ಮೂಡಲಗಿ : ರೂ. ೧.೧೪ ಕೋಟಿ ವೆಚ್ಚದಲ್ಲಿ ಮುಖ್ಯ ರಸ್ತೆ ಕಾಮಗಾರಿಗೆ ಚಾಲನೆ

Must Read

ಮೂಡಲಗಿ – ಪುರಸಭೆಯಿಂದ ವಿವಿಧ ಯೋಜನೆಗಳ ಅಡಿಯಲ್ಲಿ ನಗರದ ಮುಖ್ಯರಸ್ತೆಯನ್ನು ಪೊಲೀಸ್ ಠಾಣೆಯಿಂದ ಎಸ್ಎಸ್ಆರ್ ಕಾಲೇಜಿನವರೆಗೆ ಡಾಂಬರೀಕರಣ ಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪುರಸಭೆಯ ಅಧ್ಯಕ್ಷೆ ಖುರ್ಷಾದ ಅನ್ವರ ನದಾಫ ಅವರು ಜೆಸಿಬಿಗೆ ಪೂಜೆ ಸಲ್ಲಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು.

ಮೂಡಲಗಿ ನಾಗರಿಕರ ಬಹುದಿನದ ಬೇಡಿಕೆಯಾದ ಮುಖ್ಯ ರಸ್ತೆ, ಕಾಲೇಜಿನಿಂದ ಕ್ರಾಸ್ ವರೆಗಿನ ರಸ್ತೆ, ಡಿವೈಡರ್ ರಿಪೇರಿ ಕಾಮಗಾರಿಯನ್ನು ಶಾಸಕರ ನಿರ್ದೇಶನದ ಮೇರೆಗೆ ಸುಮಾರು ೧.೧೪ ಕೋಟಿ ರೂ. ವೆಚ್ಚದಲ್ಲಿ ಈ ರಸ್ತೆ ಕೈಗೊಳ್ಳಲಾಗಿದೆಯೆಂಬುದಾಗಿ ಪುರಸಭೆಯ ಮುಖ್ಯಾಧಿಕಾರಿ ತುಕಾರಾಮ ಮಾದರ ಹಾಗೂ ಅಭಿಯಂತರ ದಸ್ತಗೀರ ಪಠಾಣ್ ಮಾಹಿತಿ ನೀಡಿದರು.

ಶಾಸಕರ ವೈಯಕ್ತಿಕ ಆಸಕ್ತಿ ಹಾಗೂ ಮುಖ್ಯಾಧಿಕಾರಿ ಮಾದರ ಅವರ ದಕ್ಷ ಆಡಳಿತದಲ್ಲಿ ಮೂಡಲಗಿ ನಗರದಲ್ಲಿ ಬಹಳ ದಿನಗಳ ನಂತರ ಅನೇಕ ಕಾಮಗಾರಿಗಳಿಗೆ ಚಾಲನೆ ಸಿಕ್ಕಿದ್ದು ನಾಗರಿಕರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.ಈಗಾಗಲೇ ಮೂಡಲಗಿ ಹಳ್ಳದ ಸಣ್ಣ ಸೇತುವೆ ಪುನಶ್ಚೇತನ, ಬಸ್ ನಿಲ್ದಾಣ ಪಕ್ಕದ ಮೂತ್ರಾಲಯ, ಹಳ್ಳದಲ್ಲಿ ಸ್ವಚ್ಛತೆ ಅಷ್ಟೇ ಅಲ್ಲದೆ ಪುರಸಭೆಯ ಆವರಣದಲ್ಲಿ ಕೂಡ ಸ್ವಚ್ಛ ಸುಂದರ ವಾತಾವರಣ ಹಾಗೂ ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮುನ್ನುಡಿ ಬರೆದಿರುವ ತುಕಾರಾಮ ಮಾದರ ಅವರನ್ನು ನಗರದ ಸಾರ್ವಜನಿಕರು ಕೊಂಡಾಡುತ್ತಿದ್ದಾರೆ. ಈ ಹಿಂದೆ ಪತ್ರಕರ್ತರ ಸಂಘದಿಂದಲೂ ಅನೇಕ ಸಂಘ ಸಂಸ್ಥೆಗಳಿಂದಲೂ ಮುಖ್ಯಾಧಿಕಾರಿಗಳ ಪ್ರಶಂಸೆಗಾಗಿ ಸತ್ಕಾರ ಕಾರ್ಯಕ್ರಮಗಳನ್ನು ನಡೆಸಲಾಗಿದೆ.

ರಸ್ತೆ ಕಾಮಗಾರಿಯ ಆರಂಭದ ಸಮಯದಲ್ಲಿ ಶಾಸಕರ ಆಪ್ತ ಸಹಾಯಕ ಮಲ್ಲಿಕಾರ್ಜುನ ಯಕ್ಸಂಬಿ, ಪುರಸಭೆಯ ಮಾಜಿ ಅಧ್ಯಕ್ಷ ಹಣಂಮತ ಗುಡ್ಲಮನಿ, ಸದಸ್ಯರಾದ ಸಂತೋಷ ಸೋನವಾಲಕರ, ಈರಣ್ಣ ಕೊಣ್ಣೂರ,ಆನಂದ ಟಪಾಲದಾರ, ಸಲೀಂ ಇನಾಮದಾರ, ರವಿ ಸಣ್ಣಕ್ಕಿ, ಗಫಾರ ಡಾಂಗೆ, ರವಿ ಮೂಡಲಗಿ, ಲಕ್ಕಪ್ಪ ಶಾಬನ್ನವರ, ಅನ್ವರ ನದಾಫ ಮುಂತಾದವರು ಇದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group