spot_img
spot_img

ಕವನ : ವೀರಗಾಥೆ

Must Read

spot_img
- Advertisement -

ವೀರಗಾಥೆ

ವೀರ ಯೋಧರಿಗೊಂದು ನನ್ನ ನುಡಿ ನಮನ

ಕೇಳಿರಿ ಭಾರತೀಯರೇ ಕೆಚ್ಚೆದೆಯ ವೀರರ ಕಥೆಯನ್ನ
ನುಸುಳಿ ಬಂದ ಪಾಕಿಸ್ತಾನಿಯರ  ಹೊಸಕಿ ಹಾಕಿದ ಗಾಥೆಯನ್ನ //

- Advertisement -

ಬೆನ್ನಿಗೆಂದೂ ಇರಿಯೆವು ಎದುರಿಗೆ ಬಂದರೆ ಬಿಡೆವು
ನಾವು ಕೆಚ್ಚೆದೆಯ ಭಾರತೀಯ ವೀರರು ಸೈನಿಕರು
ಕದನಕ್ಕಿಳಿದರೆ ಗೆಲ್ಲದೆ ಇರಲಾರೆವು ನಾವು ಇರಲಾರೆವು
ವೈರಿಗಳ ಕೊಚ್ಚದೆ ಇರಲಾರೆವು ನಾವು ಬದುಕಲಾರೆವು//

ಭಾರತೀಯರು ನಾವು ಗಂಡೆದೆ ಹುಲಿಗಳು
ತಡವಿದರೆ ಬಿಡಲೊಲ್ಲೆವು ಗೆಲ್ಲದೆ ಇರಲಾರೆವು
ಎದೆ ಬಗೆದರೂ ಗುಂಡಿಗೆ ಒಡೆದರು ಒಂದೇ ಮಾತರಂ
ಎನ್ನುತಲೇ ಇರುವೆವು ನಾವು ಭಾರತೀಯರು//

ನುಸುಳಿದರಂದು ಪಾಕಿಸ್ತಾನಿ ಅರೆಸೇನೆ
ಜೊತೆಗೆ ಉಗ್ರಗಾಮಿಗಳೆಂಬ ನರರಕ್ಕಸರು
ನಡೆಯಿತಂತೆ ಭಾರತ ಪಾಕಿಗೆ ಸಶಸ್ತ್ರ ಸಂಘರ್ಷವು
ಕಾಶ್ಮೀರ ಭಾರತದ ಶಿಖರದ ಅಡಿಯಲ್ಲಿ ಯುದ್ಧವು//

- Advertisement -

ಭಾರತೀಯ ಗಸ್ತು ಪಡೆಗೆ ಹೊಂಚು ತಿಳಿದಿತ್ತು
ವಾಯುಪಡೆಯು ಯುದ್ಧಕ್ಕೆ ಸಣ್ಣದ್ದವಾಗಿತ್ತು
ಪರ್ವತ ಚ್ಛಾದಿತ ಪ್ರದೇಶದಲ್ಲಿ ಕಾದಾಟ ನಡೆದಿತ್ತು
ಭಾರತ ಕಳಸ ಕಶ್ಮೀರಕ್ಕಾಗಿ ಯುದ್ಧ ರಭಸದಿ ನಡೆದಿತ್ತು//

ಮೇಘದೂತ್ ಸಿಯಾಚಿನ್ ನೀರ್ಗಲ್ಲು
ಎಂದೆಂದಿಗೂ ಭಾರತೀಯರ ಸ್ವತ್ತು
ಎದುರಿಸಿ ನಿಲ್ಲುವೆವು ಬರುವ ಎಲ್ಲಾ ಆಪತ್ತು ಎಂದರು
ಸುರುವಾಯಿತು ಕುತಂತ್ರ ಹೂಡಿದ ಪಾಕಿಸ್ತಾನಿ ಸೈನಿಕರ ಗಸ್ತು//

ಸೆರೆ ಹಿಡಿದು ಕೊಂದರು ಅನೇಕ ಭಾರತ ಸೈನಿಕರ
ಯುದ್ಧ ಸಾಮಗ್ರಿಗಳ ಕೆಡಿಸಿದರು ಒಡೆದರು
ರೊಚ್ಚಿಗೆದ್ದ ಭಾರತದ ಸೈನಿಕರು ಹೋರಾಟಕ್ಕೆ
ತೊಡೆತಟ್ಟಿ ನಿಂತರು ನಮ್ಮ ವೀರ ಶೈನಿಕರು
ಭಾರತಾಂಬೆಯ ಮಕ್ಕಳು ಹೆಮ್ಮೆಯ ಮಕ್ಕಳು//

ಒಬ್ಬರ ಮೇಲೊಬ್ಬರಂತೆ ಸೈನಿಕರ ಸಾವುಗಳು
ಆಕ್ರಮಣಕ್ಕೆ ನಾಂದಿ ಹಾಡಿದರು
ಕ್ಯಾಪ್ಟನ್ ಕರ್ನಲ್ಗಳ ವೀರ ಮರಣ
ನಡೆಯಿತು ಎಂದಿಲ್ಲದ ಮಾರಣಹೋಮ
ಏನೇ ಆದರೂ ನಿಲ್ಲಲಿಲ್ಲ ಕಾದಾಟ ಸೆಣಸಾಟ//

ಫಿರಂಗಿ ದಾಳಿ ಮದ್ದು ಗುಂಡುಗಳು ಸುರಿದವು
ರಕ್ತ ತರ್ಪಣ ಜೀವ ಅರ್ಪಣ ಆಗಲಿ ಮರಣ
ಅತಿಕ್ರಮಿಸಿದ ಪ್ರದೇಶ ವಶಪಡಿಸಿಕೊಳ್ಳದೆ ಬಿಡೆವು
ಹೆಂಡತಿ ಮಕ್ಕಳು ತಾಯಿ ತಂದೆ ಕಾಣಲಿಲ್ಲ
ವೀರರ ಕಣ್ಣಿಗೆ ಕಂಡಿದ್ದೊಂದೇ ಗೆಲುವಿನ ಗುರಿ //

ಹಿಮದ ಬಂಡೆಗಳ ಅಡಿಯಲ್ಲಿ ಘೋರ ಯುದ್ಧ
ನೆಲಬಾಂಬುಗಳೇ ಇರಲಿ ಗುಂಡುಗಳೆ ಹಾರಲಿ
ತಲೆಯೋಡ್ಡಿ ತಡೆಯುವೆವು ಅತಿಕ್ರಮಣ ನಿಲ್ಲಿಸುವೆವು
ಮೋಸದ ಸಂಚು ಕುತಂತ್ರವ ಉಗ್ರರ ಅಟ್ಟಹಾಸವ
ಎನ್ನುತ ವ್ಯೊಹ ರಚಿಸಿದರು ಮುತ್ತಿಗೆಯನ್ನು ಹಾಕಿದರು //

ಸಾವು ನೋವುಗಳ ಸಹಿಸಿ ಸಿಡಿದೆದ್ದು ನಿಂತರು
ಮೂರು ತಿಂಗಳುಗಳ ಕಾಲ ಎಲ್ಲೆಲ್ಲೂ ಕೋಲಾಹಲ
ಉರುಳಿದವು ಹೆಣಗಳು ಕೆರಳಿದವು ಭಾರತೀಯ ಮನಗಳು
ಮೋಸಕ್ಕೆ ಪ್ರತಿಕಾರ ವಿರೋಧ ನಿಲ್ಲದ ಯುದ್ಧ
ಮಂಕಾದವು ಪಾಕಿಸ್ತಾನಿ ಮುಖಂಡರ ಮುಖಗಳು//

ಮೋಸದ ಸಂಚು ನಿಲ್ಲದೆಂಬ ಮಾತು ಸತ್ಯವಾಯಿತು
ಮಾಡಿದ್ದುಣ್ಣೋ ಮಾರಾಯ ಎಂಬ ಗಾದೆ ಮೆರೆಯಿತು
ಎದೆ ಬಗೆದರೂ ಗುಂಡಿಗೆ ಒಡೆದರು ವಂದೇ ಮಾತರಂ ಎನ್ನುವೆವು
ಜೀವವಿರುವವರೆಗೆ ತಾಯಿ ಸೇವೆ ಮಾಡುವೆವು
ಎಂದರು ಭಾರತೀಯ ಸೈನಿಕರು,ವೀರ ಸೈನಿಕರು//

ಭಾರತದ ಧ್ವಜ ಹಾರಿಸಿದರು ಜೈ ಜೈಕಾರ
ವಂದೇ ಮಾತರಂ ಭಾರತ್ ಮಾತಾ ಕಿ ಜೈ ಎಂದರು
ಎಲ್ಲೆಲ್ಲೂ ವೀರಘೋಷಗಳು ಗೆಲುವಿನ ಜಯಕಾರ
ಹಾರಿಸಿದರು ವೀರ ಪತಾಕೆ ಏರಿಸಿದರು
ಕಾಶ್ಮೀರದಲ್ಲಿ ಕೇಸರಿ ಬಿಳಿ ಹಸಿರಿನ ದ್ವಜ ಅಂದೇ//

ತ್ಯಾಗ ಬಲಿದಾನಗಳು ಸಾರ್ಥಕವಾದವು
ಹರಸಿದ ತಾಯಿ ಹೆಂಡತಿಯರ ಮುಖ ಅರಳಿದವು
ಎಲ್ಲೆಲ್ಲೂ ಆರತಿ ಭಾರತಾಂಬೆಗೆ ಆರತಿ
ವೀರ ಪುತ್ರರಿಗೆ ಕಂಚಿನ ಆರತಿ ಬೆಳಗಿದರು ಮೆರೆಸಿದರು //

ಉಳಿದರಂದೇ ಭಾರತೀಯರ ಎದೆಯೊಳಗೆ ಹುತಾತ್ಮರು
ಅಚ್ಚಾದರಂದೇ ಕೆತ್ತಿದರಿವರ ಹೆಸರುಗಳ
ವೀರಗಲ್ಲುಗಳ ಮೇಲೆ ಉಳಿಯಿತು ಸತ್ಯ
ಅಳಿಯಿತು ಅಸತ್ಯ ಭೂಮಿ ಇರುವವರೆಗೆ
ಮರೆಯದ ಹೋರಾಟ ನಡೆಸಿದರು ಹಸಿರಾದರು
ಭಾರತೀಯರ ಹೆಸರಾದರು//

ಡಾ ಅನ್ನಪೂರ್ಣ ಹಿರೇಮಠ

- Advertisement -
- Advertisement -

Latest News

ಹನಿಗವನಗಳು

ಹನಿಗವನಗಳು 1) ಸುಳ್ಳುಗಾರರು ಹತ್ತು ನಾಲಿಗೆಯ ರಾವಣ ಹೇಳಲಿಲ್ಲ ಒಂದು ಸುಳ್ಳು ಒಂದೇ ನಾಲಿಗೆಯ ರಾಜಕಾರಣಿ ಹೇಳುತ್ತಾನೆ ದಿನಕ್ಕತ್ತು ಸುಳ್ಳು! 2) ಶೀಲಾ ನೆರೆಮನೆ ಶೀಲಾ ಪರ ಪುರುಷರೊಡನೆ ಸೇರಿ ಹೆಸರು ಕೆಡಿಸಿಕೊಂಡಳು 3) ಟಿವಿ ಹಾವಳಿ ಮನೆಯಲ್ಲಿ ಟಿವಿ ಮುಂದೆ ಸದಾ ಇರುವ ವಿದ್ಯಾ ರ್ಥಿಗಳು ಶಾಲೆಯಲ್ಲಿ ಹಿಂದೆ ಬೀಳುವರು. 4) ವಾಸ್ತವ ಕಟ್ಟುವವು...
- Advertisement -

More Articles Like This

- Advertisement -
close
error: Content is protected !!
Join WhatsApp Group