spot_img
spot_img

ಮನುಕುಲದ ಶ್ರೇಷ್ಠ ಮೌಲ್ಯಗಳನ್ನು ವಾಲ್ಮೀಕಿ ಪರಿಚಯಿಸಿದ್ದಾರೆ – ಬಿ ಎಂ ಕಬ್ಬೂರೆ

Must Read

spot_img
- Advertisement -

ಮೂಡಲಗಿ : ಒಬ್ಬ ದರೋಡೆಕೊರನಾಗಿದ್ದ ರತ್ನಾಕರ ಮಹರ್ಷಿ ವಾಲ್ಮೀಕಿಯಾಗಿ ನಾರದಮುನಿಗಳ ಸಂದೇಶದಂತೆ ಪರಿವರ್ತನೆಯಾಗಿ ಮಾನವ ಕುಲದಲ್ಲಿ ಶ್ರೇಷ್ಠತೆಯ ಮೌಲ್ಯಗಳನ್ನು ಹೊಂದಿರುವ ರಾಮನ ಜೀವನದ ಯಶೋಗಾಥೆಯನ್ನು ಪರಿಚಯಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ರಾಮನಾಮದಲ್ಲಿ ದೇವನಿದ್ದು ಸಾರ್ವಕಾಲಿಕ ಸಾಮಾಜಿಕ ಮೌಲ್ಯಗಳನ್ನು ರಾಮಾಯಣದ ೨೪೦೦೦ ಶ್ಲೋಕಗಳಲ್ಲಿ ಪರಿಚಯಸುವಲ್ಲಿ ಮಹರ್ಷಿ ವಾಲ್ಮೀಕಿ ಮನುಕುಲದ ಮಹಾನ್ ವಿದ್ವಾಂಸರಾಗಿದ್ದಾರೆ ಎಂದು ಮೂಡಲಗಿಯ ಆರ್‌ಡಿಎಸ್ ಪದವಿ ಕಾಲೇಜಿನ ಇತಿಹಾಸ ಉಪನ್ಯಾಸಕ ಬಿ.ಎಂ. ಕಬ್ಬೂರೆ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ,ವಾಣಿಜ್ಯ, ವಿಜ್ಞಾನ, ಸಮಾಜಕಾರ್ಯ ಪದವಿ ಮಹಾವಿದ್ಯಾಲಯ, ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ ಸ್ಕೌಟ್ಸ್ ಎನ್.ಎಸ್.ಎಸ್. ಘಟಕಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿಯಲ್ಲಿ ಅತಿಥಿಗಳಾಗಿ ಮಾತನಾಡಿದರು.

ಉಪನ್ಯಾಸಕಿ ಶೃತಿ ಹಂಜಿ ಮಾತನಾಡಿ, ಪಿತೃವಾಕ್ಯ ಪರಿಪಾಲಕನಾಗಿ ಸತ್ಯ ಮತ್ತು ಧರ್ಮದ ಮೂಲಕ ರಾಜ್ಯವನ್ನು ಆಳ್ವಿಕೆ ಮಾಡಿ ಮಾನವಕುಲದಲ್ಲಿ ಸರ್ವಶ್ರೇಷ್ಠತೆಯ ವಿಚಾರಗಳನ್ನು ಪ್ರತಿಪಾಧಿಸಿದ ರಾಮನ ಜೀವನದ ತಿರಳನ್ನು ಹೊಂದಿರುವ ರಾಮಾಯಣ ಎಂಬ ಗ್ರಂಥವನ್ನು ರಚಿಸಿ ಮಾನವಕುಲದ ಸೈದಾಂತಿಕ ವಿಚಾರಧಾರೆಗಳನ್ನು ಅರ್ಥೈಸಿಕೊಡುವಲ್ಲಿ ಮಹರ್ಷಿ ವಾಲ್ಮೀಕಿಯವರ ಜ್ಞಾನದ ಚಿಂತನೆಯನ್ನು ತಿಳಿಸಿಕೊಡುತ್ತದೆ ಎಂದರು.

- Advertisement -

ಉಪನ್ಯಾಸಕ ಡಾ. ಪ್ರಶಾಂತ ಮಾವರಕರ ಮಾತನಾಡುತ್ತಾ ಮಾನವನ ಜೀವನದಲ್ಲಿ ಯಾವುದು ಯೋಗ್ಯವಾದದ್ದು ಎಂದು ಮಹರ್ಷಿ ವಾಲ್ಮೀಕಿ ವಿಚಾರಧಾರೆಗಳಿಂದ ತಿಳಿದುಕೊಳ್ಳಬಹುದು ರಾಮಾಯಣ ಒಂದು ಗ್ರಂಥವಲ್ಲ ಅದು ಮನುಷ್ಯನಲ್ಲಿ ಇರುವ ಕಾಮ ಕ್ರೋಧ ಮದ ಮತ್ಸರಗಳನ್ನು ತ್ಯಜಿಸಿದಾಗ ಸನ್ಮಾರ್ಗಕ್ಕೆ ಒಯ್ಯವ ದಾರಿದೀಪವಾಗುವಂತೆ ಪರಿಚಯಸಿರುತ್ತಾರೆ ನಾವೆಲ್ಲರೂ ರಾಮನ ಜೀವನದ ಮಾರ್ಗಗಳನ್ನು ಅನುಸರಿಸಿ ರಾಮನಂತಹ ಜೀವನವನ್ನು ರೂಪಿಸಿಕೊಳ್ಳಲು ಪ್ರಯತ್ನಿಸೋಣ ಎಂದರು.

ಪ್ರಾಚಾರ್ಯ ಎಸ್.ಬಿ.ಗೋಟೂರೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡುತ್ತಾ ದರೋಡೆ ಮಾಡುವ ಸ್ವಭಾವ ಹೊಂದಿರುವ ಮೂಲ ವಾಲ್ಮೀಕಿ ನಂತರ ರಾಮಾಯಣ ಬರೆಯುವ ಜ್ಞಾನಾತ್ಮಕ ವ್ಯಕ್ತಿಯಾಗಿ ಪರಿವರ್ತನೆಯಾದ ಘಟನೆಗಳು ಇಂದಿಗೊ ನಮ್ಮ ಅರಿವಿಗೆ ಬರುತ್ತದೆ ಕೆಟ್ಟ ಸ್ವಭಾವಗಳನ್ನು ಬಿಟ್ಟು ವಾಲ್ಮೀಕಿ ಮತ್ತು ರಾಮನ ಸದ್ಬಾವನೆಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಾನಂದ ಸತ್ತೀಗೇರಿ, ಸಂಜೀವ ವಾಲಿ, ಸಂಗಮೇಶ ಕುಂಬಾರ, ಗಂಗಾಧರ ಮನ್ನಾಪೂರ, ಸಂತೋಷ ಲಟ್ಟಿ, ಹಣಮಂತ ಚಿಕ್ಕೋಡಿ, ಸುಭಾಸ ಮಾಲೋಜಿ, ಉಮೇಶ ಪುಟ್ಟಿ ಮತ್ತಿತರರು ಹಾಜರಿದ್ದರು.
ವಿದ್ಯಾರ್ಥಿನಿ ಸೌಜನ್ಯ ಮೂಡಲಗಿ ನಿರೂಪಿಸಿದರು ವಿದ್ಯಾರ್ಥಿನಿ ಸುಕನ್ಯಾ ಬೋಳಿ ಸ್ವಾಗತಿಸಿದರು. ವಿದ್ಯಾರ್ಥಿನಿ ರುಕ್ಮಿಣಿ ಮೆಕಳಿ ವಂದಿಸಿದರು.

- Advertisement -
- Advertisement -

Latest News

ದೂರದೃಷ್ಟಿಯ ನಾಯಕ ಎಸ್ ಎಮ್ ಕೃಷ್ಣ

ಸಿಂದಗಿ: ಸರಕಾರ ಆರ್ಥಿಕ ಅವಲಂಬನೆ ಹೆಚ್ಚಾಗಿರೋಕೆ ಮಾಜಿ ಮುಖ್ಯಮಂತ್ರಿ ಎಸ್.ಎಮ್.ಕೃಷ್ಣಾ ಅವರ ದೂರ ದೃಷ್ಟಿಯೇ ಕಾರಣ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಪಟ್ಟಣದ ಬ್ಲಾಕ್ ಕಾಂಗ್ರೆಸ್...
- Advertisement -

More Articles Like This

- Advertisement -
close
error: Content is protected !!
Join WhatsApp Group