ಮೈಸೂರಿನ ಶಾರದಾವಿಲಾಸ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಆದಿಕವಿ ಮಹರ್ಷಿ ವಾಲ್ಮೀಕಿ ರವರ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಸಿ.ಕೆ.ಅಶೋಕ್ ಕುಮಾರ್ ರವರು ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾರತೀಯ ಸಂಸ್ಕೃತಿಯ ಪ್ರತಿಬಿಂಬ ರಾಮಾಯಣ ಮಹಾಕಾವ್ಯ. ಜೀವನದ ಮೌಲ್ಯಗಳೊಂದಿಗೆ ಪ್ರತಿಯೊಬ್ಬರು ಸ್ಫೂರ್ತಿ ಪಡೆಯುವಂತಹ ಮಹತ್ವದ ಗ್ರಂಥವಾಗಿದೆ. ವಾಲ್ಮೀಕಿ ಜೀವನದ ಕುರಿತಾಗಿ ಅನೇಕ ದಂತಕಥೆಗಳಿವೆ ಅದರಲ್ಲಿ ಒಂದು ಕಥೆಯ ಪ್ರಕಾರ ಬೇಡನಾಗಿ ನಂತರ ವಾಲ್ಮೀಕಿ ಋಷಿಯಾದ ಎಂಬುದು ಪ್ರತೀತಿ. ರಾಮಾಯಣದಲ್ಲಿ ಬರುವ ೨೪ ಸಾವಿರ ಶೋಕ್ಲಗಳು ಅತ್ಯಂತ ಅರ್ಥಪೂರ್ಣವಾಗಿವೆ. ವಾಲೀಕಿಯನ್ನು ಅಕ್ಷರ, ಶಿಕ್ಷಣ, ಜ್ಞಾನ, ಹೋರಾಟದ ಸಂಕೇತವಾಗಿ ಪರಿಭಾವಿಸಬೇಕಿದೆ ಎಂದರು.
ಇಂತಹ ಮಹಾನ್ ಚೇತನ ಮಹರ್ಷಿ ವಾಲ್ಮೀಕಿಯ ರಾಮಾಯಣ ಗ್ರಂಥವು ಯುವಕರಿಗೆ ಸ್ಫೂರ್ತಿದಾಯಕ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ಜಿ.ವೆಂಕಟರಾಮು, ಸಯ್ಯದ್ ಮುಶೀರ್, ಡಾ.ಪೂಜಾ, ಡಾ.ಲಾವಣ್ಯ, ರಾಜೇಂದ್ರ ಪ್ರಸಾದ್ ಹೊನ್ನಲಗೆರೆ, ಡಾ.ಡಿ.ಸಿ.ಉಮೇಶ್, ಪ್ರವೀಣ್ ಕುಮಾರ್, ಎಂ.ಕೆ.ರಶ್ಮಿ, ಮನೋಹರ್, ವಿಂದ್ಯಾಪ್ರಸಾದ್, ದಿವ್ಯ, ದೀಪಿಕಾ, ವಿ.ಧರ್ಮವೀರ್, ಮಂಜುನಾಥ್, ಪ್ರಕಾಶ್ ಕೃಷ್ಣಮೂರ್ತಿ ಉಪಸ್ಥಿತರಿದ್ದರು.