ಡಾ. ಶಶಿಕಾಂತ ಪಟ್ಟಣ ಕವನಗಳು

Must Read

ಹುಟ್ಟಿ ಬನ್ನಿ

ಹುಟ್ಟಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟಿ
ಸತ್ಯ ಸಮತೆ
ಶಾಂತಿ ಪ್ರೀತಿ
ಜಗಕೆ ಭಾಷೆ
ಬರೆಯ ಬನ್ನಿ
ಗಡಿಯಲ್ಲಿ ತಂಟೆ
ಜಗಳ ಕದನಕೆ
ದಿಟ್ಟ ಉತ್ತರ
ನೀಡ ಬನ್ನಿ
ಹೆಸರಾದ ಕನ್ನಡಕೆ
ಗುಡಿ ಕಳಶ
ಕಟ್ಟ ಬನ್ನಿ
ಅಕ್ಕರೆಯ ಅಕ್ಷರಗಳ
ನಿತ್ಯ ನೀವು
ಕಲಿಸ ಬನ್ನಿ
ಮರೆತು ಹೋಗುವ
ಕನ್ನಡಕೆ ಅಗ್ರ
ಪಟ್ಟ ಕಟ್ಟ ಬನ್ನಿ
ಕಾವೇರಿ ಗೋದಾವರಿ
ಕೃಷ್ಣೆ ತುಂಗೆ
ಮಲಪ್ರಭೆ ಮರಳಿ ಹರಿಸಿ
ಕನ್ನಡವ ಗೆಲಿಸ ಬನ್ನಿ
ಬನ್ನಿ ಬನ್ನಿ
ವೀರ ಯೋಧರೇ
ಕನ್ನಡವ ಕಟ್ಟ ಬನ್ನಿ
————————————–
ಪ್ರೀತಿಯೆಂದರೆ

ಪ್ರೀತಿಯೆಂದರೆ
ಅದು ಬರಿ ಶಬ್ದವಲ್ಲ
ಭಾವ ಹಸುರಿನ ತೋರಣ
ನೊಂದ ಮನಕೆ
ಮುದವ ನೀಡುವ
ಸ್ನೇಹ ಕರುಣೆ ಕಾರಣ

ಪ್ರೀತಿಯೆಂದರೆ
ಕವನ ಕಾವ್ಯವಲ್ಲ
ಗುಡ್ಡ ಬೆಟ್ಟದ ಚಾರಣ
ನೋವ ಮರೆಸಿ
ನಗೆಯ ಬೀರುವ
ಹೃದಯ ಭಾಷೆಯ ಹೂರಣ

ಪ್ರೀತಿಯೆಂದರೆ
ಮಳಿಗೆ ಸಂತೆಯಲ್ಲ
ತನು ಮನ ಧಾರಣ
ಹೊಸ ಭರವಸೆ
ಹೊಸ ಕನಸಿಗೆ
ಪ್ರೀತಿಯೊಂದೆ ಪ್ರೇರಣಾ
—————————
ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಅರಭಾವಿಯಲ್ಲಿ ವಿಶ್ವ ಮಣ್ಣು ದಿನಾಚರಣೆ

ಕಿತ್ತೂರ ರಾಣಿ ಚನ್ನಮ್ಮ ತೋಟಗಾರಿಕೆ ಮಹಾವಿದ್ಯಾಲಯ, ಅರಭಾವಿಯಲ್ಲಿ ದಿನಾಂಕ: ೦೫.೧೨.೨೦೨೫ ರಂದು ವಿಶ್ವ ಮಣ್ಣು ದಿನಾಚರಣೆಯನ್ನು ರಾಷ್ಟ್ರೀಯ ಸೇವಾ ಯೋಜನೆ ಹಾಗೂ ತೋಟಗಾರಿಕೆ ವಿಸ್ತರಣಾ ಮತ್ತು...

More Articles Like This

error: Content is protected !!
Join WhatsApp Group