ಶಿರದ ಮೇಲೆ ಗಂಗೆ
ಶಿರದ ಮೇಲೆ ಗಂಗೆ
ಶರೀರದೊಳಗೆ ಗೌರಿ
ಕೊರಳ ಸುತ್ತ ನಾಗೇಶ್ವರ
ಮಹಾ ಮಹಿಮೆ ಪರಮೇಶ್ವರ
ಜಡೆಯೊಳಗೆ ಗಂಗೆ
ಗಂಗಾಧರ
ಅರ್ಧಾಂಗಿಯ ರೂಪ
ಅರ್ಧನಾರೀಶ್ವರ
ಗಂಗಾ ಪ್ರಿಯ
ಅಭಿಷೇಕ ಪ್ರಿಯ
ಅನ್ನಪೂರ್ಣೇಶ್ವರಿಯ
ಪ್ರಾಣವಲ್ಲಭ
ನಿನಗ್ಯಾರು ಸಾಟಿ
ಪರಮೇಶ್ವರ
ಮುಕ್ಕಣ್ಣ ನಿನಗೆ ಕೋಟಿ
ನಮಸ್ಕಾರ
ಬೇಗ ಒಲಿಯುವ
ಸದಾಶಿವ
ಪ್ರಳಯಾಂತಕ
ಕಾಳ ಭೈರವ
ಮೋಕ್ಷಕಾರಕ
ಕಾಶಿ ವಿಶ್ವೇಶ್ವರ
ಕೈ ಮುಗಿವೆ
ರಾಮೇಶ್ವರ
ಶ್ರೀಮತಿ ಪಾರ್ವತಿ ದೇವಿ.ಎಂ ತುಪ್ಪದ ಬೆಳಗಾವಿ