spot_img
spot_img

ಕವನ

Must Read

spot_img
- Advertisement -

ಶಿರದ ಮೇಲೆ ಗಂಗೆ

ಶಿರದ ಮೇಲೆ ಗಂಗೆ
ಶರೀರದೊಳಗೆ ಗೌರಿ
ಕೊರಳ ಸುತ್ತ ನಾಗೇಶ್ವರ
ಮಹಾ ಮಹಿಮೆ ಪರಮೇಶ್ವರ

ಜಡೆಯೊಳಗೆ ಗಂಗೆ
ಗಂಗಾಧರ
ಅರ್ಧಾಂಗಿಯ ರೂಪ
ಅರ್ಧನಾರೀಶ್ವರ

- Advertisement -

ಗಂಗಾ ಪ್ರಿಯ
ಅಭಿಷೇಕ ಪ್ರಿಯ
ಅನ್ನಪೂರ್ಣೇಶ್ವರಿಯ
ಪ್ರಾಣವಲ್ಲಭ

ನಿನಗ್ಯಾರು ಸಾಟಿ
ಪರಮೇಶ್ವರ
ಮುಕ್ಕಣ್ಣ ನಿನಗೆ ಕೋಟಿ
ನಮಸ್ಕಾರ

ಬೇಗ ಒಲಿಯುವ
ಸದಾಶಿವ
ಪ್ರಳಯಾಂತಕ
ಕಾಳ ಭೈರವ

- Advertisement -

ಮೋಕ್ಷಕಾರಕ
ಕಾಶಿ ವಿಶ್ವೇಶ್ವರ
ಕೈ ಮುಗಿವೆ
ರಾಮೇಶ್ವರ

ಶ್ರೀಮತಿ ಪಾರ್ವತಿ ದೇವಿ.ಎಂ ತುಪ್ಪದ ಬೆಳಗಾವಿ

- Advertisement -
- Advertisement -

Latest News

₹೧ ಕೋಟಿ ಮೌಲ್ಯದ ಅಕ್ರಮ ಮದ್ಯ ವಶಪಡಿಸಿಕೊಂಡ ಬೀದರ ಅಬಕಾರಿ ಇಲಾಖೆ

ಬೀದರ :- ಪರವಾನಗಿ ಇಲ್ಲದೆ ಮಹಾರಾಷ್ಟ್ರದಿಂದ ತೆಲಂಗಾಣಕ್ಕೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ₹೧.೦೧ ಕೋಟಿ ಮೌಲ್ಯದ ಮದ್ಯವನ್ನು ಅಬಕಾರಿ ಪೊಲೀಸರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ರಾಷ್ಟ್ರೀಯ...
- Advertisement -

More Articles Like This

- Advertisement -
close
error: Content is protected !!
Join WhatsApp Group