ಕವನ

Must Read

ಉಕ್ಕೋ ಕಡಲಂತೆ

ಅವಳೆದೆಯಾ ಗೂಡಲಿ ನೂಪುರದಾ ನಗೆ ನೋವು
ಕೂಡಿ ಹರಿದರೂ ಕಾಣದಲ್ಲ ಬರಿಗಣ್ಣಿಗೆ
ಅವಳೆದೆಯಾ ಬಣ್ಣದಿ ಅರಳಿ ನಿಂತ
ಒಲವಿನ ಹೂಗಳ ಪರಿಮಳ ತೋರದಲ್ಲ ನೋಟಕೆ//

ಎಡವಿ ಬೀಳುವಾಗ ಎತ್ತಿ ಎದೆಗವಚಿ
ಬೆರಳು ಹಿಡಿದು ಜಗವ ತೋರಿ
ಅಳುವಾಗ ಕಣ್ಣೀರು ಒರೆಸಿ
ಧೈರ್ಯ ಛಲವ ತುಂಬಿ ಹರಸಿ
ಜಗದ ಬಯಲಾಟಕ್ಕೆ ಗಟ್ಟಿ ಮಾಡಿ ಬಿಟ್ಟಾಕಿ ಆಕಿ//

ಎದೆಯ ಬಗೆದರೂ ಕದಡುವವಳಲ್ಲ
ಹೃದಯ ಒಡೆದರೂ ತೋರುವವಳಲ್ಲ
ಬರಸಿಡಿಲಿಗೆ ಮೈಯೊಡ್ಡಿ ನಮ್ಮ ಕಾಯುವವಳು
ದೇವನಿತ್ತ ವರವು ನಮ್ಮ ತಾಯಿ
ಮಮತಾಮಯಿ ಪ್ರೇಮದಾ ಮಾಯಿ//

ಅವಳ ಪ್ರೀತಿ ಸಾಗರದಲೆಯ ಮೊರೆತದಂತೆ
ಅವಳ ಮಮತೆ ಹರವಿ ಉಕ್ಕೊ ಕಡಲಂತೆ
ಅವಳಿಗಾರು ಸಮನಿಲ್ಲ ಕೇಳಿ ಈ ಜಗದಲಿ
ಅವಳ ಮುತ್ತು ಅವಳ ಗತ್ತು ಯಾರಿಗುಂಟು ಧರೆಯಲಿ//

ಅಪ್ಪುಗೆಯಲಿ ಅಮೃತ ಸುರಿವ ಸುರಿಯುವಳು
ತಬ್ಬಿ ಮುತ್ತಿಟ್ಟರೆ ಅಂಬರದ ತಾರೆ
ತಲೆ ನೇವರಸಿ ಹರಸುವಾ ದೇವತೆ
ಕಣ್ಣೋಟ ಬೆರೆಸಿ ಶಕ್ತಿ ಯುಕ್ತಿ ಬಿತ್ತುವಾ ಒಡತಿ//

ಸಲಹೆ ಕೊಟ್ಟು ಸಲಹುವಾ ಗೆಳತಿ
ಎಲ್ಲ ಇತ್ತು ಪೊರೆಯುವ ಬತ್ತದ ಒರತೆ
ಅವಳ ತೊಡೆ ಬಯಲ ಬಾನಿಗೆ ಕಟ್ಟಿದ ತೊಟ್ಟಿಲು
ಅವಳ ಸವಿ ಮಾತೇ ತಂಪು ತಂಗಾಳಿ
ಇಂಪಾದ ಜೋಲಾಲಿ ಸುವ್ವಾಲಿ ಆಕಿ//

ಸೀರೆ ಸೆರಗ ಮರೆಮಾಚಿ ಹಾಲುಣಿಸಿ
ತನ್ನ ಕಣ್ಣೇ ತಾಗದಂತೆ ಕಾಪಾಡಿ ಸಾಕಿ
ಬಣ್ಣನೆಯ ಬಯಸದಾ ಹೊನ್ನ ತೂಕದಾಕಿ
ನೆಟ್ಟ ನೋಟದ ತುಂಬಾ ಪ್ರೀತಿ ಮುತ್ತು ರತ್ನ
ಕಟ್ಟಿಟ್ಟು ತೋರಿದಾಕಿ ನನ್ನವ್ವ ಆಕಿ //

ಡಾ ಅನ್ನಪೂರ್ಣ ಹಿರೇಮಠ, ಬೆಳಗಾವಿ

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group