spot_img
spot_img

ಮನ ಸೆಳೆದ ನಾಟಕ “ಮಹಾತ್ಮಾ ಕನಕದಾಸ”

Must Read

- Advertisement -

ಮೈಸೂರು ದಸರಾ ಮಹೋತ್ಸವ ಸಾಂಸ್ಕೃತಿಕ ಉಪ ಸಮಿತಿ ಪ್ರಾಯೋಜಕತ್ವದಲ್ಲಿ ಹಾಸನದ ಶ್ರೀ ಶಂಭುಲಿಂಗೇಶ್ವರ ಕಲಾವೃಂದ ಮಹಿಳಾ ತಂಡವು ಎಸ್. ಎಸ್. ಪುಟ್ಟೇಗೌಡ, ಶಂಭುನಾಥಪುರ ಅರಕಲಗೂಡು ವಿರಚಿತ ಮಹಾತ್ಮ ಕನಕದಾಸ ನಾಟಕವನ್ನು ಶ್ರೀಮತಿ ರಾಣಿ ಚರಾಶ್ರೀ ರವರ ನಿದೇ೯ಶನದಲ್ಲಿ ಮೈಸೂರು ಪುರಭವನ ರಂಗ ವೇದಿಕೆಯಲ್ಲಿ ಆಯುಧ ಪೂಜೆ ದಿನ ಮಹೋನ್ನತವಾಗಿ ಪ್ರದಶಿ೯ಸಿ ಪ್ರೇಕ್ಷಕರ ಮೆಚ್ಚುಗೆಗೆ ತಂಡ ಪಾತ್ರವಾಯಿತು.

ನಾಟಕವು ಕನಕದಾಸರ ಜೀವನ ಆಧಾರಿತವಾಗಿ ಸೊಗಸು ಸಂಭಾಷಣೆಯಲ್ಲಿ ಅಭಿನಯವು ಮೇಳೈಸಿ ನಾಟಕ ಯಶಸ್ವಿಯಾಗಿ ಮೂಡಿ ಬಂತು.

ನಾಟಕ ನಿದೇ೯ಶನ ಮಾಡಿ ತಿಮ್ಮನಾಯಕ ಕನಕದಾಸ ಪಾತ್ರವನ್ನು ರಾಣಿ ಚರಾಶ್ರೀ ಅವರು ಸಮಥ೯ವಾಗಿ ನಿಭಾಯಿಸಿ ಗಮನ ಸೆಳೆದರು. ನಾಟಕದಲ್ಲಿ ಬರುವ ಬೀರಪ್ಪನಾಯಕ ಮತ್ತು ವಾದಿರಾಜರು ಪಾತ್ರವನ್ನು ಪುಟ್ಟ ಬಸಮ್ಮ ಅರಸ ಯಶಸ್ವಿಯಾಗಿ ನಿಭಾಯಿಸಿದರು. ನಾಟಕದಲ್ಲಿ ಇಪ್ಪತ್ತು ಹೆಚ್ಚಾದ ಪಾತ್ರಗಳನ್ನು ಎರಡು ಮೂರು ಪಾತ್ರಗಳಲ್ಲಿ ಕಲಾವಿದೆಯರು ಹಂಚಿಕೆ ಮಾಡಿ ಕೊಂಡು ನಿಭಾಯಿಸಿದರು. ವ್ಯಾಸ ತೀರ್ಥರು, ಸಖಿ ಪಾತ್ರಗಳನ್ನು ವಸಂತಮ್ಮ ಬಿ ಸಿ, ಆವರು ತ್ರಿನಾಮಧಾರಿ, ಆದಿಕೇಶವ, ತೇಜಸ್ವಿ ಪಾತ್ರಗಳು ಗಾಯಿತ್ರಿ ಪ್ರಕಾಶ್, ಮಲ್ಲಪ್ಪ ಮಂತ್ರಿ, ರಾಮಾಚಾರ್ಯರು ಪಾತ್ರದಲ್ಲಿ ನಳಿನ .ಟಿ,
ಪುರಂದರದಾಸರು, ಸೇನಾಧಿಪತಿ ಪಾತ್ರಗಳನ್ನು, ಶಕುಂತಲಾ ಸೋಮಶೇಖರ್ ನಿಭಾಯಿಸಿದರು.ಸಖಿ, ಬಹಮನಿ ಸೇನಾಧಿಪತಿ ಪಾತ್ರಗಳನ್ನು ನಿರ್ಮಲಾ ಚಂದ್ರಶೇಖರ್
ಬಚ್ಚಮ್ಮ, ಹಯಗ್ರೀವಾಚಾರ್ಯ ಪಾತ್ರಗಳನ್ನು ತುಳಸಿ ಮುರಳಿಧರ್, ರಂಗ ,ವೈಕುಂಠದಾಸರು ಪಾತ್ರಗಳನ್ನು ರಜನಿ ನಾಗಭೂಷಣ್ . ಹಳ್ಳಿಯವ_ಪದ್ಮಾವತಿ ವೆಂಕಟೇಶ್
ಭೀಮಾಚಾರ್ಯ_ಜಯಲಕ್ಷ್ಮಿ ನಾಗೇಶ್
ಕೋಣ , ಹಳ್ಳಿಯವ ಪಾತ್ರಗಳನ್ನು ಯೋಗಾ ಸಾವಿತ್ರಮ್ಮ
ಲಚ್ಚಿ ಪಾತ್ರ ರೂಪ ಸತೀಶ್ ಇನ್ನೊಬ್ಬ ಹಳ್ಳಿಯವ ತಾರಾ ಕೃಷ್ಣಮೂರ್ತಿ ಮತ್ತೊಬ್ಬ ಹಳ್ಳಿಯವ ಆಶಾ ಶಂಕರ್ . ಸಖಿ, ಪಂಡಿತ ಪಾತ್ರಗಳನ್ನು ಜಯಲಕ್ಷ್ಮಿ ಠಾಕೂರ್,
ಶೇಷಾಚಾರ್ಯ, ಸಖಿ ಪಾತ್ರಗಳನ್ನು ವಿಶಾಲಾಕ್ಷಿ ಜಗದೀಶ್
ಮತ್ತೊಬ್ಬ ಹಾರುವ_ಕಮಲಾಬಾಯಿ ನಾಗರಾಜ್
ತೇಜುಮಯಾ ಅಧಿಕೇಶವ ಪಾತ್ರದಲ್ಲಿ ಶ್ರೇಯಸ್ ಎಂ ಎಸ್
ಬಾಲ ತಿಮ್ಮನಾಯಕ_ರಿಷಿಕ ಪಿ.ಎಂ ತಿಮ್ಮನಾಯಕನ ಸ್ನೇಹಿತ_ಆರುಷಿ ಪಿಎಂ ಇನ್ನೊಬ್ಬ ಸ್ನೇಹಿತ_ಚೇತಕ್ ರಾಮ್
ಸಖಿ ಪಾತ್ರದಲ್ಲಿ ಸಿದ್ದಮ್ಮ ನಟಿಸಿದರು.

- Advertisement -

ನಾಟಕದ ಹಿನ್ನೆಲೆ ಗಾಯನದಲ್ಲಿ ವಿದ್ವಾನ್ ಕಿರಗಸೂರು ರಾಜಪ್ಪನವರ ಹಾಡುಗಾರಿಕೆ ಮೋಡಿ ಮಾಡಿ ನಾಟಕಕ್ಕೆ ಜೀವಕಳೆ ತಂದಿತು. ಕೀ ಬೋರ್ಡ್ ಸಹಕಾರ ನಾಗೇಂದ್ರ ಪ್ರಸಾದ್, ನಾಟಕ ನಿದೇ೯ಶಕರು,ಮೈಸೂರು,ತಬಲ ಸಹಕಾರ ಪಟ್ಟಾಬಿರಾಮ, ಮಂಡ್ಯ, ಆವರದು. ನಾಟಕದಲ್ಲಿ ಆಳವಡಿಸಿದ ನೃತ್ಯ ಪ್ರದರ್ಶನದಲ್ಲಿ ವಿಧುಷಿ ಐಶ್ವರ್ಯ ರಾಧಾ ಗಿಡ್ಡೇಗೌಡ ಮತ್ತು ಯೋಗಿತಾ ಮಂಜುಳ ಪ್ರಕಾಶ್ ಪಟೇಲ್ ರವರು ಪ್ರದಶಿ೯ಸಿದ ನೃತ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
__
ಗೊರೂರು ಅನಂತರಾಜು
ಹಾಸನ
9449462879

- Advertisement -
- Advertisement -

Latest News

ಬೆಳಗಾವಿಯಿಂದ ಇಂಡಿಗೋ ಏರ್ ಲೈನ್ಸ್ ಪುನಾರಂಭ – ಕಡಾಡಿ ಹರ್ಷ

ಬೆಳಗಾವಿ: ಇಂಡಿಗೋ ಏರ್‌ಲೈನ್ಸ್ ಸಂಸ್ಥೆಯು ಬೆಳಗಾವಿ-ಬೆಂಗಳೂರು ನಡುವೆ ಡಿಸೆಂಬರ್ 20 ರಿಂದ ತನ್ನ ಬೆಳಗಿನ ವೇಳೆಯ ವಿಮಾನ ಸಂಚಾರವನ್ನು ಪುನರಾರಂಭ ಮಾಡುತ್ತಿರುವುದು ಸಂತೋಷದ ವಿಷಯ ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group