ಕವನ

Must Read

ಸಜ್ಜಾಗಬೇಕು

ಮುಗಿದು ಹೋಯಿತು
ಐವತ್ತು ದಿನಗಳ
ಪ್ರಜಾಪ್ರಭುತ್ವದ ದೀರ್ಘ
ಪ್ರಹಸನ
ಎಲ್ಲರ ಭವಿಷ್ಯದ ಕನಸು
ಲೆಕ್ಕಾಚಾರ ಎಕ್ಸಿಟ್ ಪೋಲ್
ಟಿವಿ ಕಿರುಚಾಟ ಎಲ್ಲವೂ ಹುಸಿಯಾಯಿತು
ನಿನ್ನೆ ಚುನಾವಣೆ ಫಲಿತಾಂಶ
ಯಾರಿಗೂ ಸಿಗಲಿಲ್ಲ ಬಹುಮತ
ಮಾಧ್ಯಮಗಳ ಅಬ್ಬರ ಮೌನ
ಯಾರಿಗೂ ಖುಷಿ ಇಲ್ಲ
ದುಃಖವೂ ಇಲ್ಲ
ಮಿತ್ರ ಪಕ್ಷಗಳಿಗೆ ಶರಣು
ಅವರದ್ದೆ ಆಟ ವ್ಯವಹಾರ
ಭಾರಿ ಆದಾಯ ಖಾತೆಗಳ ಬೇಡಿಕೆ
ಆಡಳಿತ ಪಕ್ಷ ಮಗ್ಗರಿಸಿದೆ
ವಿರೋಧ ಪಕ್ಷಗಳ ಸ್ಥಾನ ಹೆಚ್ಚಳ
ಈಗ ಯಾರಿಗೂ ಇಲ್ಲ
ಇ ವಿ ಎಂ ಮೇಲೆ ಅನುಮಾನ
ಚುನಾವಣೆ ಗೆದ್ದು ಬಿಗುವುದಲ್ಲ
ಬಿದ್ದು ಬಾಗುವುದೂ ಅಲ್ಲ
ಗೆದ್ದದ್ದು ಸತ್ಯ ಸೇವೆ ನಿಷ್ಠೆ
ಸೋತದ್ದು ವ್ಯಕ್ತಿಯ ಅಹಂಕಾರ
ಆಯೋಧ್ಯೆ ರಾಮ ಹರಿಸಲಿಲ್ಲ
ಸೋಲಲಿಲ್ಲ ಬುದ್ಧ ಬಸವ ಬಾಪು
ಬದಲಾಗುವದಿಲ್ಲ ಸಂವಿಧಾನ
ಆದರೂ ಖುಷಿ ಪಡಬೇಕಿಲ್ಲ
ಕೂಗು ಕುಣಿತ ವಾದ್ಯವಿಲ್ಲ
ಕೊನೆಗೊಳ್ಳಬೇಕಿದೆ
ಹಸಿವು ಶೋಷಣೆ ಬಡತನ
ನಾವು ಮತ್ತೆ ಸಜ್ಜಾಗಬೇಕು
ಶಾಂತಿ ಸಮತೆ ಸಮರಕೆ
ಕೋಟೆ ಕಟ್ಟಲು ಕಹಳೆ ಊದಲು

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group