ಮನುಷ್ಯನಿಗೆ ಹಣ, ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಇರಬೇಕು – ಬಸವರಾಜ ಮಡಿವಾಳ

0
227
ಮೂಡಲಗಿ: ಪಟ್ಟಣದ ಪತ್ರಿಕಾ ಕಾರ್ಯಾಲಯದಲ್ಲಿ ಮಡಿವಾಳ ಸಮಾಜ ಬಾಂಧವರಿಂದ ಎಸ್ ಎಸ್ ಎಲ್ ಸಿ ಹಾಗೂ ಪಿ ಯು ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಯಿತು.
       ಈ ಸಂದರ್ಭದಲ್ಲಿ ಮಾತನಾಡಿದ ಮಡಿವಾಳ ಸಮಾಜದ ಮುಖಂಡ ಬಸವರಾಜ ಮಡಿವಾಳ, ಮನುಷ್ಯನಿಗೆ ಹಣ ಆಸ್ತಿ ಬೇಕಾಗಿಲ್ಲ, ಬದುಕುವ ಛಲ ಬೇಕು ಪ್ರಯತ್ನದ ಛಲವೇ ದೊಡ್ಡ ಆಸ್ತಿ, ಛಲವಿದ್ದರೆ ಇದ್ದರೆ ಬೇಕಾದುದನ್ನು ಸಾಧಿಸಬಹುದು ಎಂದು ಹೇಳಿದರು.
      ತಾಲೂಕಾ ಮಡಿವಾಳ ಸಮಾಜದಿಂದ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ
ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಎಲ್ಲ ಸಮುದಾಯಗಳಕ್ಕಿಂತ ಮಡಿವಾಳ ಸಮುದಾಯವು ಬಹಳ ಹಿಂದುಳಿದ ಸಮಾಜವಾಗಿದ್ದರಿಂದ ಶೈಕ್ಷಣಿಕವಾಗಿ, ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಸದೃಢರಾಗಲು
ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಒಳ್ಳೆಯ
ಸಂಸ್ಕಾರವನ್ನು  ಬೆಳೆಸಬೇಕು ಎಂದರು.
ಹಣಮಂತ ಮಡಿವಾಳರ ಮಾತನಾಡಿ,  ಮಡಿವಾಳ ಸಮಾಜದ ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಸಾಲದು. ವಿವಿಧ ಕ್ಷೇತ್ರದಲ್ಲಿ ಕೂಡಾ
ಉತ್ತಮ ಸಾಧನೆ ಮಾಡಿ ಇಡೀ ಸಮಾಜಕ್ಕೆ ಕೀರ್ತಿ ತರುವಂತ ಕಾರ್ಯ ಮಾಡಬೇಕು. ನಮ್ಮ ಸಮಾಜದಲ್ಲಿ ಸಾಧನೆ ಮಾಡಿದಂತಹ ಸಾಧಕರನ್ನು ಗುರುತಿಸಿ, ಅವರಿಗೆ ಸತ್ಕಾರ ಮಾಡುವುದರಿಂದ ಸಾಧಕರಲ್ಲಿ ಮತ್ತಷ್ಟು
ಸಾಧನೆ ಮಾಡಲು ಹಾಗೂ ಇನ್ನುಳಿದ ಮಕ್ಕಳಿಗೆ ಪ್ರೋತ್ಸಾಹ
ನೀಡುವಂತ ಕಾರ್ಯಕ್ರಮಗಳು ನಡೆಯಬೇಕೆಂದರು.
ಶಿವಾನಂದ ಮಡಿವಾಳ ಮಾತನಾಡಿ, ಮಕ್ಕಳು ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆದುಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈಯಬೇಕು. ಮಡಿವಾಳ ಸಮಾಜ ಹಲವಾರು
ಸವಾಲುಗಳನ್ನು ಎದುರಿಸುತ್ತಿದ್ದು, ನಮ್ಮ ಸಮಾಜದ ಜನ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಹಾಗಾಗಿ ವಿದ್ಯಾರ್ಥಿಗಳು ದುಶ್ಚಟಗಳಿಂದ ದೂರವಿದ್ದು ಸಾಧನೆ ಮಾಡಬೇಕು ಎಂದರು.
ಈ ವೇಳೆ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಬಾಗಲಕೋಟೆ ಜಿಲ್ಲೆಯ ಶಿರೂರು ಗ್ರಾಮದ ಅದಿತಿ ಮಡಿವಾಳರ, ಮಿರ್ಜಿ ಗ್ರಾಮದ  ಶಿವಕುಮಾರ ಮಡಿವಾಳರ, ಒಂಟಗೋಡಿ ಗ್ರಾಮದ ದೀಪಾ ಫರಿಟ, ಬೆಳಗಾವಿ ಜಿಲ್ಲೆಯ ತಲ್ಲೂರ ಗ್ರಾಮದ ಸ್ನೇಹ ಹುಲಗೇರಿ, ವೆಂಕಟಾಪೂರ ಗ್ರಾಮದ ಕೀರ್ತಿ ಮಡಿವಾಳರ, ಕರೋಶಿ ಗ್ರಾಮದ ಶ್ರದ್ಧಾ ಮಡಿವಾಳ
ಇವರು ಸತ್ಕಾರ ಸ್ವೀಕರಿಸಿ ಮಾತನಾಡಿ ತಮ್ಮ ಕಲಿಕೆಗೆ ಸಹಕಾರ ನೀಡಿದ ಗುರುಗಳು, ತಂದೆ-ತಾಯಿಯರು, ಸ್ನೇಹಿತರಿಗೆ ನಮನಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಸಮಾಜದ ಮುಖಂಡರಾದ ಬಸವರಾಜ ಅಗಸರ, ಕಲ್ಲಪ್ಪ ಮಡಿವಾಳರ, ಭೀಮಶಿ ಮಡಿವಾಳರ, ಹಣಮಂತ ಮಡಿವಾಳರ, ಲಕ್ಷ್ಮಣ ಮಡಿವಾಳರ, ಶಿವಕುಮಾರ ಮಡಿವಾಳರ, ನಿಂಗಪ್ಪ ಫರಿಟ, ಲಕ್ಷ್ಮೀ
ಮಡಿವಾಳರ, ಉಮಾ ಮಡಿವಾಳರ, ಲಕ್ಷ್ಮೀ  ಮಡಿವಾಳರ ಹಾಗೂ ವಿದ್ಯಾರ್ಥಿಗಳು, ಪಾಲಕರು ಉಪಸ್ಥಿತರಿದ್ದರು. ಸಂಗಪ್ಪ ಕಳ್ಳಿಗುದ್ದಿ ನಿರೂಪಿಸಿ ವಂದಿಸಿದರು.