ಮೂಡಲಗಿ ಪಟ್ಟಣದ ಹಳೆ ಸೇತುವೆ ದುರಸ್ತಿಗೆ ಮನವ
ಮೂಡಲಗಿ: ನಗರದ ಮಧ್ಯದಲ್ಲಿರುವ, ಸಾಕಷ್ಟು ಹಳೆಯದಾದರೂ ಇನ್ನು ಗಟ್ಟಿಮುಟ್ಟಾಗಿರುವ ಹಳೆಯ ಸೇತುವೆಯನ್ನು ರಿಪೇರಿ ಮಾಡಿ ಡಾಂಬರೀಕರಣ ಮಾಡಬೇಕು ಎಂದು ಮೂಡಲಗಿ ಪುರಸಭೆಯ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ
ಮೂಡಲಗಿ ಪಟ್ಟಣದ ಅಭಿವೃದ್ಧಿ ಬಳಗದವರಿಂದ ಬಸ್ಟ್ಯಾಂಡ್ ಹತ್ತಿರ ಇರುವ ಹಳೆಯ ಸೇತುವೆ ದುರಸ್ತಿ ಮಾಡಿ ಎಂದು ಮೂಡಲಗಿ ಮುಖ್ಯಾಧಿಕಾರಿಗಳಾದ ತುಕಾರಾಮ ಮಾದರ ಅವರಿಗೆ ಮನವಿ ನೀಡಿದರು.
ಹಳೆಯ ಸೇತುವೆ ದುರಸ್ತಿ ಮಾಡಿದರೆ ವಾಹನ ದಟ್ಟಣೆ ಕಡಿಮೆ ಆಗುತ್ತದೆ. ಸುಮಾರು ದಿನಗಳಿಂದ ಮೂಡಲಗಿ ನಾಗರಿಕರ ಬೇಡಿಕೆ ಕೂಡಾ ಇದೇ ಆಗಿದೆ. ಹಳ್ಳಕ್ಕೆ ಇನ್ನೊಂದು ಹೊಸ ಸೇತುವೆಯಿದ್ದು ಯಾರೂ ಹಳೆಯ ಸೇತುವೆಯ ಮೇಲೆ ಹಾಯದ ಕಾರಣ ಒಂದೇ ಸೇತುವೆಯ ಮೇಲೆ ಟ್ರಾಫಿಕ್ ಜಾಮ್ ಆಗುತ್ತದೆ. ಕಬ್ಬಿನ ಹಂಗಾಮಿನಲ್ಲಿಯಂತೂ ತೀರಾ ದಟ್ಟಣೆಯಾಗುತ್ತದೆ ಆದ್ದರಿಂದ ಹಳೆಯ ಸೇತುವೆಯನ್ನು ಬೇಗ ರಿಪೇರಿ ಮಾಡಿ ವಾಹನಗಳು ಹಾದು ಹೋಗಲು ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಗುರುನಾಥ ಗಂಗನ್ನವರ, ಮಹಾಲಿಂಗಯ್ಯ ನಂದಗಾವಮಠ, ಸುರೇಶ ಎಮ್ಮಿ, ಶಿವಾನಂದ ಕುಂಬಾರ, ಸಂತೋಷ ಹೊಸಟ್ಟಿ, ಚಂದ್ರು ಪತ್ತಾರ, ಶಿವಬಸು ಗಾಡವಿ, ಸುಭಾಸ ಕಡಾಡಿ ಮತ್ತು ಇನ್ನು ಅನೇಕರು ಪಾಲ್ಗೊಂಡಿದ್ದರು.