spot_img
spot_img

ಸಾವಿಲ್ಲದ ಶರಣರು -ಮಹಾ ದಾಸೋಹಿ ಎಲೆ ಮಲ್ಲಪ್ಪ ಶೆಟ್ಟರು

Must Read

- Advertisement -

ಎಲೆ ಮಲ್ಲಪ್ಪ ಶೆಟ್ಟರ ಅವರ ಹಿರಿಯರು ಚಿಕ್ಕಮಗಳೂರಿನ ಹತ್ತಿರ ನಂದಿಹಳ್ಳಿ ಗ್ರಾಮದವರು. ರಾಜ ಮಹಾರಾಜರಿಗೆ ಸಮಾರಂಭ ಗಳಲ್ಲಿ ವೀಳ್ಯವನ್ನು ಸರಬರಾಜು ಮಾಡುವ ಕಾಯಕದವರು. ಶರಣ ಸಂಸ್ಕೃತಿಯ ದಾಸೋಹ ಮನೆತನದ ಇವರು ನಿರ್ವಾಣೇಶ್ವರ ದೇವಸ್ಥಾನವನ್ನು ಕಟ್ಟಿದವರು ಎಂದು ಶರಣ ಶಶಿಕಾಂತ ಪಟ್ಟಣ ಹೇಳಿದರು

ವಚನ ಅಧ್ಯಯನ ವೇದಿಕೆ, ಬಸವಾದಿ ಶರಣರ ಚಿಂತನಕೂಟ ಹಾಗೂ ಅಕ್ಕನ ಅರಿವು ಸಂಘಟನೆಗಳಿಂದ ವಿಶೇಷ ಉಪನ್ಯಾಸದ ಅಡಿಯಲ್ಲಿ ನಡೆದ ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಯಾವುದೋ ಒಂದು ಅಹಿತಕರ ಘಟನೆಯ ಕಾರಣಕ್ಕಾಗಿ ರಾತ್ರೋ ರಾತ್ರಿ ಹಿರಿಯರೆಲ್ಲರೂ ಊರು ಬಿಟ್ಟು ಬೆಂಗಳೂರಿಗೆ ಬಂದು ನೆಲೆಸಿದರು. ಬೆಂಗಳೂರಿನ ವೀರನ ಹಳ್ಳಿಯಲ್ಲಿ ಮರಿ ಸಿದ್ದಪ್ಪ ಶೆಟ್ಟರು ಮತ್ತು ಚೆನ್ನಮ್ಮ ದಂಪತಿಗಳಿಗೆ ಮೂರನೇ ಮಗನಾಗಿ ಎಲೆ ಮಲ್ಲಪ್ಪ ಶೆಟ್ಟರು 1815 ರಲ್ಲಿ ಜನಿಸಿದರು.
ತಂದೆಯವರು ಎಲೆ ಅಡಿಕೆ ವ್ಯಾಪಾರ ಮಾಡುತ್ತಾ ಅಬಕಾರಿ ಕಾಂಟ್ರಾಕ್ಟ್ ಪ್ರಾರಂಭ ಮಾಡಿದರು ಎಂದು ಅವರ ಮನೆತನದ ಬಗೆಗೆ ಮಾಹಿತಿ ನೀಡಿದರು.

- Advertisement -

ಅವರ ತಂದೆಯವರು ತೀರಿಕೊಂಡ ಮೇಲೆ ಇಡೀ ಕುಟುಂಬದ ಜವಾಬ್ದಾರಿ ಎಲೆ ಮಲ್ಲಪ್ಪ ಶೆಟ್ಟರ ಮೇಲೆ ಬಿತ್ತು. ಅವರ ಹೆಂಡತಿ ಶರಣಮ್ಮ ತೀರಿ ಹೋದ ಮೇಲೆ ಮಕ್ಕಳಾದ ನಿರ್ವಾಣಮ್ಮ ಮತ್ತು ನಂಜಮ್ಮ ಅವರಿಗೆ ಇನ್ನೊಂದು ಮದುವೆ ಮಾಡಿಸಿದರು. 1876 -78ರಲ್ಲಿ ಬರಗಾಲ ಬಂದಾಗ ಎರಡು ವರ್ಷ ಆರು ಸಾವಿರದಿಂದ ಹತ್ತು ಸಾವಿರ ಜನರವರೆಗೆ ಮೂರು ಹೊತ್ತು ಅನ್ನ ಗಂಜಿ ಸಿಹಿ ಪದಾರ್ಥಗಳ ಊಟವನ್ನು ಏರ್ಪಡಿಸಿದರು.ಮನೆ ಮುಂದೆ  ಅಕ್ಕಿ, ರಾಗಿ ಚೀಲಗಳನ್ನು ಒಟ್ಟಿ 10,000 ಜನರು ತಮಗೆ ಎಷ್ಟು ಬೇಕು ಅಷ್ಟು ಚೀಲಗಳನ್ನು ಒಯ್ಯುವ ವ್ಯವಸ್ಥೆ ಮಾಡಿದರು ಎನ್ನುವುದನ್ನು ಹಂಚಿಕೊಂಡರು.

ಬೆಂಗಳೂರಿನಲ್ಲಿರುವ ಬಸವನ ಗುಡಿಯ ಬಸವಣ್ಣನ ಗುಡಿ, ಗವಿಪುರದ ಗಂಗಾಧರೇಶ್ವರ ದೇವಸ್ಥಾನ ಮಲ್ಲೇಶ್ವರ ಮನಲ್ಲಿರುವ ಕಾಡು ಮಲ್ಲೇಶ್ವರ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಮಲ್ಲಿಕಾರ್ಜುನ ದೇವಸ್ಥಾನ ಹೀಗೆ ಬೆಂಗಳೂರಿನ ಎಲ್ಲ ದೇವಸ್ಥಾನಗಳ ಜೀರ್ಣೋದ್ಧಾರಗಳನ್ನು ಮಾಡಿದ್ದು  ಮಲ್ಲೇಶ್ವರಮ್ ಹೆಸರು ಮಲ್ಲಪ್ಪ ಶೆಟ್ಟರ ಅವರ ಹೆಸರಿನಲ್ಲಿಯೇ ಬಂದಿದೆ ಎಂದು ಹೇಳುತ್ತಾ ಬೆಂಗಳೂರಿನಲ್ಲಿ ಕೆರೆ ಸಂಸ್ಕೃತಿಯನ್ನು ಸ್ಥಾಪಿಸಿ ಮಲ್ಲಪ್ಪ ಶೆಟ್ಟಿಕೆರೆ ಅಲ್ಸೂರ್ ಕೆರೆ ಹೀಗೆ ಹಲವಾರು ಕೆರೆಗಳನ್ನು ಅಗಾಧವಾದ 266 ಎಕರೆ ವಿಸ್ತೀರ್ಣ ದಲ್ಲಿ ನಿರ್ಮಿಸಿದರು ಎನ್ನುವುದನ್ನು ವಿವರಿಸಿದರು.

ಒಂದು ಸಲ ಗರ್ಭಿಣಿ ಸ್ತ್ರೀ ಕಷ್ಟಪಡುವುದನ್ನು ನೋಡಿ ಬೆಂಗಳೂರಿನ ಎಲ್ಲ ಶ್ರೀಮಂತ ಲಿಂಗಾಯತರನ್ನು ಕರೆಸಿ
ದೇಣಿಗೆಯನ್ನು ಪಡೆದು, ತಾವು ಆಗಿನ ಕಾಲದ 35,000 ರೂ (ಬೆಳ್ಳಿ ನಾಣ್ಯ) ಸುರ್ತಿ ರೂ ಗಳನ್ನು ದಾನವಾಗಿ ಕೊಟ್ಟರು. ನೃಪತುಂಗ ರೋಡ್ ಹತ್ತಿರ ದೊಡ್ಡ ಹೆರಿಗೆ ಆಸ್ಪತ್ರೆಯನ್ನು ಕಟ್ಟಿಸಿದರು. ಆಮೇಲೆ ಅದು ವಾಣಿವಿಲಾಸ್ ಆಸ್ಪತ್ರೆ ಆಯಿತು.ಅಲ್ಲಿ ಹೆರಿಗೆ ಆದಮೇಲೆ ಬಾಣಂತಿಯರಿಗೆ ಪೌಷ್ಟಿಕ ಆಹಾರದೊಂದಿಗೆ 200 ರೂ ಭತ್ಯೆಯನ್ನು ಕೊಡುವ ವ್ಯವಸ್ಥೆ ಮಾಡಿದರು ಎನ್ನುವ ಅವರ ಕಳಕಳಿಯನ್ನು ನೆನಪು ಮಾಡಿಕೊಂಡರು.

- Advertisement -

ನೂರಾರು ಎಕರೆ ಭೂಮಿಯನ್ನು ಅಗ್ರಹಾರದವರಿಗೆ ಕೊಟ್ಟು ಸಂಸ್ಕೃತ ಪಾಠಶಾಲೆ ಕಟ್ಟಿಕೊಟ್ಟಿದ್ದು, ಒಮ್ಮೆ ಕೋಲಾರದ ಹುಡುಗ ಶಾಲೆ ಕಲಿಯಲು ತೊಂದರೆಯಾಗಿದೆಯೆಂದು ಹೇಳಿದಾಗ 40,000 ರೂ ಖರ್ಚು ಮಾಡಿ ಧರ್ಮಛತ್ರ ನಿರ್ಮಾಣ ಮಾಡಿ, ವಸತಿ ಊಟ ಬಟ್ಟೆ ಹಾಸಿಗೆ ಎಲ್ಲವನ್ನು ವ್ಯವಸ್ಥೆ ಮಾಡಿದರು. ಶಿಕ್ಷಕರಿಗೆ 5000 ಸಂಬಳ ಕೊಟ್ಟುನೇಮಕ ಮಾಡಿದ್ದು, ಒಬ್ಬ ಹೆಣ್ಣು ಮಗಳ .30000 ರೂ ಸಾಲವನ್ನು ಮನ್ನಾ ಮಾಡಿದ್ದು, ಮನೆಯಲ್ಲಿರುವ 250 ವಿವಿಧ ಪ್ರಕಾರದ ಆಭರಣಗಳು 24 ವಜ್ರದ ಆಭರಣಗಳು ಇದ್ದದ್ದು, ಇನ್ನೊಬ್ಬರ ಮಗಳ ಲಗ್ನಕ್ಕೆ ಆಗಿಂದಾಗಲೇ ತಮ್ಮ ಕೊರಳಲ್ಲಿರುವ ಗುಂಡುಗಡಿಗೆ ತೆಗೆದುಕೊಟ್ಟಿದ್ದನ್ನು ಅತ್ಯಂತ ಅಭಿಮಾನದಿಂದ ಹಂಚಿಕೊಂಡರು.

ಅರವತ್ತು ಅನಾಥ ಮಕ್ಕಳನ್ನು ಮನೆಯಲ್ಲಿ ಇಟ್ಟುಕೊಂಡು ಅವರನ್ನು ತಮ್ಮ ಮೇನೆಯಲ್ಲಿ ಶಾಲೆಗೆ ಕಳುಹಿಸಿಕೊಟ್ಟು ಊಟ ಆರೋಗ್ಯದ ಆರೈಕೆ ಯನ್ನು ತಾವೇ ಮೇಲ್ವಿಚಾರಣೆ ಮಾಡುತ್ತಿದ್ದುದು, ಜಯನಗರ ಗಾಂಧಿ ಬಜಾರದ ಸುತ್ತಮುತ್ತ 10,000 ನಿವೇಶನಗಳನ್ನು ಉಚಿತವಾಗಿ ಹಂಚಿ 3000ರೂ ರೂಪಾಯಿಗಳನ್ನು ಮನೆ ಕಟ್ಟಿಸಿಕೊಳ್ಳಲು ಕೊಟ್ಟದ್ದು, ಇಂದಿರಾನಗರ ಮತ್ತು ಚಾಮರಾಜನಗರದಲ್ಲಿ ಅಬಲಾಶ್ರಮವನ್ನು ಕಟ್ಟಿ ವಿಧವೆಯರಿಗೆ, ನಿರ್ಗತಿಕರಿಗೆ ದೀಪವಾದದ್ದು, ಬೌರಿಂಗ ಹಾಸ್ಪಿಟಲ್ ಜಾಗವನ್ನು ಕೊಟ್ಟಿದ್ದು, ಬ್ರಿಟಿಷ್ ಸರ್ಕಾರ ಅವರಿಗೆ ರಾವ್ ಬಹದ್ದೂರ್ ಪ್ರಶಸ್ತಿ ಕೊಟ್ಟು ಪೌರ ಸನ್ಮಾನ ಮಾಡಿದ್ದು ಸ್ಮರಿಸಿದರು.

ಬಳೆಪೇಟೆ ಚಾಮರಾಜಪೇಟೆ, ಚಿಕ್ಕಪೇಟೆ ಬಂಗಾರಪೇಟೆಗಳಲ್ಲಿ ಅವರ ದೊಡ್ಡ ದೊಡ್ಡ ಅಂಗಡಿಗಳು ಇದ್ದದ್ದು, ಪ್ರತಿ ದಿನ ನಾಲ್ಕು ಲೋಡ್ ಟ್ರಕ್ ಎಲೆ ಬರುತ್ತಿದ್ದುದನ್ನು ಹೇಳುವುದರ ಜೊತೆಗೆ ,ಅವರ ಆರ್ಥಿಕ ವೀಕೆಂದ್ರಿಕರಣವನ್ನು ಹಂಚಿಕೊಳ್ಳುತ್ತಾ , ಅವರು ಹೇಳಿದ ಮಾತುಗಳನ್ನು ಸ್ಮರಿಸಿದರು . “ನಾನು ಇರದಿದ್ದರೂ, ನಾನು ಸತ್ತಮೇಲೂ ಕೆಲಸ ಮಾತ್ರ ನಿಲ್ಲಬಾರದು ” ಎನ್ನುವ ಕಾಳಜಿಪೂರ್ವಕ ಮಾತುಗಳಜೊತೆಗೆ ಅವರು ಲಿಂಗೈಕ್ಯರಾದಾಗ 3 ರಿಂದ 4 ಲಕ್ಷ ಜನರು ಸೇರಿದ್ದು, ಇಡೀ ಬೆಂಗಳೂರಿನ ಹೂವಿನ ರಾಶಿ ತಂದು ಜನರು ಅವರಿಗೆ ಹೊದಿಸಿದ್ದನ್ನು ನೆನೆಯುತ್ತಾ, ಹೆಸರಿಗಾಗಿ, ಪ್ರಸಿದ್ಧಿಗಾಗಿ ಕೆಲಸ ಮಾಡದ ಧೀಮಂತ ದಾಸೋಹಿ ಬಗೆಗೆ ಸ್ವಲ್ಪದರಲ್ಲಿಯೇ ಹೇಳುವ ಪ್ರಯತ್ನ ಮಾಡಿದ್ದೇನೆ, ಅವರು ಎಲೆಯ ಮರೆಯಂತೆ ಬದುಕಿ ಹೋದರು, ಅವರ ಜೀವನ ಚರಿತ್ರೆ ಅಗಾಧವಾಗಿದೆಯೆಂದು ತಮ್ಮ ಉಪನ್ಯಾಸ ಮುಗಿಸಿದರು.

ಶರಣೆ ಗೌರಮ್ಮ ನಾಶಿ ಅವರು ತಮ್ಮ ಮಾರ್ಗದರ್ಶನದಲ್ಲಿ ವೇದಿಕೆಯ ಬಗೆಗೆ ಮತ್ತು ಎಲೆ ಮಲ್ಲಪ್ಪ ಶೆಟ್ಟರ ಬಗೆಗೆ ತಮ್ಮ ಅನಿಸಿಕೆಗಳನ್ನು ಅತ್ಯಂತ ಪ್ರಬುದ್ಧವಾಗಿ ನಮ್ಮೆಲ್ಲರ ಜೊತೆಗೆ ಹಂಚಿಕೊಂಡರು.

ಶರಣೆ ವಿದ್ಯಾ ಮುಗ್ದುಮ್ ಅವರ ವಚನ ಪ್ರಾರ್ಥನೆ, ಡಾ.ಪ್ರಿಯವoದಾ ಅವರ ಸ್ವಾಗತ -ಪ್ರಾಸ್ತಾವಿಕ-ಪರಿಚಯ
ಶರಣೆ ಸುಧಾ ಪಾಟೀಲ ಅವರ ಶರಣು ಸಮರ್ಪಣೆ,ಡಾ. ತಾರಾ. ಬಿ. ಎನ್. ಅವರ ವಚನ ಮಂಗಳ ಮತ್ತು ಬಹಳಷ್ಟು ಶರಣ -ಶರಣೆಯರು ಉತ್ಸಾಹದಿಂದ ಸಂವಾದದಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಕಳೆಯನ್ನು ತಂದುಕೊಡುವುದರ ಮೂಲಕ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಮುಗಿಯಿತು.
ಶರಣೆ ವಿಜಯಲಕ್ಷ್ಮಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳುವಳಿಕೆ ಮತ್ತು ಸಂಶೋಧನ ಕೇಂದ್ರ -ಪುಣೆ

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿವಾಪೂರ(ಹ) ಪ್ರೌಢ ಶಾಲೆಯ ಬಾಲಕಿಯರ ಖೋ ಖೋ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಿವಾಪೂರ(ಹ): ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಜರುಗಿದ ಮೂಡಲಗಿ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಬಾಲಕಿಯರ ಖೋ ಖೋ ತಂಡ ಗೆಲುವು ಸಾಧಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ, ಬಾಲಕರ...
- Advertisement -

More Articles Like This

- Advertisement -
close
error: Content is protected !!
Join WhatsApp Group