- Advertisement -
ಧನಾತ್ಮಕ ಪರಿವರ್ತನೆ ಅಗತ್ಯ: ಮಾಲಗಿತ್ತ
ಬಾಗಲಕೋಟೆ :ಜಿಲ್ಲೆಯ ಹುನಗುಂದ ತಾಲೂಕಿನ ಹೊನ್ನರಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶಿಕ್ಷಕ ಎಸ್ ಎಸ್ ಲಾಯದಗುಂದಿ ಮಾತನಾಡುತ್ತಾ, ಜಗತ್ತಿಗೆ ಪಿತೃವಾಕ್ಯ ಪರಿಪಾಲನೆಯ ಮೌಲ್ಯ ಸಾರಿದ ಶ್ರೀರಾಮನ ಬದುಕನ್ನು ಕಟ್ಟಿಕೊಟ್ಟು, ಸಹೋದರ ಧರ್ಮ, ಸತಿಧರ್ಮ, ಸೇವಾಧರ್ಮ ಬೋಧಿಸಿದ ಮಹರ್ಷಿ ವಾಲ್ಮೀಕಿ ಸಂಸ್ಕೃತದ ಆದಿಕವಿಯಾಗಿದ್ದಾರೆ ಎಂದರು.
ಮುಖ್ಯಶಿಕ್ಷಕ ಪಿ ಎಸ್ ಮಾಲಗಿತ್ತಿ ಮಾತನಾಡಿ, ಬೇಟೆಯಾಡುತ್ತ ಕಾಡಿನಲ್ಲಿದ್ದ ವಾಲ್ಮೀಕಿ ರಾಮಾಯಣ ರಚಿಸಿ ಮಹರ್ಷಿಯಾದ. ಪ್ರತಿಯೊಬ್ಬರ ಬದುಕಿನಲ್ಲೂ ಬದಲಾವಣೆಯ ಕಾಲವಿರುತ್ತದೆ. ಆ ಸಮಯದಲ್ಲಿ ಜಾಗೃತರಾಗಿ ಧನಾತ್ಮಕ ಪರಿವರ್ತನೆ ಹೊಂದಬೇಕು ಎಂದರು.
- Advertisement -
ಶಿಕ್ಷಕರಾದ ಮಹಾಂತೇಶ ವಂದಾಲಿ, ಅಶೋಕ ಬಳ್ಳಾ, ವಿದ್ಯಾರ್ಥಿ ಪ್ರತಿನಿಧಿ ಅಮೃತಾ ಕೊಣ್ಣೂರ, ಭಾಗ್ಯಶ್ರೀ ಸೂಳಿಬಾವಿ, ಧನ್ಯಾ ನಾಗರಾಳ, ಸಂಗಮೇಶ ಅಳ್ಳೊಳ್ಳಿ , ಪ್ರಜ್ವಲ್ ಚಲವಾದಿ ಇತರರಿದ್ದರು.