spot_img
spot_img

ಜೂ.24ರಂದು ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಸಾಮೂಹಿಕ ಉಪನಯನ

Must Read

spot_img
- Advertisement -

ಮೈಸೂರು, -ನಗರದ ಕೆಆರ್‍ಎಸ್ ಮುಖ್ಯರಸ್ತೆಯಲ್ಲಿರುವ (ಮೊಗರಹಳ್ಳಿ ಸಮೀಪ) ಶ್ರೀ ಸಪ್ತರ್ಷಿ ಗುರುಕುಲ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಸಾಮೂಹಿಕ ಉಪನಯನ ಕಾರ್ಯಕ್ರಮವನ್ನು ಜೂ.24ರಂದು ಸೋಮವಾರದಂದು ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ ಶಾಸ್ತ್ರೋಕ್ತವಾಗಿ ಉಪನಯನ, ಪಂಚ ಸಂಸ್ಕಾರ, ಶ್ರೀ ಮಠದ ಶ್ರೀಗಳಿಂದ ಆಶೀರ್ವಚನ, ಪೂರ್ಣಾಹುತಿ, ಮಹಾಮಂಗಳಾರತಿ, ಶಾತ್ತುಮೊರೈ, ತೀರ್ಥ ಪ್ರಸಾದ ವಿನಿಯೋಗ ಏರ್ಪಡಿಸಲಾಗಿದೆ. ಜೂ.23ರಂದು ಭಾನುವಾರ ಸಂಜೆ ಉದಕಶಾಂತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಸಾಮೂಹಿಕ ಉಪನಯನದ ನಂತರ ಅಯೋಧ್ಯೆಯಿಂದ ಶ್ರೀರಾಮ ಮಂದಿರದಿಂದ ತರಿಸಿರುವ ಅಕ್ಷತೆ ಹಾಗೂ ಛಾಯಾಚಿತ್ರವನ್ನು ಭಕ್ತಾದಿಗಳಿಗೆ ವಿತರಿಸಲಾಗುವುದು.

- Advertisement -

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಅಭಿನವ ರಾಮಾನುಜ ಜೀಯರ್ ಅವರು ವಹಿಸಿ, ಆಶೀರ್ವಚಿಸಲಿದ್ದಾರೆ ಶ್ರೀ ಮಠದಲ್ಲಿ ಎಲ್ಲಾ ವರ್ಗದ ಮಕ್ಕಳಿಗೆ ಗುರುಕುಲ ಪದ್ಧತಿಯಲ್ಲಿ, ಶಿಕ್ಷಣ, ಸನಾತನ ಸಂಸ್ಕೃತಿ, ಪರಂಪರೆ, ಇತಿಹಾಸ, ವೇದಾಧ್ಯಯನ ಉಚಿತವಾಗಿ ಹೇಳಿಕೊಡಲಾಗುವುದು, ಹಾಗೂ ಶಾಲಾ, ಕಾಲೇಜಿನ ಮಕ್ಕಳಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಮೊಬೈಲ್ 9481319111 ಅಥವಾ ವ್ಯವಸ್ಥಾಪಕರಾದ ರಂಗನಾಥ್ ಮೊಬೈಲ್ 8861573934 ಸಂಪರ್ಕಿಸಬಹುದು.

- Advertisement -
- Advertisement -

Latest News

ಕಿಟದಾಳದಲ್ಲಿ ಜರುಗಿದ ಕಲಿಕಾ ಹಬ್ಬ

ಸೀರೆ ತೊಟ್ಟುಕೊಂಡು ಬಂದ ಬಾಲಕಿಯರು, ಮದುವಣಗಿತ್ತಿಯಂತೆ ಕಂಗೊಳಿಸಿದ ಶಾಲಾ ಆವರಣ. ಎಲ್ಲರ ತಲೆ ಮೇಲೊಂದು ಕಲರ್ ಕಲರ್ ಪೇಪರ್ ಟೋಪಿ. ಹೌದು, ಹೀಗೆ ಶಾಲೆಯಲ್ಲೊಂಥರಾ ಹಬ್ಬದ...
- Advertisement -

More Articles Like This

- Advertisement -
close
error: Content is protected !!
Join WhatsApp Group