ದಸರಾ ಕವಿತೆಗಳು

Must Read

ದಸರಾ ವೈಭವ

ಬಂತು ಬಂತು ನಾಡಹಬ್ಬ
ಮೈಸೂರು ದಸರಾ ಹಬ್ಬ
ಚಾಮುಂಡೇಶ್ವರಿ ಆರಾಧಿಸುವ ಹಬ್ಬ
ಕರುನಾಡಿನ ವೈಭವದ ಹಬ್ಬ…..

ಬ್ರಾಹ್ಮಿಶುಭ ಮುಹೂರ್ತದಿ
ಬನ್ನಿವೃಕ್ಷ ಪೂಜಿಸುವ ಹಬ್ಬ
ಆಯುಧ ಪೂಜೆ ಮಾಡಿ
ಭಜಿಸುವ ವಿಜಯ ದಶಮಿ ಹಬ್ಬ….

ಚಿನ್ನದ ಅಂಬಾರಿಯಲಿ
ದೇವಿಯ ಸುಂದರ ಮೆರವಣಿಗೆ
ಅಂಬಾರಿ ಧರ್ಮ ದೀಕ್ಷೆ ತೊಡುವ
ಉತ್ಸವದ ಕನ್ನಡ ನಾಡ ಹಬ್ಬ….

ಜನಪದ ಕಲೆ ನರ್ತನ ಸ್ಥಬ್ದ ಚಿತ್ರ
ಸಂಸ್ಕೃತಿ ಕಲೆಗಳ ಪ್ರದರ್ಶನದ ಹಬ್ಬ
ಪುಣ್ಯ ಭೂಮಿ ಮೈಸೂರಿನ
ಚಾಮುಂಡಿಯ ದಸರಾ ಹಬ್ಬ…..

ದ್ವೇಷ ಅಸೂಯೆ ಮರೆತು
ಒಂದಾಗಿ ಬಾಳುವ ಹಬ್ಬ
ನವ ದುರ್ಗೆಯರ ಆರಾಧಿಸುವ ನಾಡಹಬ್ಬ
ಜಂಬೂ ಸವಾರಿಯ ಮೋಜಿನ ಹಬ್ಬ…
ಶಮೀ ಪತ್ರೆ ಸ್ವೀಕರಿಸಿ ಬನ್ನಿ ತಗೊಂಡು
ಬಂಗಾರದಂಗ ಇರೋಣ ಎಲ್ಲರೂ ಒಂದಾಗಿ…..

ಸುಧಾ ಬಾಗಲಕೋಟ ಶಿಕ್ಷಕಿ
ನಿಡಸೋಶಿ ತಾಲೂಕು ಹುಕ್ಕೇರಿ, ಜಿಲ್ಲಾ ಬೆಳಗಾವಿ

————————-

ನಾಡಹಬ್ಬ

ಬಂತವ್ವಾ ನಾಡಹಬ್ಬ
ಹಷ೯ ತಂತವ್ವ
ಅರಸರ ಅರಮನೆ ಅಲಂಕಾರ
ಜಂಬೂ ಸವಾರಿ ನೋಡಲು ಹೋಗೋಣ ಬಾರವ್ವ
ಬನ್ನಿ ದಿಬ್ಬದ ಪೂಜೆಗೆ ಬೀದಿ ಬೀದಿಗಳಲ್ಲಿ ಅಂಬಾರಿ ಸವಾರಿ
ಅರಸರ ವೈಭವ ನೋಡವ್ವ
ಮಹಿಷಮರ್ದನ ಮಾಡಿದ                                        ತಾಯಿ ಚಾಮುಂಡಿ ಪಾದಕ.                                    ಮಣಿದು ಹರಿಕೆಸಲ್ಲಿಸಿ ಕರುಣೆ                                       ಕೃಪೆ ಬೇಡೋಣ ಬಾರವ್ವ

ಬನ್ನಿ ಬಂಗಾರ ಇಟ್ಟು ತಾಯಿಯ
ಸ್ತುತಿಸಿ ನಮ್ಮಬಾಳಬಂಗಾರವಾಗ
ಲೆಂದು ಪರಸ್ಪರ ಹಂಚಿ ನಲಿಯೋಣ
ಬಾರವ್ವ

ಶಾಲಿನಿ ಚಿನಿವಾರ ಬೆಳಗಾವಿ

Latest News

ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು

ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...

More Articles Like This

error: Content is protected !!
Join WhatsApp Group