲ್ಲಿ ಮೂತ್ರ ವಿಸರ್ಜನೆ ಮಾಡಿದರೆ ಸೊಂಕು ತಗಲುವುದು ಖಚಿತ ಶೌಚಾಲಯದ ಗೋಡೆಗೆ ಹಾಗೂ ಕೆಳಭಾಗದಲ್ಲಿ ಗುಟ್ಕಾ ತಿಂದು ಉಗಿದಿದ್ದಾರೆ ಕೆಲವು ಮಹಾನ್ ಚೇತನಗಳು ಹಾಗೂ ಶೌಚಾಲಯದ ತುಂಬಾ ಸಿಗೆರೆಟ್ ಸೇದಿ ಎಸೆದಿದ್ದಾರೆ ಇನ್ನೂ ಕೆಲವು ಚೇತನಗಳು!

ಇವೆಲ್ಲರ ನಡುವೆ ಲ್ಯಾಟ್ರಿನ್ ಮಾಡುವ ಟಾಯ್ಲೆಟ್ ನ ಕೆಳಭಾಗದಲ್ಲಿ ಬಿರುಕು ಬಿಟ್ಟಿದ್ದು ನೀರು ತುಂಬುವ ಉಪಕರಣ ಹಾಳಾಗಿಹೋಗಿದ್ದು , ಅದರ ಮೇಲ್ ಭಾಗದ ಮುಚ್ಚಲು ಇರುವ ಮುಚ್ಚಳವೆ ಇಲ್ಲ. ಇದು ದಕ್ಷಿಣ ವಲಯ ಮಹಾನಗರ ಪಾಲಿಕೆಯ ಅವವ್ಯಸ್ಥೆಯ ಕಥೆ. ಮೂತ್ರ ವಿಸರ್ಜನೆ ಮಾಡಲು ಹೋದ ಜನರ ವ್ಯಥೆ ಹೇಳತೀರದು.

ಮಹಾನಗರ ಪಾಲಿಕೆಯಲ್ಲಿಯೇ ಸ್ವಚ್ಛತೆ ಇಲ್ಲದೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಬೆಂಗಳೂರು ನಗರವನ್ನು ಮಹಾನಗರ ಪಾಲಿಕೆ ಸ್ವಚ್ಛವಾಗಿ ಇಟ್ಟಿಕೊಳ್ಳುವುದೇ ಎಂಬುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ.

ತುರ್ತುಪರಿಸ್ಥಿತಿ ದ್ವಾರ ಕ್ಕೆ ಅಡ್ಡಲಾಗಿ ಮರದ ಬಾಗಿಲು ಇಟ್ಟು ಮುಚ್ಚಿದ್ದು ಯಾಕೆ ?

ಬಿ.ಬಿ .ಎಂ.ಪಿ ಕಚೇರಿಯಲ್ಲಿ ತುರ್ತುಪರಿಸ್ಥಿತಿಯಲ್ಲಿ ಬಳಸಲು ಮುಂಬಾಗಿಲು ಹಾಗೂ ಹಿಂಬಾಗಿಲು ಇರುತ್ತದೆ. ಅಂದರೆ ಅಗ್ನಿ ಅವಘಡಗಳು ಹಾಗೂ ಎಲೆಕ್ಟ್ರಿಕಲ್ ಶಾರ್ಟ್ ಸರ್ಕುಟ್ ಆದಾಗ ತುರ್ತುಪರಿಸ್ಥಿತಿ ಯಲ್ಲಿ ಬಳಸಲು ಬಾಗಿಲುಗಳು ಇರುತ್ತವೆ, ಆದರೆ ಮೊದಲನೇ ಮಹಡಿಯಲ್ಲಿ ಇರುವ ಶೌಚಾಲಯದ ಪಕ್ಕದಲ್ಲಿ ಇರುವ ಬಾಗಿಲು ಮುಚ್ಚಲ್ಪಟ್ಟಿದ್ದೆ ಅಗ್ನಿ ದುರಂತ ಅಥವಾ ಎಲೆಕ್ಟ್ರಿಕಲ್ ಶಾರ್ಟ್ ಸರ್ಕುಟ್ ಸಂಭವಿಸುವ ಮುನ್ನ ಹಿಂಬದಿಯಲ್ಲಿ ಇರುವ ತುರ್ತುಪರಿಸ್ಥಿತಿ ಬಾಗಿಲು ತೆಗೆಯುವ ಮನಸ್ಸು ಮಹಾನಗರ ಪಾಲಿಕೆ ಮಾಡುವುದೇ ??

ಬಿ.ಬಿ .ಎಂ.ಪಿ ಕಚೇರಿಯ ಒಂದನೇ ಮಹಡಿಯಲ್ಲಿ ಸರಿಯಾದ ರೀತಿಯಲ್ಲಿ  ಶೌಚಾಲಯ ನಿರ್ಮಾಣ ಆಗಿಲ್ಲ. ಶೌಚಾಲಯ ನಿರ್ಮಾಣ ಸರಿಯಾಗಿ ಕೆಲಸ ಮಾಡದವರಿಗೆ, ಬಿಲ್ ಪಾವತಿ ಮಾಡಲಾಗಿದೆಯೇ ? ಅಥವಾ ಮಾಡಿಲ್ಲವೇ ? ಬಿಲ್ ಪಾಸ್ ಮಾಡಿದ್ದರೆ , ಅದು ಹೇಗೆ ಪಾಸ್ ಮಾಡಿದ್ದೀರಾ? ನೀವು ನೋಡಿದ್ದೀರಾ ಕೆಲಸ ಯಾವ ರೀತಿಯಲ್ಲಿ ಮಾಡಿದ್ದಾರೆ ಎಂದು ? ಬಿಲ್ ಪಾಸ್ ಆಗಿದ್ದರೆ , ಸರಿಯಾಗಿ ಕೆಲಸ ಮಾಡದೆ ಇರುವ ಗುತ್ತಿಗೆದಾರರಿಗೆ ಹಣವನ್ನು ಹೇಗೆ ಕೊಡಲಾಗಿದೆ ಎಂದು ತಿಳಿಸಿ , ಮಹಾನಗರ ಪಾಲಿಕೆ, ದಕ್ಷಿಣ ವಲಯ ಕಛೇರಿ ಮುಂಭಾಗದಲ್ಲಿ ನಾಮಫಲಕ ದ ಮೇಲ್ ಭಾಗದಲ್ಲಿ ಇರುವ ಗಾಜಿನ ಕಿಟಕಿ ಯ ಕಂಬಿ ಮುರಿದು ಹೋಗಿದೆ ಹಾಗೂ ಒಂದನೇ ಮಹಡಿಯಲ್ಲಿ ಇರುವ ಮೂತ್ರ ವಿಸರ್ಜನೆ ಮಾಡುವ ಘಟಕ ದ ಸಮೀಪ ಸ್ವಿಚ್ ಬೋರ್ಡು ಇದ್ದು ಶೌಚಾಲಯದಲ್ಲಿ ವಿದ್ಯುತ್ ದೀಪಗಳು ಇಲ್ಲ

ಸ್ವಚ್ಚ ಭಾರತದ ಕನಸು, ಕನಸೇ ಆಗಿ ಉಳಿಯಲಿದೆ ಯೇ ಎಂಬ ಪ್ರಶ್ನೆ ಕಾಡುತ್ತಿದೆ.


ಚಿತ್ರ : ಬರಹ :
ತೀರ್ಥಹಳ್ಳಿ ಅನಂತ ಕಲ್ಲಾಪುರ
ಪರಿಸರ ಪ್ರೇಮಿ,
ನಿತ್ಯ ಹೋರಾಟ ಪರಿಸರಕ್ಕಾಗಿ , ಪರಿಸರವೇ ಉಸಿರು

- Advertisement -

3 COMMENTS

Comments are closed.

- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group