spot_img
spot_img

ಐಸಿಯು ನಲ್ಲಿವೆ ರಾಜ್ಯದ ವಿಶ್ವ ವಿದ್ಯಾಲಯಗಳು !

Must Read

- Advertisement -

ಐಸಿಯು ಅಂದ್ರೆ ಮರಣದ ಶೈಯ್ಯಯಲ್ಲಿವೆ ಕರ್ನಾಟಕ ರಾಜ್ಯದ ಬಹುತೇಕ ವಿಶ್ವ ವಿದ್ಯಾಲಯಗಳು !

ಯಾವುದೇ ಮುಂದಾಲೋಚನೆಯಿಲ್ಲದೆ ಸ್ಥಾಪಿತವಾದ, ಯಾವುದೇ ಮೂಲಭೂತ ಸವಲತ್ತು ಸೌಕರ್ಯ ಇರದ ರಾಜ್ಯದ ಕೆಲವು ವಿಶ್ವವಿದ್ಯಾಲಯಗಳು ದನದ ಕೊಟ್ಟಿಗೆ ಆಗಿವೆ ಎಂದರೆ ತಪ್ಪಲ್ಲ. ವಿಶ್ವ ವಿದ್ಯಾಲಯಗಳಲ್ಲಿ ಬೆಳೆದ
ಹುಲ್ಲು ಕಸ ಕೀಳಲು ದುಡ್ಡಿಲ್ಲ. ಹಂಪಿ ವಿಶ್ವವಿದ್ಯಾಲಯದಲ್ಲಿ ವಿದ್ಯುತ್ ಬಿಲ್ ಕಟ್ಟಲು ದುಡ್ಡಿಲ್ಲವಂತೆ ! ಬಹುತೇಕ ವಿಶ್ವ ವಿದ್ಯಾಲಯಗಳು ಅತ್ಯಂತ ದಯನೀಯ ಸ್ಥಿತಿಯಲ್ಲಿವೆ.

ಆರ್ಥಿಕ ಮುಗ್ಗಟ್ಟು ಸುಧಾರಣೆಗೆ ಆಪತ್ತು

- Advertisement -

ಕೇಂದ್ರ ಸರಕಾರ ನೀಡುವ ಅತೀ ಕಡಿಮೆ ಧನ ಸಹಾಯದಿಂದ ವಿಶ್ವ ವಿದ್ಯಾಲಯಗಳು ನಡೆಯಲು ಸಾಧ್ಯವಿಲ್ಲ.
ರಾಜ್ಯ ಸರಕಾರವು ಹಲವು ಜನಪ್ರಿಯ ಯೋಜನೆಯಡಿಯಲ್ಲಿ ಆರ್ಥಿಕ ಸಂಕಟ ಎದುರಿಸುತ್ತಿದೆ. ಗ್ಯಾರಂಟಿಗಳ ಪರಿಣಾಮ ವಿಶ್ವವಿದ್ಯಾಲಯಗಳ ಮೇಲೆ ಆಗಿದೆ. ಯಾವುದೇ ಸುಧಾರಣೆ ಕಾಣದ ವಿಶ್ವ ವಿದ್ಯಾಲಯಗಳು ಕೇವಲ ಪದವಿ ಬಿಕರಿ ಮಾಡುವ ಕೇಂದ್ರಗಳಾಗಿವೆ.

ಅತಿಥಿ ಉಪನ್ಯಾಸಕರಿಂದ ಬೋಧನೆ
_________________________
ಬಹುತೇಕ ವಿಶ್ವವಿದ್ಯಾಲಯ ಗಳಲ್ಲಿ  ಪೂರ್ಣ ಪ್ರಮಾಣದ ಶಿಕ್ಷಕ ಬೋಧಕ ಸಿಬ್ಬಂದಿಯ ಕೊರತೆ ಇದೆ ಮತ್ತು
ಮೌಲಿಕ ಶಿಕ್ಷಣ ನೀಡದೆ ಅರೆಕಾಲಿಕ ಅತಿಥಿ ಉಪನ್ಯಾಸಕರಿಂದ ಬೋಧನೆ ಮಾಡಿಸಿ ಸ್ವಲ್ಪ ಮಟ್ಟಿಗೆ ವಿಶ್ವ ವಿದ್ಯಾಲಯ ಜೀವ0ತ ಇಡುವ ಕೆಲಸ ನಡೆದಿದೆ. ಇದರ ಪರಿಣಾಮ ಸಾಇಕ್ಷಣದ ಮೇಲಾಗುತ್ತಿದೆ. ಯಾವುದೇ ಯುಜಿಸಿ ಕಾರ್ಯಕ್ರಮದ ಹಣ ಸಿಗುತ್ತಿಲ್ಲ. ಸಂಶೊಧನೆ ಅವಿಷ್ಕಾರ ನೆಲ ಕಚ್ಚಿವೆ. ಬಡವರಿಗೆ ದಲಿತರಿಗೆ ವಿಶ್ವ ವಿದ್ಯಾಲಯಗಳ ಶಿಕ್ಷಣ ಕನಸಿನ ಮಾತಾಗಿದೆ.

ಶೈಕ್ಷಣಿಕ ಅರ್ಹತೆಯನ್ನು ನೋಡದೆ ನೇಮಕಾತಿ
_________________________

- Advertisement -

ವಿಶ್ವ ವಿದ್ಯಾಲಯಗಳ ಕುಲಪತಿ ಕುಲಸಚಿವರ ನೇಮಕಕ್ಕೆ ಒಂದು (ಸರ್ಚ್ ಕಮಿಟಿ) ಶೋಧನೆ ಸಮಿತಿಯ ಅವಗಾಹನೆಗೆ ಬಾರದೆ ಜಾತಿ ಹಣದ ವ್ಯವಹಾರದ ಸಹಾಯದಿಂದ ವಿಶ್ವ ವಿದ್ಯಾಲಯಗಳಲ್ಲಿ ಲಾಬಿ ವಸೂಲಿ ಮಾಡಿ ಕೆಲಸ ಪಡೆದಿದ್ದಾರೆ. ಈ ಬಗ್ಗೆ ತನಿಖೆಯಾಗಬೇಕಾಗಿದೆ. ವಿಶ್ವವಿದ್ಯಾಲಯಗಳಲ್ಲಿಯೇ ಹೀಗಾದರೆ ಸಾಮಾನ ಕಾಲೇಜುಗಳ ಗತಿಯೇನು ? ಲಾಬಿಯಿಂದ ನೇಮಕಗೊಂಡ ಕುಲಸಚಿವರು ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವೆ ?

ತಜ್ಞರ ಸಮಿತಿ ಇರದ ವಿಶ್ವ ವಿದ್ಯಾಲಯಗಳು
_______________________
ಅನೇಕ ವಿಶ್ವ ವಿದ್ಯಾಲಯಗಳಲ್ಲಿ ಸೇವಾ ರಜಿಸ್ಟರ್ ಇಟ್ಟಿಲ್ಲ.
ಇದ್ದರೂ ಸಹಿತ ಶೈಕ್ಷಣಿಕ ಅರ್ಹತೆಯನ್ನು ಹೊಂದಿರುವ ಪಿ ಎಚ್ ಡಿ ಪದವಿಯನ್ನು ಸೇವಾ ರಿಜಿಸ್ಟರ್ ನಲ್ಲಿ ಸೇರಿಸಿಲ್ಲ .
ವಿಶ್ವ ವಿದ್ಯಾಲಯಗಳ ಮಾನ್ಯತೆ ಇರದ ಪಿ ಎಚ್ ಡಿ ಪದವಿ ಅಥವಾ ಗೌರವ ಡಾಕ್ಟರೇಟ್ ಪಡೆದು ‘ಡಾ’ ಹಚ್ಚಿ ಕೊಳ್ಳುವದು ! ನ್ಯಾಯಾ0ಗ ವ್ಯವಸ್ಥೆಯ ವಿರುದ್ಧದ ಚಟುವಟಿಕೆ ಇಂಥವೆಲ್ಲ ಅಪಸವ್ಯಗಳು ನಡೆದಿವೆ. ಈ ಕೂಡಲೇ ಎಲ್ಲಾ ವಿಶ್ವ ವಿದ್ಯಾಲಯಗಳಲ್ಲಿ ತಜ್ಞ ಸಮಿತಿ ನಿಯಮಿಸಿ ಇಂತಹ ಅನಾಹುತದಿಂದ ಹೊರ ಬರಲಿ.

ಯಾವ ಉದ್ದೇಶಕ್ಕೆ ಹೆಚ್ಚಿನ ವಿಶ್ವ ವಿದ್ಯಾಲಯಗಳು
_________________________

ಲಂಚ ವಂಚನೆಯ ಕೇಂದ್ರಗಳಾಗಿ ಮಾರ್ಪಟ್ಟ ವಿಶ್ವವಿದ್ಯಾಲಯಗಳು ಆವಸಾನದ ಅಂಚಿನಲ್ಲಿರುವಾಗ ಯಾವ ಉದ್ದೇಶಕ್ಕೆ ಹೊಸ ಹೆಚ್ಚುವರಿ ವಿಶ್ವ ವಿದ್ಯಾಲಯಗಳು ಎಂಬುದು ಯಕ್ಷ ಪ್ರಶ್ನೆ .

ಈ ಕೂಡಲೇ ಸರಕಾರ ತೆಗೆದುಕೊಂಡ ಆಯಾ ವಿಶ್ವ ವಿದ್ಯಾಲಯಗಳನ್ನು ಹಳೆಯ ವಿಶ್ವವಿದ್ಯಾಲಯಗಳ ಜೊತೆ ಮರು ಸೇರ್ಪಡೆ ಮಾಡಿದರೆ ಖಂಡಿತ ಆರ್ಥಿಕ ತೊಂದರೆ ಹೊರೆಯನ್ನು ಕಡಿಮೆ ಮಾಡ ಬಹುದು. ಈ ಕೂಡಲೇ ರಾಜ್ಯ ಸರಕಾರ ಇತ್ತ ಗಮನ ಹರಿಸಲು ಕೋರಿಕೆ.

(ಇಲ್ಲಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ )

ಡಾ.ಶಶಿಕಾಂತ ಪಟ್ಟಣ ರಾಮದುರ್ಗ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನ : ಹೀಗೇ ಒಮ್ಮೆ

ಹೀಗೇ ಒಮ್ಮೆ ____________ ಹೀಗೇ ಒಮ್ಮೆ ನಾನು ನೀನು ಅದೇ ಮರದ ನೆರಳಲಿ ಕುಳಿತು ಮಾತಾಡಬೇಕಿದೆ ನೆನಪಿಸಿಕೊಳ್ಳಬೇಕಿದೆ ಮತ್ತೆ ಹಳೆಯ ಕ್ಷಣಗಳ ಹಂಚಿಕೊಂಡ ಕಥೆ ಕವನ ಮಾತು ಚರ್ಚೆ ಸಂವಾದ ನಗೆ ಪ್ರೀತಿಯ ಸವಿಯ ಸವಿಯಬೇಕಿದೆ. ಆಗ ನಮ್ಮಿಬ್ಬರ ಮಧ್ಯೆ ಮೆರೆದ ಆದರ್ಶಗಳ ಮೆಲುಕು ಹಾಕಬೇಕಿದೆ ಅಂದು ಮಳೆಯಲ್ಲಿ ತಪ್ಪನೆ...
- Advertisement -

More Articles Like This

- Advertisement -
close
error: Content is protected !!
Join WhatsApp Group