ಶ್ರೀ ವಾಸುದೇವ ಮಹಾರಾಜ ಫೌಂಡೇಶನ್ ವತಿಯಿಂದ ಶ್ರೀ ವಾಸುದೇವ ಮಹಾರಾಜ್ ಅವರ 18ನೇ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿಯನ್ನು ಇದೇ ದಿನಾಂಕ 26.08.2024ರ ಸೋಮವಾರ ಸಂಜೆ 5:00ಗೆ ಮೈಸೂರಿನ ಜೆ ಎಲ್ ಬಿ ರಸ್ತೆಯ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಚಂದ್ರವನ ಆಶ್ರಮದ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿಗಳು ನೆರವೇರಿಸುವರು. ಶ್ರೀಗಳ ಭಾವಚಿತ್ರಕ್ಕೆ ವಿಧಾನಪರಿಷತ್ ಸದಸ್ಯರಾದ ಡಾ.ಡಿ ತಿಮ್ಮಯ್ಯ ಪುಷ್ಪಾರ್ಚನೆ ನೆರವೇರಿಸಲಿದ್ದು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಸಮಾಜ ಸೇವಕರಾದ ಡಾ.ಕೆ ರಘುರಾಮ ವಾಜಪೇಯಿ, ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದ ಸಿಇಒ ಕೆ ಆರ್ ಯೋಗಾ ನರಸಿಂಹನ್ ಹಾಗೂ ಶ್ರೀ ವಾಸುದೇವ ಮಹಾರಾಜ್ ಫೌಂಡೇಶನ್ ನ ಅಧ್ಯಕ್ಷರಾದ ಡಾ. ಗುರುರಾಜ್ ಪೋ ಶೆಟ್ಟಿಹಳ್ಳಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ. ಮೋಹನ್ ಉಪಸ್ಥಿತರಿರಲಿದ್ದಾರೆ.
ಇದೇ ಸಂದರ್ಭ ಸಂಧ್ಯಾ ಸುರಕ್ಷಾ ಟ್ರಸ್ಟ್ ಅಧ್ಯಕ್ಷರಾದ ಡಾ. ಬಿ ಆರ್ ನಟರಾಜ ಜೋಯಿಸ್ ಹಾಗೂ ಅಂತರಾಷ್ಟ್ರೀಯ ಖ್ಯಾತಿಯ ಲೈಂಗಿಕ ಮತ್ತು ಗರ್ಭಧಾರಣ ತಜ್ಞ ವೈದ್ಯರಾದ ಡಾ.ಸಿ ಶರತ್ ಕುಮಾರ್ ಅವರಿಗೆ ಈ ಸಾಲಿನ ಶ್ರೀ ವಾಸುದೇವ ಮಹಾರಾಜ್ ಸದ್ಭಾವನಾ ಪ್ರಶಸ್ತಿಯನ್ನು ಅವರುಗಳ ಜೀವಮಾನ ಸಾಧನೆಗಾಗಿ ಪ್ರದಾನ ಮಾಡಲಾಗುವುದು ಹಾಗೂ ಖ್ಯಾತ ಕೊಳಲು ವಾದನ ವಿದ್ವಾನ್ ವಿನಾಯಕ ಹೊನ್ನಾವರ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ ವಿ. ನಾಗೇಂದ್ರಬಾಬು ಹಾಗೂ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕರಾದ ಎನ್ ಅನಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.