- Advertisement -
ಗಜಲ್
ನಿನ್ನ ಪ್ರೀತಿಯನ್ನು ಅಪ್ಪಿದಂತೆನಿನ್ನ ದ್ವೇಷವನ್ನೂ ಅಪ್ಪಿಕೊಳ್ಳುವೆ
ನಿನ್ನ ಸ್ನೇಹವನ್ನು ಒಪ್ಪಿದಂತೆ ನಿನ್ನ ರೋಷವನ್ನೂ ಅಪ್ಪಿಕೊಳ್ಳುವೆ
ನಿನ್ನ ಸವಿ ಮಾತುಗಳ ತಬ್ಬಿದಂತೆ ನಿನ್ನ ಕಟುನುಡಿಗಳನ್ನೂ ಅಪ್ಪಿಕೊಳ್ಳುವೆ
ನಿನ್ನ ಜೊತೆ ನಡೆದ ಹೆಜ್ಜೆಗಳ ನೆನೆದಂತೆ ನಿನ್ನ ದೂರ ಮಾಡಿದ ಕರಗಳನ್ನೂ ಅಪ್ಪಿಕೊಳ್ಳುವೆ
- Advertisement -
ನಿನ್ನ ಮನ ಮಲ್ಲಿಗೆ ಹೂವು ಮುಡಿದಂತೆ ಸುರಿದ ಮುಳ್ಳುಗಳನ್ನೂ ಅಪ್ಪಿಕೊಳ್ಳುವೆ.
ನಿನ್ನ ಪಿಸು ಮಾತುಗಳ ಜೊತೆಗೆ ನೀಡಿದ ಮೌನವನ್ನೂ ಅಪ್ಪಿಕೊಳ್ಳುವೆ.
ನೀಡಿದ ನಲಿವಿನ ಜೊತೆಯಲಿ ನೀಡಿದ ಸಾಸಿರ ನೋವನ್ನೂ ಅಪ್ಪಿಕೊಳ್ಳುವೆ.
ಮಾಡಿದ ಕಾಳಜಿಯ ಜೊತೆಯಲಿ ತೋರಿದ ನಿರಾಕರಣೆಯನ್ನೂ ಅಪ್ಪಿಕೊಳ್ಳುವೆ.
ನೀನಪ್ಪಿದ ಇಂದುವಿನ ಜೊತೆಗೆ ಶಶಿ ಮರೆತ ಇಂದುವನ್ನೂ ಅಪ್ಪಿಕೊಳ್ಳುವೆ
ನೀಸುರಿಸಿದ ಒಲವ ಮಳೆಯ ಜೊತೆಗೆ ಕಂಬನಿ ಹೊಳೆಯನ್ನೂ ಅಪ್ಪಿಕೊಳ್ಳುವೆ
- Advertisement -
–ಇಂದಿರಾ ಮೋಟೆಬೆನ್ನೂರ. ಬೆಳಗಾವಿ