spot_img
spot_img

ಮೂಡಲಗಿ ; ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸತ್ಕಾರ

Must Read

- Advertisement -

ಮೂಡಲಗಿ – 2023-24 ನೇ ಸಾಲಿನ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಗಣನೀಯ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮೂಡಲಗಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸತ್ಕರಿಸಿ ಅಭಿನಂದಿಸಲಾಯಿತು.

ಪರೀಕ್ಷೆಯಲ್ಲಿ 600ಕ್ಕೂ ಅಧಿಕ ಅಂಕ ಗಳಿಸಿದ ವಿವಿಧ ಪ್ರೌಢ ಶಾಲೆಗಳಿಂದ ಸಾಧನೆ ಮಾಡಿರುವ 23 ವಿದ್ಯಾರ್ಥಿಗಳನ್ನು ಸತ್ಕರಿಸಿ ಅಭಿನಂದಿಸಲಾಯಿತು.

ಸದರಿ ಪ್ರತಿಭಾವಂತ ವಿದ್ಯಾರ್ಥಿಗಳು ಈ ನಾಡಿನ ಭವಿಷ್ಯದ ಆಸ್ತಿಯಾಗಲಿದ್ದು, ಉತ್ತಮ ಕಾಲೇಜು ಮತ್ತು ಕೋರ್ಸ್ಗಳಿಗೆ ಪ್ರವೇಶ ಪಡೆದು ಮುಂದಿನ ಹಂತದ ಶಿಕ್ಷಣವನ್ನು ಶ್ರೇಷ್ಠ ರೀತಿಯಲ್ಲಿ ಮುಂದುವರೆಯಲಿ ಎಂದು ಮೂಡಲಗಿ ಬಿ ಇ ಓ ಅಜಿತ ಮನ್ನಿಕೇರಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

- Advertisement -

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರುಗಳಾದ ಕರಿಬಸವರಾಜು. ಟಿ, ಸತೀಸ ಬಿ.ಎಸ್ ಹಾಗೂ ಆರ್, ವಿ ಯರಗಟ್ಟಿ, ಕಛೇರಿಯ ಅಧೀಕ್ಷಕರಾದ ವೆಂಕಟೇಶ ಜೋಷಿ,  ಸುಜಾತಾ ಕುರಬೇಟ ಹಾಗೂ ಸಿಬ್ಬಂದಿಯರಾದ ಚೇತನ ಕುರಿಹುಲಿ ಮತ್ತು ಇತರರು ಹಾಜರಿದ್ದರು. ಸತ್ಕಾರ ಸಮಾರಂಭದಲ್ಲಿ ಸಾಧಕ ವಿದ್ಯಾರ್ಥಿಗಳ ಪಾಲಕರು ಸಹ ಹಾಜರಿದ್ದರು.

೨೦೨೩-೨೪ ನೆಯ ಸಾಲಿನ ಮೂಡಲಗಿ ವಲಯ ಎಸ್.ಎಸ್.ಎಲ್.ಸಿ ಪರೀಕ್ಷೆಯ ಫಲಿತಾಂಶ :
ಮೂಡಲಗಿ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗೆ 6 ನೆಯ ಸ್ಥಾನ ಪಡೆದಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾದವರು ಒಟ್ಟು :7479  ವಿದ್ಯಾರ್ಥಿಗಳು    (ಗಂಡು : 3955   ಹೆಣ್ಣು : 3524)
ಉತ್ತೀರ್ಣರಾದವರು  4789         (ಗಂಡು : 2139  ಹೆಣ್ಣು : 2650)
ಅನುತ್ತೀರ್ಣರಾದವರು : 2690     (ಗಂಡು : 1819  ಹೆಣ್ಣು : 871)
ಮೂಡಲಗಿ ವಲಯದ ಉತ್ತೀರ್ಣತೆ ಫಲಿತಾಂಶ : 64.40%
ಚಿಕ್ಕೋಡಿ ಶೈಕ್ಷಣಿಕ ಜೆಲ್ಲೆಗೆ 6ನೇ ಸ್ಥಾನ.
ಒಟ್ಟು 23 ವಿದ್ಯಾರ್ಥಿಗಳು 600ಕ್ಕೂ ಅಧಿಕ ಅಂಕ ಪಡೆದಿರುತ್ತಾರೆ.
ವಲಯಕ್ಕೆ ಅತೀ ಹೆಚ್ಚು ಅಂಕ ಪಡೆದವರು
1) ಪ್ರಥಮ ಸ್ಥಾನ  ಶರೀಫ್ ಹುಸೇನಸಾಬ ಲಕ್ಕುಂಡಿ : 619 ಅಂಕಗಳು
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲೋಳಿ
2) ದ್ವಿತೀಯ ಸ್ಥಾನ : ಸಂಜನಾ ಸುಭಾಷ ಶಿವಾಪುರ : 618 ಅಂಕಗಳು
ಚೈತನ್ಯ ಆಶ್ರಮ ಪ್ರೌಢ ಶಾಲೆ ನಾಗನೂರು
3) ತೃತೀಯ ಸ್ಥಾನ : ಶ್ರೀದೇವಿ ಮಾರುತಿ ಈರೈನವರ : 616 ಅಂಕಗಳು
ಮೊರಾರ್ಜಿ ದೇಸಾಯಿ ವಸತಿ ಶಾಲೆ ಕಲ್ಲೋಳಿ

- Advertisement -
- Advertisement -

Latest News

ಹಿರಿಯರು ಕುಟುಂಬದ ಬಲವಾದ ಅಡಿಪಾಯ — ಸಿದ್ದಲಿಂಗ ಕಿಣಗಿ

    ಸಿಂದಗಿ - ಅಜ್ಜಿಯರು ಕುಟುಂಬದ ದೊಡ್ಡ ಸಂಪತ್ತು, ಪ್ರೀತಿಯ ಪರಂಪರೆಯ ಸ್ಥಾಪಕರು, ಶ್ರೇಷ್ಠ ಕಥೆಗಾರರು ಮತ್ತು ಸಂಪ್ರದಾಯದ ಪಾಲಕರು. ಅಜ್ಜ-ಅಜ್ಜಿಯರು ಕುಟುಂಬದ ಬಲವಾದ...
- Advertisement -

More Articles Like This

- Advertisement -
close
error: Content is protected !!
Join WhatsApp Group