ಮೂಡಲಗಿ:-ತಾಲೂಕಿನ ಶಿವಾಪೂರ (ಹ ) ಗ್ರಾಮದಲ್ಲಿ
ರೈತರು ವೈಜ್ಞಾನಿಕವಾಗಿ ಸರಿಯಾದ ಮಾರ್ಗದರ್ಶನ ಪಡೆದು ಕಬ್ಬಿನ ಬೆಳೆಯಲ್ಲಿ ಇಳುವರಿಯನ್ನು ಹೆಚ್ಚಿಸಬೇಕೆಂದು ಪ್ರಗತಿಪರ ರೈತರಾದ ಅಲಗೌಡ ಪಾಟೀಲ ಹೇಳಿದರು.
ಮೂಡಲಗಿ ತಾಲೂಕಿನ ಶಿವಾಪೂರ ಗ್ರಾಮದ ರೈತರಾದ ಬಾಳಗೌಡ ಪಾಟೀಲ ಇವರ ತೋಟದಲ್ಲಿ ಶ್ರೀ ಕ್ಷೇತ್ರ ಧರ್ಮಸ್ತಳ ಗ್ರಾಮಾಭಿವೃದ್ದಿ ಯೋಜನೆ,ಬಿ ಸಿ ಟ್ರಸ್ಟ ಮೂಡಲಗಿ ಇವರ ಸಂಯುಕ್ತ ಆಶ್ರಯದಲ್ಲಿ ಸುಸ್ಥಿರ ಕಬ್ಬಿನ ಬೇಸಾಯ ಕುರಿತು ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಅವರು ರೈತರನ್ನುದ್ದೇಶಿಸಿ ಸುಸ್ಥಿರ ಕಬ್ಬಿನ ಬೇಸಾಯ ಕ್ರಮಗಳಲ್ಲಿ ಸಸಿಗಳ ತಯಾರಿಕೆಯ ವಿಧಾನ,ಸಸಿಗಳ ನಾಟಿ ಮಾಡುವುದರಿಂದ ಆಗುವ ಪ್ರಯೋಜನ,ಹನಿ ನೀರಾವರಿ,ಬೀಜೋಪಚಾರ ಸೇರಿದಂತೆ ಕಬ್ಬಿನ ಬೇಸಾಯ ಮಾಡುವ ವಿವಿಧ ಪದ್ದತಿಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು .
ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಕೃಷಿ ಮೇಲ್ವಿಚಾರಕರಾದ ಮೈಲಾರಪ್ಪಾ ಪೈಲಿ ಅವರು ಮಾತನಾಡಿ, ಧರ್ಮಸ್ಥಳ ಟ್ರಸ್ಟ್ ದಲ್ಲಿ ಸಿಗುವ ಯೋಜನೆಗಳು ಹಾಗು ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಮುಖಂಡರಾದ ಸಿದ್ದನಗೌಡ ಪಾಟೀಲ ,ಶಿವನಗೌಡ ಪಾಟೀಲ ,ಬಾಳಗೌಡ ಪಾಟೀಲ , ಮಾನಿಂಗ ರಡ್ದೆರಟ್ಟಿ,ಮಹಾದೇವ ಬಿ.ಪಾಟೀಲ,ಜಗದೀಶ್ ಪಾಟೀಲ , ಮಲ್ಲಪ್ಪ ಗಿರೆನ್ನವರ್ ಸೇರಿದಂತೆ ಗ್ರಾಮದ ಎಲ್ಲ ರೈತರು,ಹಲವು ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರೂಪಣೆ ಕಾಮಾಕ್ಷಿ ನಾಯಕ,ಸ್ವಾಗತವನ್ನು ಸೇವಾ ಪ್ರತಿನಿಧಿಯಾದ ಕಸ್ತೂರಿ ಸವದಿ ವಂದಿಸಿದರು ಯಲ್ಲಪ್ಪ ಬಗರನಾಳ ನಿರೂಪಿಸಿದರು.