ಸಿಂದಗಿ; ೧೧೦/೧೧ಕೆ.ವಿ ಮೋರಟಗಿ, ೧೧೦/೧೧ ಕೆ.ವಿ ದೇವಣಗಾಂವ ಹಾಗೂ ೧೦/೧೧ಕೆ.ವಿ ಮಲಘಾಣ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಎರಡನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೊಂಡಿರುವುದರಿಂದ ಸೆ. ೨೬ ರಂದು ಬೆಳಿಗ್ಗೆ ೦೯:೦೦ ಗಂಟೆಯಿಂದ ಮಧ್ಯಾಹ್ನ ೦೩:೦೦ ಗಂಟೆಯವರೆಗೆ, ಸದರಿ ವಿದ್ಯುತ್ ವಿತರಣಾ ಕೇಂದ್ರದ ಮೇಲೆ ಬರುವ ಎಲ್ಲಾ ೧೧ ಕೆ.ವಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಲು ವಿನಂತಿಸಲಾಗಿದೆ ಎಂದು ಹೆಸ್ಕಾಂ ಅಧಿಕಾರಿ ಚಂದ್ರಕಾಂತ ನಾಯಕ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು, ೧೧೦/೩೩/೧೧ಕೆ.ವಿ ವಿದ್ಯುತ್ ವಿತರಣಾ ಕೇಂದ್ರ ಸಿಂದಗಿಯಿಂದ ಸರಬರಾಜು ಆಗುವ ೧೧ಕೆಪ್ಪ ಸಿಂದಗಿ-೧ ಮಾರ್ಗದ ಮೇಲೆ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವದರಿಂದ ಸದರಿ ಮಾರ್ಗಗಳ ಮೇಲೆ ಬರುವ ಎಪಿಎಮ್‌ಸಿ, ವಿವೇಕಾನಂದ ವೃತ್ತ. ಕನಕದಾಸ ವೃತ್ತ, ಮೋರಟಗಿ ನಾಕಾ, ಬಂದಾಳ ರೋಡ, ಬಸವ ನಗರ, ಬಸ್ ಸ್ಟ್ಯಾಂಡ್, ಟಿಪ್ಪು ಸುಲ್ತಾನ ವೃತ್ತ, ಬಸ್ ಡಿಪೋ, ಸಿಂದಗಿ ತಾಂಡಾ ಹಾಗೂ ಇಂಡಸ್ಟ್ರಿಯಲ್ ಏರಿಯಾ ಪ್ರದೇಶಗಳಿಗೆ ಸೆ. ೨೫ ರಂದು ಬೆಳಿಗ್ಗೆ ೦೯ ಗಂಟೆಯಿಂದ ಸಾಯಂಕಾಲ ೦೫:೦೦ ಗಂಟೆಯವರೆಗೆ ಹಾಗೂ ೨೬ ರಂದು ಬೆಳಿಗ್ಗೆ ೦೯ ಗಂಟೆಯಿಂದ ಸಾಯಂಕಾಲ ೫:೦೦ ಗಂಟೆಯವರೆಗೆ ವಿದ್ಯುತ್ ವಿತರಣೆ ಇರುವದಿಲ್ಲ. ಆದ್ದರಿಂದ ಸದರಿ ಪ್ರದೇಶದ ಗ್ರಾಹಕರು ಸಹಕರಿಸಲು ವಿನಂತಿಸಿದ್ದಾರೆ.