ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರದ ಉದ್ಘಾಟನೆ 

Must Read
ಮೌಂಟ್ ಅಬುವಿನಿಂದ ಮೖಸೂರು ಮಹಾನಗರಕ್ಕೆ ಲಲಿತ ಬಾಯಿ ಇನಾನಿ ಆಗಮನ
ಮೈಸೂರು-ಅಂತಾರಾಷ್ಟ್ರೀಯ ಆಧ್ಯಾತ್ಮಿಕ ಸಂಸ್ಥೆಯ ಮುಖ್ಯಾಲಯವಾದ ರಾಜಸ್ಥಾನ ಅಬುಪರ್ವತದಲ್ಲಿ ಲೆಕ್ಕಪತ್ರ ವಿಭಾಗದ ಮುಖ್ಯಸ್ಥರಾಗಿ ಸೇವೆಸಲ್ಲಿಸುತ್ತಿರುವ ಚಾರ್ಟರ್ರ್ಡ್ ಅಕೌಟೆಂಟ್ ರಾಜಯೋಗಿ ಬ್ರಹ್ಮಾಕುಮಾರ ಲಲಿತ ಬಾಯಿ ಇನಾನಿ ರವರು ಶನಿವಾರ ಜೂನ್ 8 ರ ಸಂಜೆ ಹುಣಸೂರು ರಸ್ತೆಯಲ್ಲಿರುವ ರಾಜಯೋಗ ರಿಟ್ರೀಟ್ ಸೆಂಟರ್ ನಲ್ಲಿ ನಡೆಯುತ್ತಿರುವ 3ನೇ ತಂಡದ ವ್ಯಕ್ತಿತ್ವ ವಿಕಸನ ಶಿಬಿರ ಹಾಗೂ  ಮೖಸೂರು ಉಪವಿಭಾಗದ  200 ಕ್ಕೂ ಹೆಚ್ಚು ರಾಜಯೋಗ  ಶಿಕ್ಷಕಿಯರಿಗೆ ಆಡಳಿತಾತ್ಮಕವಾಗಿ ತರಬೇತಿ ಶಿಬಿರಕ್ಕೆ  ಚಾಲನೆ ನೀಡಿದರು ಎಂದು ರಿಟ್ರೀಟ್ ಸೆಂಟರ್ ನ  ಸಂಚಾಲಕಿ ಬಿಕೆ ಶಾರದಾಜೀ ತಿಳಿಸಿದ್ದಾರೆ.
    ಬಿಕೆ ಲಲಿತ್ ಜಿ ರವರು ಬಹಳ ಅನುಭವಿ ಅಧಿಕಾರಿ. ಸಂಸ್ಥೆಯ ಭಾರತದ ಸುಮಾರು ಎಂಟು ಸಾವಿರ ಸೇವಾಕೇಂದ್ರಗಳ ಆದಾಯ ಮತ್ತು ಖರ್ಚುಗಳನ್ನು ಪರಿಶೀಲಿಸಿ ಒಟ್ಟಾರೆಯಾದ ಸಂಸ್ಥೆಯ ಬ್ಯಾಲನ್ಸ್ ಶೀಟ್ ಅನ್ನು ಪ್ರತಿ ವರ್ಷ ಭಾರತ ಸರ್ಕಾರಕ್ಕೆ ಸಲ್ಲಿಸುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಜೊತೆಗೆ ಈ ಎಲ್ಲ ಸೇವಾ ಕೇಂದ್ರಗಳ ಸಂಚಾಲಕ ಸಹೋದರಿಯರಿಗೆ ಗಣಕ ಯಂತ್ರವನ್ನು ಉಪಯೋಗಿಸುವ ಬಗ್ಗೆ ಮತ್ತು ಲೆಕ್ಕಪತ್ರಗಳನ್ನು ಕಾನೂನು ರೀತ್ಯಾ ದಾಖಲಿಸಲು ಸೂಕ್ತ ತರಬೇತಿ ಮತ್ತು ಮಾರ್ಗದರ್ಶನವನ್ನು ನೀಡುತ್ತಾರೆ. ಅಧ್ಯಾತ್ಮ ಮತ್ತು ಆರೋಗ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿರುವ ಲಲಿತ್ ಜಿ ಈ ಬಗ್ಗೆ ತಮ್ಮ ಸುಂದರ ಅನುಭವಯುಕ್ತ ತರಗತಿಗಳನ್ನೂ ನಡೆಸುತ್ತಾರೆ ಎಂದು ತಿಳಿಸಿದ್ದಾರೆ.
    ಕಾರ್ಯಕ್ರಮದಲ್ಲಿ ಮೈಸೂರು ಉಪ ವಿಭಾಗದ ಮುಖ್ಯ ಸಂಚಾಲಕಿ ರಾಜ ಯೋಗಿನಿ ಬ್ರಹ್ಮಾಕುಮಾರಿ ಲಕ್ಷ್ಮೀಜಿ, ರಾಜ ಯೋಗಿನಿ ಬ್ರಹ್ಮಾಕುಮಾರಿ ದಾನೇಶ್ವರೀಜಿ ಬ್ರಹ್ಮಾಕುಮಾರ ರಂಗನಾಥ್ ಜಿ ಇನ್ನಿತರರು ಹಾಜರಿದ್ದರು
Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group