ಮೂಡಲಗಿ:-ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಮತ್ತೆ ಹಳೆಯ ಆಡಳಿತ ಮಂಡಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಎಸ್.ಎ.ದೊಡ್ಡಮನಿಯವರು ತಿಳಿಸಿದರು.
ಹಳೆಯ ಪೇನಲ ಮತ್ತೆ ಐದು ವರ್ಷಕ್ಕೆ ಆಯ್ಕೆಯಾಗಿದೆ. ಅಧ್ಯಕ್ಷರಾಗಿ ಈರಪ್ಪ ಭೀಮಪ್ಪ ಜಿಣಗನ್ನವರ ಮತ್ತು ಶಿವಾನಂದ ವಿಠ್ಠಲ ಖಿಲಾರಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಲಕ್ಷ್ಮಣ ತಮ್ಮಣ್ಣ ಹುಚರಡ್ಡಿ, ಬಸಪ್ಪ ಲಕ್ಷ್ಮಣ ಸಂಕನ್ನವರ, ತಿಮ್ಮಪ್ಪ ರಾಮಪ್ಪ ಬಡಗಣ್ಣವ,ಮಹಾದೇವ ರಂಗಪ್ಪ ಬೈಲವಾಡ, ವೆಂಕಪ್ಪ ಮಾಯಪ್ಪ ಬೀರನಗಡ್ಡಿ ಸಾಮಾನ್ಯ ಕ್ಷೇತ್ರದಿಂದಿ ಆಯ್ಕೆ. ಶ್ರೀಮತಿ ಗೌರಮ್ಮ ಶಿದ್ರಾಮಯ್ಯ ಹಿರೇಮಠ ಬಿನ್ ಸಾಲಗಾರ ಕ್ಷೇತ್ರದಿಂದ ಆಯ್ಕೆ.
ಶ್ರೀಮತಿ ಮಹಾನಂದ ಶಿವರುದ್ರಪ್ಪ ಬಾಗೋಜಿ ಮತ್ತು ಶ್ರೀಮತಿ ಲಕ್ಷ್ಮೀಬಾಯಿ ಕೃಷ್ಣಪ್ಪ ಮಂಟೂರ ಮಹಿಳಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ
ಶಿವಾನಂದ ವಿಠ್ಠಲ ಖಿಲಾರಿ ಹಾಗೂ ಈರಪ್ಪ ಭೀಮಪ್ಪ ಜಿಣಗನ್ನವರ ಹಿಂದೂಳಿದ ಬ ವರ್ಗದ ಸಾಲಗಾರ ಮತಕ್ಷೇತ್ರದಿಂದ ಆಯ್ಕೆ.
ಯಾಕುಬ ಶಿವಲಿಂಗಪ್ಪ ಹಾದಿಮನಿ ಪರಿಶಿಷ್ಟ ಜಾತಿ ಸಾಲಗಾರ ಕ್ಷೇತ್ರದಿಂದ ಆಯ್ಕೆ ಮತ್ತು ಭೀಮಶೆಪ್ಪ ರಾಮಪ್ಪ ತಳವಾರ ಪರಿಶಿಷ್ಟ ಪಂಗಡ ಸಾಲಗಾರ ಕ್ಷೇತ್ರದಿಂದ ಅವಿರೋಧವಾಗಿ ಕಮಲದಿನ್ನಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘಕ್ಕೆ ಆಯ್ಕೆಯಾಗಿದ್ದಾರೆ ಎಂದು ಅವರು ತಿಳಿಸಿದರು.
ಸಹಕಾರಿ ಸಂಘಕ್ಕೆ ಆಯ್ಕೆಯಾದವರನ್ನು ಕಮಲದಿನ್ನಿ ಹಿರಿಯರು ಗೌರವಿಸಿದರು.