spot_img
spot_img

ದಿನಕ್ಕೊಬ್ಬ ಶರಣ ಮಾಲಿಕೆ

Must Read

- Advertisement -

ಶರಣ ಡೋಹರ ಕಕ್ಕಯ್ಯ

ಅಂಕಿತನಾಮ: ಅಭಿನವ ಮಲ್ಲಿಕಾರ್ಜುನ. ಕಾಯಕ: ಚರ್ಮ ಹದ ಮಾಡುವುದು.

12ನೇ ಶತಮಾನದಲ್ಲಿ ಕರ್ನಾಟಕದ ಕಲ್ಯಾಣವು ಮಾನವ ಹಿತ ಸಾಧನೆಯ ಕಾರ್ಯಕ್ಷೇತ್ರವಾಗಿತ್ತು ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಯದಲ್ಲಿ ತೊಡಗಿದ್ದರು ಇದರ ಕೀರ್ತಿ ಎಲ್ಲೆಡೆಯಲ್ಲಿ ಹಬ್ಬಿತು ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣ ಕಡೆಗೆ ಬರಹತ್ತಿದರು, ಕಾಶ್ಮೀರದಿಂದ ಮಹಾದೇವ ಭೂಪಾಲ, ಅಪಘಾನಿಸ್ತಾನದಿಂದ ಮರುಳ ಶಂಕರ ದೇವರು ,ಸೌರಾಷ್ಟ್ರದಿಂದ ಆದಯ್ಯ ಮಾಳವ ದೇಶದಿಂದ ಕಕ್ಕಯ್ಯನವರು ಬಂದರು.

- Advertisement -

ಕಕ್ಕಯ್ಯ ಚಾಂಡಾಲ ರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು,ಚರ್ಮ ಹದ ಮಾಡುವುದು ಆತನ ಕಸುಬು ಆಗಿತ್ತು ಆತ ಬಸವಣ್ಣನವರ ಆಚಾರ ವಿಚಾರಗಳಿಂದ ಪ್ರಭಾವಿತನಾದ ಆತ ಲಿಂಗ ದೀಕ್ಷೆಯನ್ನು ಹೊಂದಿ, ಆಚಾರ ಸಂಪನ್ನತೆಯಿಂದ ವೀರಮಹೇಶ್ವರನೆಂಬ ಅಗ್ಗಳಿಕೆಗೆ ಪಾತನಾದನು, ಬಸವಣ್ಣನವರು ಕಕ್ಕಯ್ಯನವರ ಬಗ್ಗೆ ವಿಶೇಷ ಗೌರವ ಹೊಂದಿದ್ದರು.

ಕಕ್ಕಯ್ಯನ ಮನೆಯ ಪ್ರಸಾದಕ್ಕೆ ಹಾತೊರೆಯುತ್ತಿದ್ದರು ಡೋಹರು ಊರೊಳಗೆ ಬರುವುದೇ ಅಪರಾಧ ಎನ್ನುವ ಕಾಲದಲ್ಲಿ ಬಸವಣ್ಣನವರು ಅವರನ್ನು ಅಪ್ಪಿಕೊಂಡರು ಕುಲದ ಕೀಳರಿಮೆಯಿಂದ ಅವರನ್ನು ಮೇಲಕೆತ್ತಿದ್ದರು ಕಕ್ಕಯ್ಯನಿಗೆ ಎಷ್ಟು ಸಂತೋಷವಾಗಬೇಡ ಕಕ್ಕಯ್ಯ ಹಂತ ಹಂತವಾಗಿ ಮೇಲೆ ಏರಿದ ಮತ್ತು ದಿವ್ಯ ವ್ಯಕ್ತಿತ್ವವನ್ನು ಹೊಂದಿದ.

ಶರಣ ಕಕ್ಕಯ್ಯ ಇಷ್ಟಲಿಂಗ ನಿಷ್ಠ ಆಚಾರ ಸಂಪನ್ನತೆ ಜೊತೆಗೆ ಆತ ಗಣಾಚಾರಿ ಶಿವನಿಂದೆ ಕೇಳದೆ, ಇಷ್ಟಲಿಂಗವನ್ನು ಕಲ್ಲು ಎಂದವನಿಗೆ ಶಿಕ್ಷೆ ಕೊಡದೆ ಬಿಡುತ್ತಿರಲಿಲ್ಲ ಕೀಳು ಕುಲದಲ್ಲಿ ಹುಟ್ಟಿದ ನನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ ಶರಣರನ್ನು ಆತ ಕೃತಜ್ಞತೆಯಿಂದ ನೆನೆಯುತ್ತಿದ್ದ

- Advertisement -

ಡೋಹರ ಕಕ್ಕಯನು ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರೊಡಗೂಡಿ ಅನು ಭಾವ ಸಂಪನ್ನನೆನಿಸಿದ. ಶ್ರೀಪತಿ ಪಂಡಿತ ಹಾಗೂ ಕಕ್ಕಯ್ಯ ಇಬ್ಬರೂ ಗಜವಾಡದ ಊರಿನವರು. ಅವರು ಇಬ್ಬರೂ ಅನ್ಯೋನ್ಯವಾಗಿದ್ದರು ಒಂದು ದಿವಸ ಶ್ರೀಪತಿ ಪಂಡಿತರು ಕಕ್ಕಯ್ಯನ ಮನೆಯಲ್ಲಿ ಊಟ ಮಾಡಿದರು. ಇದನ್ನು ಕಂಡು ಮೇಲ್ವರ್ಗದವರು ಅಂದರೆ ಬ್ರಾಹ್ಮಣರು ರೊಚ್ಚಿಗೆದ್ದರು. ಆವಾಗ ಕಕ್ಕಯ್ಯನವರು ನಿಜವಾದ ಕುಲಜರು ಯಾರೆಂಬುದನ್ನು ತೋರಿಸುವದಕ್ಕಾಗಿ ಒಂದು ಪವಾಡವನ್ನೇ ಮಾಡಿದರು.

ಅದು ಏನೆಂದರೆ ಒಂದು ಅರಿವೆಯಲ್ಲಿ ಬೆಂಕಿಯ ಕೆಂಡಗಳನ್ನು ಕಟ್ಟಿ ಒಂದು ಗಿಡಕ್ಕೆ ಜೋತುಬಿಟ್ಟರು ಆ ಬೆಂಕಿಯು ಅರಿವೆಯನ್ನು ಹಾಗೂ ಗಿಡವನ್ನು ಸುಡಲಿಲ್ಲ .
ಇತ್ತ ಊರಲ್ಲಿ ಯಾರ ಮನೆಯಲ್ಲಿ ಒಲೆಗೆ ಬೆಂಕಿ ಹತ್ತಲಿಲ್ಲ ಎಲ್ಲರೂ ಕಂಗಾಲಾದರೂ ಇತ್ತ ಕಡೆ ಬಂದು ನೋಡಿದರೆ ಅಲ್ಲಿ ಒಂದು ಆಶ್ಚರ್ಯ ಬೇಕಾಗಿತ್ತು. ಆಗ ಎಲ್ಲ ಬ್ರಾಹ್ಮಣ ವರ್ಗದವರು ಕಕ್ಕಯ್ಯನವರಿಗೆ ಕ್ಷಮಾಪಣೆ ಕೇಳಿದರು ಆಗ ಎಲ್ಲರ ಮನೆಯಲ್ಲಿಯೂ ಅಗ್ನಿ ಹೊತ್ತಿಕೊಂಡಿತ್ತು ಇದರಿಂದ ಕಕ್ಕಯ್ನನವರ ಕೀರ್ತಿ ಬೆಳೆಯಿತು .

ಗಣಾಚಾರಿಯಾದ ಕಕ್ಕಯ್ಯ ಕಲ್ಯಾಣ ಕ್ರಾಂತಿಯಲ್ಲಿ ಮುಖ್ಯವಾದ ಪಾತ್ರ ವಹಿಸಿದ್ದು ತಿಳಿದು ಬರುತ್ತದೆ. ಉಳುವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಬಹಳ ಹೋರಾಟ ಮಾಡಿದ ಕಾತರವಳ್ಳಿ ಕಾಳಗದ ನಂತರ ವೈರಿಗಳನ್ನು ಬೇರೆಡೆ ಗೆ ಸೆಳೆದು ಬೆಳಗಾವಿಯ ಕಕ್ಕೇರಿಯ  ಕಡೆ ತಿರುಗಿಸಿದರು. ಕಕ್ಕೇರಿಯ ಬಳಿ ಹೋರಾಡುತ್ತಾ ಹುತಾತ್ಮರಾದರೆಂದು ತಿಳಿದು ಬರುತ್ತದೆ. ಆತನ ಹೆಸರಿನ ಭಾವಿ, ಕೆರೆ ಮತ್ತು ಸಮಾಧಿಯು ಕೂಡ ಇನ್ನೂ ಇದೆ. ಶರಣರ ಉಳಿವಿಗಾಗಿ ವಚನ ಸಾಹಿತ್ಯದ .ರಕ್ಷಣೆಗಾಗಿ ಹೋರಾಡಿ ಆತ್ಮ ಸಮರ್ಪಣೆ ಮಾಡಿಕೊಂಡ ಹಿರಿಯ ಶರಣ ಡೋಹರ ಕಕ್ಕಯ್ಯ ಬಸವಾದ ಶರಣರ ವಿಶೇಷ ಗೌರವಕ್ಕೆ ಪಾತ್ರನಾದ ದಲಿತ ಶರಣ ಡೋಹಾರ ಕಕ್ಕಯ್ಯ ಇವರು ಡೋರ ಜಾತಿ ಗೆ ಸೇರಿದವರು. ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಶರಣರಾದರು. ಕಲ್ಯಾಣದ ಕ್ರಾಂತಿಯ ಸಂದರ್ಭದಲ್ಲಿ ಚೆನ್ನಬಸವಣ್ಣ ನವರ ಜೊತೆ ಉಳವಿಯತ್ತ ಸಾಗುತ್ತಾರೆ
ಕಕ್ಕೇರಿಯಲ್ಲಿ ಐಕ್ಯರಾಗುತ್ತಾರೆ ಇವರ ಕಾಲ 1130 ಅಭಿನವ ಮಲ್ಲಿಕಾರ್ಜುನ ಎಂಬ ಅಂಕಿತನಾಮವನ್ನು ಇಟ್ಟುಕೊಂಡು ಆರು ವಚನಗಳನ್ನು ರಚನೆ ಮಾಡಿದ್ದಾರೆ. ಒಂದು ವಚನ

ಎನ್ನ ಕಷ್ಟಕುಲದಲ್ಲಿ ಹುಟ್ಟಿದನೆಂಬ ಕರ್ಮವ ಕಳೆದು ಮುಟ್ಟಿ ಪಾವನ ಮಾಡಿ ಕೊಟ್ಟನಯ್ಯ ಎನ್ನ ಕರಸ್ಥಲಕ್ಕೆ ಲಿಂಗವ
ಆ ಲಿಂಗ ಬಂದು ಸೋಂಕಿದೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತಯಾ; ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ ಎನ್ನ ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ; ಎನ್ನ ಅರುವಿನಲ್ಲಿ ಪ್ರಸಾದವನಲೆಗೊಳಿಸಿದ;
ಇಂತಿ ತ್ರಿವಿಧ ಸ್ಥಾನವ ಶುದ್ಧವ ಮಾಡಿ ಚತುರ್ವಿದ ಸಾರಾಯಸ್ಥಳವ ಸಂಬಂಧವ ಮಾಡಿ ಸಂಗನ ಬಸವಣ್ಣನ ಕರುಣದಿಂದ ಪ್ರಭುದೇವರ ಶ್ರೀ ಪಾದವ ಕಂಡು ಬದುಕಿದೆನು ಕಾಣಾ ಅಭಿನವ ಮಲ್ಲಿಕಾರ್ಜುನ.

ನಾನು ಕೀಳು ಕುಲದಲ್ಲಿ ಹುಟ್ಟಿದೆ ಆದರೆ ಬಸವಣ್ಣ ಎನ್ನ ಅಂಗೈಯಲ್ಲಿ ಲಿಂಗ ಕೊಟ್ಟರು ಆ ಲಿಂಗದಿಂದ ನನ್ನ ಸರ್ವಾಂಗ ಶುದ್ಧವಾಯಿತು ಶರೀರಗಳು ಮೂರು ಸ್ಥೂಲ, ಸೂಕ್ಷ್ಮ, ಕಾರಣ
ಸ್ಥೂಲ ಶರೀರ ದಿಂದ ಇಷ್ಟಲಿಂಗ ಪವಿತ್ರವಾಯಿತು ಸೂಕ್ಷ್ಮ ಶರೀರದಿಂದ ಪ್ರಾಣ ಲಿಂಗ ಪವಿತ್ರವಾಯಿತು ಕಾರಣ ಶರೀರದಿಂದ ಭಾವಲಿಂಗ ಪವಿತ್ರವಾಯಿತು ತನುವಿನಲ್ಲಿ ಗುರುವನೆಲೆಗೊಳಿಸಿದ ಮನದಲ್ಲಿ ಜಂಗಮವ ನೆಲೆಗೊಳಿಸಿದ ಅರುವಿನಲ್ಲಿ ಪ್ರಸಾದವನಲೆಗೊಳಿಸಿದ ಬಸವಣ್ಣನವರ ಕರುಣ ಪ್ರಸಾದದಿಂದ ಹಂತ ಹಂತವಾಗಿ ಮೇಲೇರಿದರು
ಶರೀರದಿಂದ ಗುರು ಸೇವೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟರು ಮನ ಮುಟ್ಟಿ ಜಂಗಮ ಸೇವೆಯನ್ನು ಭಾವ ಶುದ್ಧವಾಗಿ ಪ್ರಸಾದ ಮಾಡುವ ಅವಕಾಶವನ್ನು ಕಲ್ಪಿಸಿಕೊಟ್ಟರು

ತನು ಮನ ಭಾವ ಅಂದರೆ ತ್ರಿವಿಧ ಸ್ಥಾನವನ್ನು ಶುದ್ಧ ಮಾಡಿಕೊಂಡು ಪರಮಾತ್ಮನ ಸಾಲೋಖ್ಯ, ಸಾಮಿಪ್ಯ, ಸಾರೂಪ್ಯ, ಸಾಯುಜ್ಯ ಉಂಟಾಗುವಂತೆ ಮಾಡಿ ನಿಜ ಸ್ಥಿತಿಯನ್ನು ಪಡೆದರು ಬಸವಣ್ಣನವರ ಕರುಣೆಯಿಂದ ಪ್ರಭುದೇವರ ಪಾದವ ಕಂಡು ಮುಕ್ತನಾದನು ಪ್ರಭು ಬಯಲು ಜೀವಿ ಅವರನ್ನು ಕಾಣಬೇಕಾದರೆ ಬಯಲು ರೂಪ ಹೊಂದಬೇಕು ಅಂತಹ ಆತ್ಮ ಸ್ವರೂಪವನ್ನು ಪಡೆದು ಕೊಂಡರು ಅಂತ ನಿಜ ಸ್ಥಿತಿಯನ್ನು ಹೊಂದಿ, ಐಕ್ಯ ಸ್ಥಲ ವನ್ನು ಹೊಂದಿದರು ಇಂಥ ಶರಣರ ಕರುಣೆಯಿಂದ ಪ್ರಭುದೇವರ ಪಾದವ ಕಂಡು ಬದುಕಿದೆನು ಪ್ರಭುವಿನ ಕೃಪೆಗೆ ಪಾತ್ರನಾದೆನು ಅಭಿನವ ಮಲ್ಲಿಕಾರ್ಜುನ ಅಂತ ದೇವರಲ್ಲಿ ಹೇಳಿಕೊಂಡಿದ್ದಾರೆ

ಎನಗೆ ಗುರು ಸ್ಥಲ ತೋರಿದಾತ ಸಂಗನ ಬಸವಣ್ಣನು, ಎನಗೆ ಲಿಂಗಸ್ಥಲ ತೋರಿ ದಾತ ಚೆನ್ನಬಸವಣ್ಣನು,
ಎನಗೆ ಜಂಗಮ ಸ್ಥಲವ, ತೋರಿದಾತ ಸಿದ್ದರಾಮಯ್ಯ
ಎನಗೆ ಪ್ರಸಾದಿಸ್ಥಲ ತೋರಿದಾತ ಬಿಬ್ಬಿ ಬಾಚಯ್ಯ,
ಎನಗೆ ಪ್ರಾಣ ಲಿಂಗಿ ಸ್ಥ ಲ ತೋರಿದಾತನು ಚಂದಯ್ಯ,
ಎನಗೆ ಐಕ್ಯ ಸ್ಥಲ ತೋರಿದಾತನು ಅಜಗಣ್ಣನು,
ನನಗೆ ನಿಜ ಸ್ಥಲ ತೋರಿದಾತ ಪ್ರಭುದೇವರು,
ಇಂತಿ ಸ್ಥಳಗಳ ಕಂಡು 770 ಅಮರಗಣಂಗಳ ಶ್ರೀ ಪಾದಕ್ಕೆ ಶರಣೆಂದು ಬದುಕಿದೆನು ಕಾಣ ಅಭಿನವ ಮಲ್ಲಿಕಾರ್ಜುನ.

ಬಸವಣ್ಣ , ಚನ್ನಬಸವಣ್ಣ , ಸಿದ್ದರಾಮಯ್ಯ , ಬಿಬ್ಬಿ ಬಾಚಿದೇವಯ್ಯ, ನುಲಿಯ ಚಂದಯ್ಯ, ಅಜಗಣ್ಣ, ಪ್ರಭುದೇವರು ಬಸವಾದ ಶರಣರು ಎಲ್ಲರೂ ಒಂದೊಂದು ಸ್ಥಳವನ್ನು ತಿಳಿಸಿಕೊಟ್ಟರು. ಇದರಿಂದ ನನ್ನ ನೀಚ ಕುಲದ ಸೂತಕವು ಹೋಯಿತು. 770 ಶರಣರ ಅನುಗ್ರಹದಿಂದ ನಾನು ಧನ್ಯನಾದೆನು ಎಂದು ಕೃತಜ್ಞತೆಯಿಂದ ಅಭಿನವ ಮಲ್ಲಿಕಾರ್ಜುನನಿಗೆ ಹೇಳಿಕೊಂಡರು.

ಸೌ ಶಾಂತಾ ಜಯಪ್ರಕಾಶ್ ಲಂಬಿ ಸೋಲಾಪುರ
ಅಕ್ಕನ ಅರಿವು
ವಚನ ಅಧ್ಯಯನ ವೇದಿಕೆ
ಬಸವಾದಿ ಶರಣರ ಚಿಂತನಕೂಟ

- Advertisement -
- Advertisement -

Latest News

ತತ್ವಬೋಧನೆಗೆ ಮಠಗಳು ಸಿದ್ಧವಾಗಬೇಕು – ಬಿಇಓ ಯಡ್ರಾಮಿ

ಸಿಂದಗಿ: ಆರ್ಥಿಕ ಸಬಲತೆಯ ಮಠಗಳಾಗದೇ ತತ್ವಭೋಧನೆಗೆ ಮಠಗಳು ಸಿದ್ಧವಾಗಬೇಕು. ಶಾಲೆಗಳಲ್ಲಿ ಶಿಸ್ತು ಮತ್ತು ಶಿಕ್ಷಣ ಕಲಿಯಬಹುದು ಮಠಗಳಿಂದ ಆಧ್ಯಾತ್ಮಿಕತೆ ಮತ್ತು ಸಂಸ್ಕಾರ ಸಿಗುವುದು ಅಲ್ಲದೆ ವಿದೇಶಗಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group