ಕವನ : ನಮಾಮಿ ನಾಗದೇವ

Must Read

ನಮಾಮಿ ನಾಗದೇವ

ಅಣ್ಣನ ಕರೆಯದು ಬಂದಿತು ಹಬ್ಬಕೆ
ತಂದಿತು ಮನದಲಿ ಬಗೆಬಗೆ ಬಯಕೆ
ಹೊರಡಲು ಹರುಷದಿ ತಯಾರಿ ನಡೆದಿದೆ
ರಾಯರ ಮುಖವದು ಬಾಡಿಯೇ ಹೋಗಿದೆ//

ತವರಿಗೆ ಹೊರಟಿಹ ಇವಳಿಗದೋ ಸಡಗರ
ಅವನಲಿ ನುಡಿದಿದೆ ವಿರಹದ ಅಪಸ್ವರ
ವಾಹನ ಬಂದಿತದು ಬಾಗಿಲ ಬಳಿಯಲಿ
ಅವನೂ ನಡೆದನು ಮಡದಿಯ ಜೊತೆಯಲಿ//

ಸಂಭ್ರಮದಿಂದ ನಡೆಯಿತು ಮನೆಯಲಿ ಹಬ್ಬ
ಕ್ಷೀರಾಭಿಷೇಕವ ಮಾಡಿಸಿಕೊಂಡನು ನಾಗಪ್ಪಾ
ಸರತಿಯ ಸಾಲಲಿ ಬಂದರು ಎಲ್ಲರೂ
ತನಿಯನು ಎರೆದು ಪಾವನರಾದರು//

ಜೋಕಾಲಿ ಜೀಕುತ ಕೊಬ್ಬರಿ ಲಾಡು ತಿಂದಿಹರು
ನಾನಾ ನೀನಾ ಎನ್ನುತಲಿ ಸ್ಪರ್ಧೆಗೆ ಇಳಿದಿಹರು
ಗೆಲುವಿಗೆ ನಾನಾ ಸಾಹಸವ ಮಾಡಿಹರು
ಗೆದ್ದವರು ಬೀಗುತ ಮುದದಿಂ ಸಾಗಿಹರು//

ಸೋಲು ಗೆಲವು ಜೊತೆ ಜೊತೆಗೆ ಇರಲಿ
ಜೀವನ ನೌಕೆ ಹೀಗೆ ಸಾಗುತಲಿರಲಿ
ತೇಲಿಸು ನೀನು ಹರುಷದ ಕಡಲಲಿ
ಆಸರೆ ನೀಡು ನಿನ್ನಯ ಮಡಿಲಲಿ//

ನಮಾಮಿ ನಮಾಮಿ ನಾಗ ದೇವಗೆ
ಹರಿಹರರ ಪ್ರೀತಿಗೆ ಪಾತ್ರನಾದವಗೆ
ಸಮುದ್ರ ಮಂಥನದ ಪಾತ್ರಧಾರಿಗೆ
ಗಣಪನ ಉದರಕೆ ಆಸರೆಯಾದವಗೆ//

ಶ್ರೀಮತಿ ಜ್ಯೋತಿ ಕೋಟಗಿ ಬೈಲಹೊಂಗಲ
ಬಿ ಆರ್ ಪಿ . ಚ ಕಿತ್ತೂರು

Latest News

ಶ್ರೇಷ್ಠ ಜಾನಪದ ಸಂಶೋಧಕ ಡಾ ದೇವೇಂದ್ರ ಕುಮಾರ ಹಕಾರಿ

ಅಪ್ಪಟ ದೇಸಿ ಪ್ರಜ್ಞೆಯ ಒಬ್ಬ ಶ್ರೇಷ್ಠ ಜಾನಪದ ಸಂಶೋಧಕ ಕಲಾವಿದ ಲೋಕಗೀತೆ ರಂಗಗೀತೆಗಳನ್ನು ಹೊಸ ದಾಟಿ ಶೈಲಿಯಲ್ಲಿ ರಚಿಸಿ ನಾಟಕ ಅನುವಾದ ವಿಮರ್ಶೆ ಹೀಗೆ ಕನ್ನಡ...

More Articles Like This

error: Content is protected !!
Join WhatsApp Group