- Advertisement -
ಪಾಕಿಸ್ತಾನದ ಐಎಸ್ಐ ಏಜೆಂಟ್ ಆಗಿ ಕೆಲಸ ಮಾಡಿದ ಆರೋಪದ ಮೇಲೆ ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿ. ಕಂಪನಿಯ ಇಂಜಿನಿಯರ್ ನಿಶಾಂತ ಅಗರವಾಲ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಮಹಾರಾಷ್ಟ್ರದ ನಾಗಪುರ ಜಿಲ್ಲಾ ಕೋರ್ಟು ಈ ಆದೇಶ ನೀಡಿದ್ದು ನಿಶಾಂತ ಅಗರವಾಲ್ ರೂ. ೩೦೦೦ ದಂಡವನ್ನೂ ಕಟ್ಟಬೇಕು ಅಲ್ಲದೆ ಆತನಿಗೆ ೧೪ ವರ್ಷಗಳ ಕಠಿಣ ಶಿಕ್ಷೆಯನ್ನೂ ನೀಡಬೇಕು ಎಂದು ಆದೇಶ ನೀಡಿದೆ.
ನಿಶಾಂತ ಪಾಕಿಸ್ತಾನದ ಐಎಸ್ಐ ಸಂಸ್ಥೆಯ ಗೂಢಚಾರನಾಗಿ ಕೆಲಸ ಮಾಡಿದ್ದು ತನಿಖೆಯಲ್ಲಿ ಹೊರಬಿದ್ದ ಕಾರಣ ಈ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಆತ ಶತ್ರು ದೇಶಕ್ಕೆ ರಹಸ್ಯವಾಗಿ ನೀಡಿರಬಹುದಾದ ಸೈನ್ಯ ಮಾಹಿತಿಯ ಬಗ್ಗೆಯು ತನಿಖೆಯನ್ನು ಚುರುಕುಗೊಳಿಸಲಾಗಿದೆ.