ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು, ಮೈಸೂರು ಹಾಗೂ ಹಾಸನ, ಶ್ರೀ ಶಾರದಾ ಕಲಾಸಂಘ ಹಾಸನ ಇವರ ವತಿಯಿಂದ ಹಾಸನ ತಾ. ಬಿಡಾರದಹಳ್ಳಿ ಬೂದೇಶ್ವರಸ್ವಾಮಿ ದೇವಾಲಯದ ಆವರಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ಶ್ರೀಕ್ಷೇತ್ರ ಧಾರ್ಮಿಕ ಕ್ಷೇತ್ರವಾಗಿ ಹೆಸರಾಗಿದ್ದು ಇಲ್ಲಿ ಪ್ರತಿ ಅಮಾವಾಸ್ಯೆ ಹುಣ್ಣಿಮೆಗೆ ನಡೆಯುವ ಭಜನೆ ಹಾಡುಗಾರಿಕೆ ವಿಶೇಷವಾಗಿದೆ. ಇಲ್ಲಿ ಕಲಾವಿದರು ಸ್ವಯಂಪ್ರೇರಿತರಾಗಿ ಕಾರ್ಯಕ್ರಮ ಪ್ರದರ್ಶಿಸಲು ಮುಂದೆ ಬರುತ್ತಾರೆ. ಶಿವರಾತ್ರಿ ಜಾತ್ರೆಗೆ ಪೌರಾಣಿಕ ನಾಟಕಗಳು ಪ್ರದರ್ಶನಗೊಳ್ಳುತ್ತಿವೆ. ಜಿಲ್ಲೆ ರಾಜ್ಯದಲ್ಲಿ ಹೆಸರು ಮಾಡಿರುವ ಕಲಾವಿದರು ಇವತ್ತಿನ ವೈವಿಧ್ಯ ಕಾರ್ಯಕ್ರಮದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಭರತನಾಟ್ಯ, ಸುಗಮ ಸಂಗೀತ ನಾಟಕ ಎಲ್ಲವೂ ಸೊಗಸಾಗಿ ಮೂಡಿಬಂದಿವೆ. ಉತ್ತಮ ಕಲಾವಿದರನ್ನು ಸಂಘಟಿಸಿ ಶ್ರೀ ಶಾರದ ಕಲಾಸಂಘದ ಅಧ್ಯಕ್ಷ ಹೆಚ್.ಜಿ.ಗಂಗಾಧರ್ ಉತ್ತಮ ಮನರಂಜನಾ ಕಾರ್ಯಕ್ರಮ ಪ್ರದರ್ಶಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಶ್ಲಾಘಿಸಿದರು.
ಶ್ರೀಮಠದ ಅಧ್ಯಕ್ಷರು ರಮೇಶ್ ಹೊನ್ನಾವರ, ಉಪಾಧ್ಯಕ್ಷರು ದೇವರಾಜ್ ಕಾರ್ಯದರ್ಶಿ ಗುರುರಾಜ್ ಹರುವನಹಳ್ಳಿ, ಧರ್ಮದರ್ಶಿ ಎಲ್.ಪಿ.ಕುಮಾರ್ ಉಪಸ್ಥಿತರಿದ್ದರು. ಶ್ರೀಮತಿ ಕಲಾವತಿ ಮಧುಸೂಧನ್ ವೀಣಾವಾದನ, ಯೋಗೇಂದ್ರ ದುದ್ಧ ತತ್ವಪದ, ಮೇಘನಾ, ದೇವಿಕ ಭರತನಾಟ್ಯ, ರಾಣಿ ಚರಾಶ್ರೀ, ನಿರ್ಮಲ ಚಂದ್ರಶೇಖರ, ಗಾಯಿತ್ರಿ ಪ್ರಕಾಶ್, ಚಂದ್ರಮ್ಮ ಕಾಳೇಗೌಡ, ಪದ್ಮ ವೆಂಕಟೇಶ್, ಯೋಗ ಸಾವಿತ್ರಕ್ಕ, ರಜನಿ ನಾಗಾಭೂಷಣ್ ತಂಡದ ಸಮೂಹ ಕೋಲಾಟ ಶೋಭಾನೆ ಪದ ಜನಪದ ಗೀತೆ ಶಾರದ ಕಲಾತಂಡದ ಹೆಚ್.ಜಿ.ಗಂಗಾಧರ, ಜಿ.ಟಿ.ದೇವರಾಜ್, ಕುಮಾರ್ ಅವರ ಭಕ್ತಿಗೀತೆಗಳು, ರಮೇಶ್, ನಂಜಪ್ಪರ ರಂಗಗೀತೆ, ಗ್ಯಾರಂಟಿ ರಾಮಣ್ಣ ಶಿವನಂಜೇಗೌಡರ ಜಾನಪದ ಗೀತೆಗಳು ಪ್ರೇಕ್ಷಕರಿಗೆ ಇಷ್ಟವಾದವು. ನಿವೃತ್ತ ನೌಕರ ಕಲಾವಿದರ ತಂಡ ಪ್ರದರ್ಶಿಸಿದ ಬಾಡಿದ ಬದುಕು ಸಾಮಾಜಿಕ ನಾಟಕ ಪ್ರಚಲಿತ ವಯಸ್ಸಾದ ತಂದೆ ತಾಯಿ ಅಜ್ಜಂದಿರು ವೃದ್ಧಾಶ್ರಮ ಸೇರುತ್ತಿರುವ ಸಂದರ್ಭದ ವಿಷಮ ಪರಿಸ್ಥಿತಿಯನ್ನು ಬಿಂಬಿಸಿ ಪ್ರೇಕ್ಷಕರನ್ನು ಬಡಿದೆಚ್ಚರಿಸಿತು.
ಗೋವಿಂದೇಗೌಡ್ರು, ಅನಂತಮೂರ್ತಿ, ಮಂಜುಳಾ ಉಮೇಶ್, ಮೂರ್ತಿ ಹೆಚ್.ಜೆ., ರಮೇಶ್ ತಿರುಪತಿಹಳ್ಳಿ, ದ್ಯಾವೇಗೌಡ್ರು, ಅರಣ್ಯಾ ಭಾಸ್ಕರ್, ರಮೇಶ್, ನಂಜಪ್ಪ ನಟಿಸಿದರು. ಸಂಗೀತಕ್ಕೆ ಕೀ ಬೋರ್ಡ್ ಕೋಮಲ್, ತಬಲ ಭಗವಾನ್, ಪ್ಯಾಡ್ ಕುಮಾರ್ ಸಾತ್ ನೀಡಿದರು. ಗೊರೂರು ಅನಂತರಾಜು ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಕಲಾವಿದರು ಅತಿಥಿಗಳನ್ನು ಶ್ರೀ ಶಾರದ ಕಲಾಸಂಘದ ಅಧ್ಯಕ್ಷ ಹೆಚ್.ಜಿ.ಗಂಗಾಧರ್ ಸನ್ಮಾನಿಸಿದರು.