spot_img
spot_img

ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಜಾನಪದೀಯ ಸಂಗತಿಗಳ ಅವಲೋಕನ

Must Read

- Advertisement -

ಜಾನಪದವು ಸಾಹಿತ್ಯ ಬಾಂದಳದಲ್ಲಿ ತನ್ನದೇ ಆದ ಸ್ಥಾನವನ್ನು ಹೊಂದಿದೆ, ಜನಮಾನಸದಲ್ಲಿ ಹಾಸುಹೊಕ್ಕಾಗಿ ಉಳಿದುಬಂದಿದೆ. ಇದು ಜೀವನದ ಮೊತ್ತವನ್ನು ಎಳೆಎಳೆಯಾಗಿ ಬಿಚ್ಚಿಡುವ ವಿಧಾನ ಎಂದು ಶರಣ ಆರ್ ಎಸ್ ಬಿರಾದಾರ ಅವರು ತಮ್ಮ ಉಪನ್ಯಾಸವನ್ನು ಪ್ರಾರಂಭ ಮಾಡಿದರು.

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ಶರಣ ಶಿವಾನಂದ ಕಲಕೇರಿ ಅವರ ಶ್ರಾವಣ ಮಾಸದ ವಿಶೇಷ ದತ್ತಿಉಪನ್ಯಾಸದ 14 ನೆಯ ದಿವಸ ಅವರು ಗೂಗಲ್ ಮೀಟ್ ನಲ್ಲಿ  ಮಾತನಾಡಿದರು

ಅಂಬಿಗರ ಚೌಡಯ್ಯನವರ ಬಗೆಗೆ ಹೇಳುತ್ತಾ, ಅವರ ಸಾಮಾಜಿಕ ಕಳಕಳಿ, ಅನ್ಯಾಯ, ವಂಚನೆಯನ್ನು ತೀವ್ರವಾಗಿ ಖಂಡಿಸುವ ಗುಣ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಲೇಬೇಕು ಎನ್ನುವ ಗಟ್ಟಿತನ ಎಲ್ಲವೂ ಅವರಲ್ಲಿ ಇತ್ತು. ವಚನಗಳ ಮೂಲಕ ಸಮಾಜವನ್ನು ತಿದ್ದುವ ಕೆಲಸವನ್ನು ಅವರು ಮಾಡುತ್ತಿದ್ದರು ಎನ್ನುವುದನ್ನು ನಮ್ಮೊಂದಿಗೆ ಹಂಚಿಕೊಂಡರು.

- Advertisement -

ಉಪಮೆ, ಗಾದೆ, ಹಾಡು, ಬೈಗುಳ, ಸಂಪ್ರದಾಯ ಖಂಡನೆಗಳು, ಎಲ್ಲವೂ ಅವರ ವಚನಗಳಲ್ಲಿ ಕಾಣಸಿಗುತ್ತವೆ,ಎಂದು ಹೇಳುತ್ತಾ, ಹಳೆಯ ಕನ್ನಡ ಪದಗಳನ್ನೂ ಸಹ ಉದಾಹರಿಸಿದರು.ಊಟೋಪಚಾರದ ವಿಷಯದಲ್ಲಿ ಮೂಡಿಬಂದ ಶಬ್ದಗಳು ಅಂಬಲಿ, ಶೀತನಿ, ಮುಟ್ಟಿಗೆ, ಗುಗ್ಗರಿ, ಹುರಳಿ, ಇತ್ಯಾದಿ
ಹಳ್ಳಿಗಾಡಿನ ಕಸುಬುಗಳಾದ ದೊಂಬರಾಟ, ಕೋಲಾಟ, ದುರ್ಗಮುರ್ಗಿ, ಸುಡುಗಾಡು ಸಿದ್ಧಯ್ಯ, ಇತ್ಯಾದಿ
ಪ್ರಾಣಿಗಳ ಚರ್ಮದ ತೊಗಲಿನಿಂದ ತಯಾರು ಮಾಡುವ ವಾದ್ಯಗಳು -ಮೃದಂಗ, ಡೋಲು, ನಗಾರಿ, ಬಾರುಕೋಲು, ಹರಿಗೋಲು, ಇತ್ಯಾದಿ ಅಳತೆಯ ಸಾಧನಗಳಾದ ಒಂದು ಮಾಸಿ, ಅರ್ಧ ಮಾಸಿ, ಒಂದು ಮಾರು, ಒಂದು ಮಳ ಇತ್ಯಾದಿ ಬೈಗುಳಗಳಾದ ಅಂದಗೇಡಿ, ಚೆಂದಗೇಡಿ, ಭ್ರಷ್ಟ ಇತ್ಯಾದಿ ಇದರ ಜೊತೆಗೆ ಗಾದೆಮಾತುಗಳನ್ನೂ ಅವರು ಹೇಗೆ ತಮ್ಮ ವಚನಗಳಲ್ಲಿ ಸೇರ್ಪಡೆ ಮಾಡಿದ್ದರು ಮತ್ತು ಜನರನ್ನು ಮಾರ್ಪಾಡು ಮಾಡುವಲ್ಲಿ ಹೇಗೆ ವಚನಗಳ ಮೂಲಕ ತಿದ್ದಿ ತೀಡಿದರು ಎಂದು ವಿವರವಾಗಿ ವರ್ಣಿಸಿದರು.

ಪ್ರಿಯoವದಾ ಹುಲಗಬಾಳಿ ಅವರು ಕಾಯಕತತ್ವವೇ ಮೈವೆತ್ತಿನಿಂತ ಆಯ್ದಕ್ಕಿ ಲಕ್ಕಮ್ಮನವರ ಬಗೆಗೆ ಹೇಳುತ್ತಾ, ಕಾಯಕತತ್ವವನ್ನು ಪೂರ್ಣ ಸ್ವರೂಪದಲ್ಲಿ ನಿತ್ಯಜೀವನದಲ್ಲಿ ನಿರಂತರವಾಗಿ ಯಥಾರ್ಥವಾಗಿ ಆಚರಣೆಯಲ್ಲಿ ತಂದ ಮಹಾಸಾಧ್ವಿ ಶಿರೋಮಣಿ, ಅನುಭವದ ಖಣಿ, ಶಿವಾನುಭವ -ಲೋಕಾನುಭವಗಳ ಸುಂದರ ಸಮನ್ವಯದ ಪ್ರತೀಕ, ಕ್ರಿಯಾಜ್ಞಾನಗಳ ಸಮುಚ್ಚಯದ ಸಂಕೇತ. ಪ್ರಪಂಚ ಸುಖದೊಡನೆ ಪಾರಮಾರ್ಥ ಸಾಧನೆಯ ಗೌರಿಶಂಕರ ಶಿಖರವನ್ನೇರಿದ ಪುಣ್ಯದ ಮೂರ್ತಿ, ಕಟ್ಟುನಿಟ್ಟಿನ ಶಿಸ್ತಿನ ಭಕ್ತೆ ಎಂದು ಹೇಳುತ್ತಾ ಅವರ ವಚನಗಳನ್ನು ಮಧ್ಯದಲ್ಲಿ ಉಲ್ಲೇಖಿಸುತ್ತಾ ಸುಂದರವಾದ ಉಪನ್ಯಾಸವನ್ನು ಕಟ್ಟಿಕೊಟ್ಟರು.

ಮಾರ್ಗದರ್ಶಕರಾದ ಬಿ. ಎಂ. ಪಾಟೀಲ್ ಅವರು ವಚನ ಸಾಹಿತ್ಯ ಮತ್ತು ಶರಣರ ಬದುಕನ್ನು ಅಳವಡಿಸಿಕೊಂಡು ಅದನ್ನು ಹೇಗೆ ಆಚರಣೆಗೆ ತರಬೇಕು ಹಾಗೂ
ಅಸ್ಪೃಶ್ಯತೆ ಮತ್ತು ಕಾಯಕತತ್ವವನ್ನು ಪಾಲಿಸಿದರೆ ಇಡೀ ಜಗತ್ತನ್ನೇ ಗೆದ್ದ ಹಾಗೆ ಎನ್ನುವ ಕಿವಿಮಾತು ಹೇಳಿದರು.
ಹಳಕಟ್ಟಿ ಅವರ ಆಶಯದಂತೆ ವಚನಗಳನ್ನು ಮನೆ -ಮನೆಗೂ ಮುಟ್ಟಿಸಬೇಕು, ಪ್ರತಿದಿನ ಮನೆಯಲ್ಲಿ ಎಲ್ಲರಿಗೂ ಕಾಣುವ ಹಾಗೆ ಕಪ್ಪು ಹಲಗೆಯ ಮೇಲೆ ವಚನ ಬರೆದು ಎಲ್ಲರೂ ಓದುವ ಹಾಗೆ ಮಾಡಬೇಕು ಎನ್ನುವ ಆಶಯ ವ್ಯಕ್ತಪಡಿಸಿದರು.

- Advertisement -

ಡಾ. ಶಶಿಕಾಂತ ಪಟ್ಟಣ ಅವರು ದಾನಪುರದಲ್ಲಿ ಚೌಡಯ್ಯನವರ ಶಾಸನವಿದೆ ಎನ್ನುವುದರ ಬಗೆಗೆ, ಸತಿ -ಪತಿಗಳ ಭಾವ, ಸಮಷ್ಟಿ ಪ್ರಜ್ಞೆ, ಅಂಗ -ಲಿಂಗ ಒಂದಾದ ಬಗೆ ಹೀಗೆ ಆಯ್ದಕ್ಕಿ ಲಕ್ಕಮ್ಮ ಮತ್ತು ಅಂಬಿಗರ ಚೌಡಯ್ಯನವರ ವಿಶೇಷಣಗಳನ್ನು ಇನ್ನಷ್ಟು ವಿವರವಾಗಿ ಕಟ್ಟಿಕೊಟ್ಟರು. ಪ್ರಾಮಾಣಿಕತೆಯಿಂದ ಕೆಲಸ ಮಾಡಿ ನಾನು ದುಡಿದು ನಾನು ಉಣ್ಣಬೇಕು, ಅದರಲ್ಲೇ ದಾಸೋಹ ಮಾಡಬೇಕು ಎನ್ನುವ ಶರಣರ ಪರಿಕಲ್ಪನೆಯನ್ನು ಮನದಟ್ಟು ಮಾಡಿದರು.

ಶರಣೆ ಪೂಜಾ ಹಿರೇಮಠ ಅವರ ವಚನ ಪ್ರಾರ್ಥನೆ, ಶರಣೆ ಸುಧಾ ಪಾಟೀಲ ಅವರ ಸ್ವಾಗತ, ಪ್ರಾಸ್ತಾವಿಕ, ಪರಿಚಯದ ನುಡಿಗಳು, ಶರಣ ನಾಗರಾಜ ಮತ್ತಿಹಳ್ಳಿ ಅವರ ಶರಣು ಸಮರ್ಪಣೆ, ಶರಣೆ ತ್ರಿವೇಣಿ ವಾರದ ಅವರ ವಚನ ಮಂಗಳದೊಂದಿಗೆ ಕಾರ್ಯಕ್ರಮ ಸಾಂಗವಾಗಿ ನೆರವೇರಿತು. ಶರಣೆ ಮೀನಾಕ್ಷಿ ಪಾಟೀಲ ಅವರು ಕಾರ್ಯಕ್ರಮ ನಿರ್ವಹಣೆಯನ್ನು ಅತ್ಯಂತ ಸಮರ್ಪಕವಾಗಿ ನೆರವೇರಿಸಿದರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ಯಾರವನು ನೀನೆಂದು ಜನ‌ ನಿನ್ನ ಕೇಳಿದರೆ ಆ ಪ್ರಶ್ನೆಗುತ್ತರವ ಹೀಗೆ ಹೇಳು ಕ್ರಿಸ್ತನವ ಕೃಷ್ಣನವ ಬುದ್ಧನವ ಬಸವನವ ಎಲ್ಲರವ ನಾನೆನ್ನು‌- ಎಮ್ಮೆತಮ್ಮ ಶಬ್ಧಾರ್ಥ ಯಾರವನು = ಯಾವ ಕುಲಜಾತಿಮತಪಂಥಕ್ಕೆ ಸೇರಿದವನು ತಾತ್ಪರ್ಯ ಜನಗಳು ನಿನ್ನ ಕುಲ‌...
- Advertisement -

More Articles Like This

- Advertisement -
close
error: Content is protected !!
Join WhatsApp Group