- Advertisement -
ಹೊಸದೆಹಲಿ – ಕೆಲವರು ಮನಸಲ್ಲಿ ಅಸಹ್ಯವನ್ನಿಟ್ಟುಕೊಂಡು ದೇಶದ ಹೆಸರು ಕೆಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಕಳೆದ ವಾರ ಅಮೇರಿಕದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭಾಷಣದ ಬಗ್ಗೆ ಪ್ರತಿಕ್ರಿಯೆ ನೀಡಿದರು.
ರಾಹುಲ್ ಗಾಂಧಿಯ ಹೆಸರು ಹೇಳದ ಮೋದಿಯವರು, ‘ಕೆಲವರು’ ದೇಶದ ಹಿತಾಸಕ್ತಿಯ ವಿರುದ್ಧ ಹೊರಟಿದ್ದಾರೆ. ದೇಶದ ಏಕತೆಯನ್ನು ಒಡೆಯಲು ವಿರೋಧಾತ್ಮಕ ವಿಷಯಗಳನ್ನು ಹರಡುತ್ತಿದ್ದಾರೆ. ಭಾರತ ಮತ್ತು ಗುಜರಾತಿನ ಹೆಸರು ಕೆಡಿಸಲು ಅವರು ಯಾವ ಮಟ್ಟಕ್ಕೂ ಇಳಿಯಲು ಸಿದ್ಧರಿದ್ದಾರೆ ಅವರು ದೇಶವನ್ನು ತುಂಡು ತುಂಡಾಗಿಸಲು ಬಯಸಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.
ಗುಜರಾತ್ ನ ಅಹಮದಾಬಾದ್ ನಲ್ಲಿ ರೂ.೮೦೦೦ ಕೋಟಿ ಗಳ ಮೂಲ ಸೌಲಭ್ಯಗಳ ಯೋಜನೆ ಉದ್ಘಾಟಿಸಿ ಮಾತನಾಡಿದ ಪ್ರಧಾನಿ, ದೇಶದ ಅಲ್ಪ ಸಂಖ್ಯಾತರಲ್ಲಿ ಒಬ್ಬರಾದ ಸಿಖ್ ಜನಾಂಗದ ಕುರಿತು ರಾಹುಲ್ ಗಾಂಧಿ ಹೇಳಿದ ಅಪಪ್ರಚಾರದ ಮಾತನ್ನು ತೀವ್ರವಾಗಿ ಖಂಡಿಸಿದರು.