spot_img
spot_img

ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ – ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಗೋಕಾಕ- ಆರ್ಥಿಕವಾಗಿ ಹಿಂದುಳಿದ, ಅದರಲ್ಲೂ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿರುವ ಮಹಿಳೆಯರಿಗಾಗಿ ಕ್ಷೀರ ಸಂಜೀವಿನಿ ಯೋಜನೆಯನ್ನು ಜಾರಿಗೊಳಿಸಿದ್ದು 4 ರ ಹಂತದಲ್ಲಿ ಈ ಯೋಜನೆಯನ್ನು ಅನುಷ್ಠಾನ ಮಾಡಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ತಿಳಿಸಿದರು.

ಶನಿವಾರದಂದು ನಗರದ ತಮ್ಮ ಗೃಹ ಕಚೇರಿಯಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘದಿಂದ ಜರುಗಿದ ಕಾರ್ಯಕ್ರಮದಲ್ಲಿ ಒಟ್ಟು 23.14 ಲಕ್ಷ ರೂಪಾಯಿಗಳ ಚೆಕ್ ಗಳನ್ನು ವಿವಿಧ ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಅವರು, ಮಹಿಳಾ ಸಮುದಾಯದವರು ಸಹ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕವಾಗಿಯೂ ಸಬಲರಾಗಬೇಕೆನ್ನುವ ಉದ್ದೇಶದಿಂದ ಕಹಾಮ ಹಾಗೂ ರಾಜ್ಯ ಸರಕಾರವು ಜಂಟಿಯಾಗಿ ಈ ಯೋಜನೆಯನ್ನು ಜಾರಿ ಮಾಡಿದೆ ಎಂದು ಹೇಳಿದರು.

ಈಗಾಗಲೇ ತಮ್ಮ ನೇತೃತ್ವದಲ್ಲಿ ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ಅಧಿಕಾರದಲ್ಲಿದ್ದು, ರೈತ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಒಕ್ಕೂಟಕ್ಕೆ ಹಾಲನ್ನು ಪೂರೈಕೆ ಮಾಡುತ್ತಿರುವ ರೈತರಿಗೆ 20 ದಿನಗಳಲ್ಲಿ ಬಿಲ್ಲನ್ನು ಸಂದಾಯ ಮಾಡುತ್ತಿದ್ದೇವೆ. ಉತ್ತಮ ಗುಣಮಟ್ಟದ ಹಾಲನ್ನು ಪೂರೈಕೆ ಮಾಡುವಂತೆಯೂ ರೈತರಲ್ಲಿ ಮನವಿ ಮಾಡಿಕೊಂಡ ಅವರು, ಕಳಪೆ ಮಟ್ಟದ ಹಾಲು ಪೂರೈಕೆ ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ನಮ್ಮ ಒಕ್ಕೂಟಕ್ಕೆ ಬರುತ್ತಿವೆ ಎಂದು ಅವರು ಗಮನ ಸೆಳೆದರು.

- Advertisement -

ಶಾಸಕ ಬಾಲಚಂದ್ರ ಜಾರಕಿಹೊಳಿಯವರು ರೈತ ಕಲ್ಯಾಣ ಸಂಘದ ವತಿಯಿಂದ ತಲಾ 20 ಸಾವಿರ ರೂ. ಗಳಂತೆ ಒಟ್ಟು 17 ಫಲಾನುಭವಿಗಳಿಗೆ 3.40 ಲಕ್ಷ ರೂಪಾಯಿ, ಕ್ಷೀರ ಸಂಜೀವಿನಿ 4 ರ ಹಂತದಲ್ಲಿ ನಯ ಅರಳಿಮಟ್ಟಿಯ ಮಡ್ಡಿ ಮಹಿಳಾ ಹಾಲು ಉತ್ಪಾದಕರ ಸಂಘ, ರಡ್ಡರಟ್ಟಿ ಲಕ್ಷ್ಮೀ ನಗರ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘ ಮತ್ತು ಮೇಲ್ಮಟ್ಟಿಯ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಹೈನು ರಾಸು ಖರೀದಿಗಾಗಿ ತಲಾ 6.58 ಲಕ್ಷ ರೂಪಾಯಿಗಳು ಸೇರಿ 19.74 ಲಕ್ಷ ರೂ. ಚೆಕ್ ಗಳನ್ನು ವಿತರಿಸಿದರು.

ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ನಿರ್ದೇಶಕರಾದ ಮಲ್ಲಪ್ಪ ಪಾಟೀಲ, ಸವಿತಾ ಖಾನಪ್ಪಗೋಳ, ಮುತ್ತೆಪ್ಪ ಖಾನಪ್ಪಗೋಳ, ಭರಮಣ್ಣ ಪಾಶ್ಚಾಪೂರ, ಗೋಕಾಕ ಉಪ ವ್ಯವಸ್ಥಾಪಕ ಡಾ. ವೀರಣ್ಣಾ ಕೌಜಲಗಿ, ಕ್ಷೀರ ಸಂಜೀವಿನಿ ಅಧಿಕಾರಿ ಮಲಪ್ರಭಾ ಗಾಣಗಿ, ಪಾಂಡು ನಂದಿ, ಗೋಪಾಲ ಭಂಡಾರಿ, ವಿಠ್ಠಲ ಲೋಕುರಿ, ಸಚಿನ್ ಪಡದಲ್ಲಿ, ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಸದಸ್ಯರು ಸಹಿತ ಹಲವರು ಉಪಸ್ಥಿತರಿದ್ದರು.

 

- Advertisement -
- Advertisement -

Latest News

ಕವನ : ದ್ರೌಪದಿಯ ಸ್ವಗತ

ದ್ರೌಪದಿಯ ಸ್ವಗತ ನಾನು ಅರಸುಮನೆತನದ ಹೆಣ್ಣು, ಅರ್ಧಜಗದ ಮಣೆ ಹಿಡಿದ ಹೆಣ್ಣು. ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ, ನೂರು ಚೂಪಿನ ಕತ್ತಿಗಳ ಮಧ್ಯೆ ಹೆಜ್ಜೆ ಹಾಕಿದಂತಿತ್ತು. ನಾನು ಕದನದ ಕಿಡಿಯಾದೆ ಅವಮಾನಗಳ ನೆರಳಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group