ಇಂತಪ್ಪ ನೆಲದಲ್ಲಿ ಬದುಕಿ ಸಾಯುವ
ಕಳ್ಳರಿಗೆ ಸುಳ್ಳರಿಗೆ ಮಣೆ ಹಾಕುವರಯ್ಯ
ಸತ್ಯ ಸಮತೆ ಶಾಂತಿಯ ಜಪಿಸುವವರ
ಮೂಲೆ ಗುಂಪು ಮಾಡುವರಯ್ಯ
ಶ್ರಮಿಕ ಕಾರ್ಮಿಕರನ್ನು ಶೋಷಿಸುವರಯ್ಯ
ದುಡಿಯದ ಮೈಗಳ್ಳರು ರಾಜ್ಯವಾಳುವರಯ್ಯ
ಜಲ ನೆಲ ಗಣಿ ಲೂಟಿ ಮಾಡುವವರ
ಹಾಡಿ ಹೊಗಳುವರಯ್ಯ
ಪತ್ರಿಕೆ ಟಿವಿ ಮಾಧ್ಯಮಗಳು ಬಿಕರಿಯಾದವಯ್ಯಾ
ಬಣ್ಣ ಬಣ್ಣದ ವೇಷವ ಹಾಕುವವರು
ಮಂತ್ರಿಗಳಾಗುವರಯ್ಯ
ನ್ಯಾಯ ಕೇಳುವವರ ಗುಂಡಿಕ್ಕಿ ಕೊಲ್ಲುವರಯ್ಯ
ಇಂತಪ್ಪ ನೆಲದಲ್ಲಿ ಬದುಕಿ ಸಾಯುವ
ಸಾಲಿನಲ್ಲಿ ನಾನೂ ಒಬ್ಬ ಬಸವಪ್ರಿಯ ಶಶಿಕಾಂತ
——————————
ಲಿಂಗಾಯತರಿಗೂ ಬಸವಣ್ಣನೇ ದೇವರು
—————————— ———————
ಲಿಂಗಾಯತರಿಗೂ ಬಸವಣ್ಣನೇ ದೇವರು
ವೀರಶೈವರಿಗೂ ಬಸವಣ್ಣನೇ ದೇವರು
ಗುರು ಪೀಠಕ್ಕೂ ಬಸವಣ್ಣನೇ ದೇವರು
ವಿರಕ್ತರಿಗೂ ಬಸವಣ್ಣನೇ ದೇವರು
ಪಂಚ ಪೀಠದವರಿಗೂ ಬಸವಣ್ಣನೇ ದೇವರು
ಗುರುಮಠ ಹಿರೇಮಠ ಪಟ್ಟದ ದೇವರೆನ್ನುವವರಿಗೂ
ಬಸವಣ್ಣನೇ ದೇವರು
ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕನೆಂಬುದು ಹುಸಿಯೆ
ಬಸವನ ವಚನ ಹಾಡಿ ಓದಿ ಬೆಳೆದು
ಬಸವಣ್ಣನವರನ್ನು ಮರೆತ ದುಷ್ಟ ಕಾವಿಗಳ
ಮುಖವ ನೋಡಲಾಗದು ಬಸವ ಪ್ರಿಯ ಶಶಿಕಾಂತ
—————————— —————————— —-
——————————
ಲಿಂಗಾಯತರಿಗೂ ಬಸವಣ್ಣನೇ ದೇವರು
ವೀರಶೈವರಿಗೂ ಬಸವಣ್ಣನೇ ದೇವರು
ಗುರು ಪೀಠಕ್ಕೂ ಬಸವಣ್ಣನೇ ದೇವರು
ವಿರಕ್ತರಿಗೂ ಬಸವಣ್ಣನೇ ದೇವರು
ಪಂಚ ಪೀಠದವರಿಗೂ ಬಸವಣ್ಣನೇ ದೇವರು
ಗುರುಮಠ ಹಿರೇಮಠ ಪಟ್ಟದ ದೇವರೆನ್ನುವವರಿಗೂ
ಬಸವಣ್ಣನೇ ದೇವರು
ಬಸವಣ್ಣ ಲಿಂಗಾಯತ ಧರ್ಮ ಸ್ಥಾಪಕನೆಂಬುದು ಹುಸಿಯೆ
ಬಸವನ ವಚನ ಹಾಡಿ ಓದಿ ಬೆಳೆದು
ಬಸವಣ್ಣನವರನ್ನು ಮರೆತ ದುಷ್ಟ ಕಾವಿಗಳ
ಮುಖವ ನೋಡಲಾಗದು ಬಸವ ಪ್ರಿಯ ಶಶಿಕಾಂತ
——————————
ಭೂಮಿ ನಿನ್ನದಲ್ಲ
—————————— —–
ಭೂಮಿ ನಿನ್ನದಲ್ಲ
ಯಾರಾದರೂ ಯಾಮಾರಿಸುವರಯ್ಯ
ಹೇಮ ನಿನ್ನದಲ್ಲಈಡಿ ಆಯ್ ಟಿ
ಲೋಕಾಯುಕ್ತರು ದಾಳಿ ಮಾಡುವರಯ್ಯ
ಕಾರು ನಿನ್ನದಲ್ಲ ಯಾರಾದರೂ ಕದ್ದೊಯ್ಯುವರಯ್ಯ
ಮಡದಿಯು ನಿನ್ನವಳಲ್ಲ
ಫ್ರೀ ಬಸ್ ಹತ್ತಿ ಊರೂರು ತಿರುಗುವಾಳಯ್ಯ
ನಿನ್ನೊಡವೆ ಎಂಬುದು ಶರಣರ ವಚನಗಳು
ಅವುಗಳನ್ನು ಪಚನ ಮಾಡಿಕೊಂಡರೆ
ನಮ್ಮಶರಣರಲ್ಲಿ ನಿನಗಿಂತ ಅಧಿಕಾರಿಲ್ಲ ನೋಡಾ
ಬಸವ ಪ್ರಿಯ ಶಶಿಕಾಂತ
—————————— ——————
ಡಾ ಶಶಿಕಾಂತ ಪಟ್ಟಣ ರಾಮದುರ್ಗ
——————————
ಭೂಮಿ ನಿನ್ನದಲ್ಲ
ಯಾರಾದರೂ ಯಾಮಾರಿಸುವರಯ್ಯ
ಹೇಮ ನಿನ್ನದಲ್ಲಈಡಿ ಆಯ್ ಟಿ
ಲೋಕಾಯುಕ್ತರು ದಾಳಿ ಮಾಡುವರಯ್ಯ
ಕಾರು ನಿನ್ನದಲ್ಲ ಯಾರಾದರೂ ಕದ್ದೊಯ್ಯುವರಯ್ಯ
ಮಡದಿಯು ನಿನ್ನವಳಲ್ಲ
ಫ್ರೀ ಬಸ್ ಹತ್ತಿ ಊರೂರು ತಿರುಗುವಾಳಯ್ಯ
ನಿನ್ನೊಡವೆ ಎಂಬುದು ಶರಣರ ವಚನಗಳು
ಅವುಗಳನ್ನು ಪಚನ ಮಾಡಿಕೊಂಡರೆ
ನಮ್ಮಶರಣರಲ್ಲಿ ನಿನಗಿಂತ ಅಧಿಕಾರಿಲ್ಲ ನೋಡಾ
ಬಸವ ಪ್ರಿಯ ಶಶಿಕಾಂತ
——————————
ಡಾ ಶಶಿಕಾಂತ ಪಟ್ಟಣ ರಾಮದುರ್ಗ