ನಗರ ಪ್ರಾಧಿಕಾರದ ಪ್ರಯೋಜನ ಪಡೆಯಬೇಕು – ಅಶೋಕ ಮನಗೂಳಿ

0
217

ಸಿಂದಗಿ: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಸಿಂದಗಿ ನಗರಕ್ಕೆ ನಗರ ಯೋಜನೆ ಪ್ರಾಧಿಕಾರ ಅವಶ್ಯಕತೆ ಇದ್ದ ಕಾರಣ ಸರಕಾರಕ್ಕೆ ಮನವರಿಕೆ ಮಾಡುವ ಮೂಲಕ ನಗರ ಯೋಜನಾ ಪ್ರಾಧಿಕಾರ ಕಚೇರಿ ಮಂಜೂರ ಆಗಿದ್ದು ತಾಲೂಕಿನ ಜನತೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಶೋಕ ಮನಗೂಳಿ ಕರೆ ನೀಡಿದರು.

ಪಟ್ಟಣದ ಕೃಷಿ ಮಾರುಕಟ್ಟೆ ಪ್ರಾಂಗಣದಲ್ಲಿರುವ ರೈತ ಭವನದಲ್ಲಿ ನಗರ ಯೋಜನಾ ಪ್ರಾಧಿಕಾರ ನೂತನ ಕಚೇರಿಯನ್ನು ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಶೈಕ್ಷಣಿಕವಾಗಿ, ಧಾರ್ಮಿಕ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಈ ನಗರವು ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪ್ರಥಮವಾಗಿ ನಗರ ಯೋಜನಾ ಪ್ರಾಧಿಕಾರವನ್ನು ಪ್ರಾರಂಭ ಮಾಡಲಾಗುತ್ತಿದೆ. ಮುಂಬರುವ ದಿನಮಾನಗಳಲ್ಲಿ ಪುರಸಭೆಯನ್ನು ನಗರಸಭೆಯನ್ನಾಗಿ ಮಾರ್ಪಾಡು ಮಾಡಲು ಯೋಜನಾ ಪ್ರಾಧಿಕಾರವು ಸಹಾಯಕವಾಗಲಿದೆ. ಸಿಂದಗಿಯ ಯೋಜನೆಗಳಿಗಾಗಿ  ವಿಜಯಪುರಕ್ಕೆ ಅಲೆದಾಡುವ ಬದಲು ಸಿಂದಗಿ ಜನತೆಗೆ ಸಹಾಯಕವಾಗಲಿ ಎನ್ನುವ ನಿಟ್ಟಿನಲ್ಲಿ ಈ ಯೋಜನಾ ಪ್ರಾಧಿಕಾರವನ್ನು ಪ್ರಾರಂಭ ಮಾಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ವಿಜಯಪುರ ಯೋಜನಾ ಪ್ರಾಧಿಕಾರದ ಸಹಾಯಕ ನಿರ್ದೇಶಕ ರವೀಂದ್ರ ಹೇರಲಗಿ ಹಾಗೂ ಬ್ಲಾಕ್ ಕಾಂಗ್ರೆಸ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ಪುರಸಭೆ ಸದಸ್ಯ ಹಣಮಂತ ಸುಣಗಾರ ಮಾತನಾಡಿದರು.

ಇದೇ ಸಂದರ್ಭದಲ್ಲಿ  ಪುರಸಭೆ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ, ಪುರಸಭೆ ಸದಸ್ಯರಾದ ಪ್ರತಿಭಾ ಕಲ್ಲೂರ, ಸಂದೀಪ್ ಚೌರ್, ಬಸವರಾಜ ಯರನಾಳ,  ಶ್ರೀಶೈಲ ಬೀರಗೊಂಡ, ಆನಂದ ಡೋಣೂರ, ಖಾದರ ಬಂಕಲಗಿ, ಮಲ್ಲಿಕಾರ್ಜುನ ಶಂಬೆವಾಡ, ರಾಜು ಖೇಡ, ರಜತ ತಾಂಬೆ, ಸುನಂದಾ ಯಂಪುರೆ, ಗಿರೀಶ ನಾಗೂರ, ಸುರೇಶ ಮಳಲಿ, ಬಸವರಾಜ ಕಾಂಬಳೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಪುರಸಭೆ ಸದಸ್ಯರು, ಪಕ್ಷದ ಮುಖಂಡರು, ಹಿರಿಯರು, ಕಾರ್ಯಕರ್ತರು ಅನೇಕರು ಉಪಸ್ಥಿತರಿದ್ದರು