- Advertisement -
ಜನಪದ ಶೈಲಿಯ
ಗರತಿಯ ಹಾಡು
ಮುಂಜಾನೆ ಏಳುತ್ತ
ಮನೆ ದೇವ್ರ ನೆನೆಯುತ್ತ
ಅಂಗಳದಿ ರಂಗೋಲಿ ಬಿಡಿಸ್ಯಾಳ
ಅಂಗಳದಿ ರಂಗೋಲಿ ಬಿಡಿಸ್ಯಾಳ
ಮಾದೇವಿ
ಮನದಾಗ ಮಾದೇವನ ನೆನೆದಾಳ||
ಪತಿಯ ಪ್ರಾಣ ಪದಕ
ವಂಶದ ಕುಲತಿಲಕ
ಮಕ್ಕಳಿಗೆ ಮಾಣಿಕ್ಯ ಮಾದೇವಿ
ಮಕ್ಕಳಿಗೆ ಮಾಣಿಕ್ಯ ಆಗ್ಯಾಳ
ಮಾದೇವಿ
ಹಿರಿಯರಿಗೆ ತಲೆಬಾಗಿ ನಡೆದಾಳ||
- Advertisement -
ನೆರೆಹೊರೆಗೆ ಬೇಕಾಗಿ
ಬಡವರಿಗೆ ನೆರವಾಗಿ
ಮನೆಯೆಂಬ ಮಂದಿರಕ್ಕೆ ಬೆಳಕಾಗಿ
ಮನೆಯೆಂಬ ಮಂದಿರಕ್ಕೆ ಬೆಳಕಾಗಿ
ಮಾದೇವಿ
ಗುರುವಿಗೆ ಶರಣಾಗಿ ನಡೆದಾಳ||
ಮನೆ ಕೆಲಸಕ್ಕೂ ಸೈ ಇವಳು
ಹೊರ ದುಡಿಮೆ ಬಲ್ಲವಳು
ಕಾಯಕವೇ ಕೈಲಾಸ ಅಂತಾಳ
ಕಾಯಕವೇ ಕೈಲಾಸ ಅಂತಾಳ
ಮಾದೇವಿ
ಕುಲಕೆ ಕೀರ್ತಿಯ ಕಳಸ ಆಗ್ಯಾಳ||
ಶ್ರೀಮತಿ ಮೀನಾಕ್ಷಿ ಸೂಡಿ
ಕವಯತ್ರಿ,ಲೇಖಕಿ
ದೇವಗಾಂವ,ಕಿತ್ತೂರು.