ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಉಪಾಧ್ಯಕ್ಷರಾಗಿ ಶ್ರೀಮತಿ ನಂದಿನಿ ಸುರೇಂದ್ರ ಸನಬಾಳ್ ಆಯ್ಕೆ

0
196

ಕಲಬುರಗಿ: ಜಿಲ್ಲೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಳಾದ ವಿಜ್ಞಾನ ಶಿಕ್ಷಕಿ ನಂದಿನಿ ಸನಬಾಳ್ ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷರಾಗಿ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರಾಗಿ ಆಯ್ಕೆ ಆಗಿರುವರು.

ಸಂಘಟನಾ ಚತುರೆ ಆದ ಇವರು ವಿವಿಧ ಸಂಘಟನೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಮಕ್ಕಳು ಮತ್ತು ಮಹಿಳೆಯರ ಬಗ್ಗೆ ಇವರಿಗಿರುವ ವಿಶೇಷ ಕಾಳಜಿ ಹಾಗೂ ದಿಟ್ಟ ಹೋರಾಟಗಾರರು ಆಗಿರುವ ಇವರ ಕಾರ್ಯ ಗುರುತಿಸಿ ಕಲಬುರಗಿ ಜಿಲ್ಲಾ ಸರಕಾರಿ ಮಹಿಳಾ ನೌಕರರ ಸಂಘದ ಅಧ್ಯಕ್ಷರನ್ನಾಗಿ ಹಾಗೂ ರಾಜ್ಯ ಘಟಕದ ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ರಾಜ್ಯಾಧ್ಯಕ್ಷರಾದ ರಮಾ ಹಾಗೂ ಪ್ರಧಾನ ಕಾರ್ಯದರ್ಶಿಗಳಾದ ಶೈಲಜಾ ವಿ ಗೌಡ ಆದೇಶ ಹೊರಡಿಸಿ ಅಭಿನಂದಿಸಿದ್ದಾರೆ.