ಡಾ. ಶಶಿಕಾಂತ ಪಟ್ಟಣ ಕವನಗಳು

Must Read

ವಿಶ್ವ ಕವಿಯ ದಿನ

ಪ್ಯಾಬ್ಲೋ ಪುಷ್ಕಿನ್ ಪಂಪ
ಶೆಲ್ಲಿ ಕೀಟ್ಸ್ ಕಾವ್ಯ ಕಂಪ
ಅಭಿನಂದನೆ ತಮಗೆಲ್ಲ
ಹರಿದ ಭಾವದ ಕಂಪು
ಕನ್ನಡಕೆ ಒಬ್ಬರೇ
ರಸ ಋಷಿ ಕುವೆಂಪು
ಅಂದು ಮುಂಜಾವಿನ ರವಿಕಿರಣ
ಪಕ್ಷಿ ಇಂಚರದ ಮಾಧುರ್ಯ
ಮಳೆಯಲ್ಲಿ ತಪ್ಪನಷ್ಟೇ ತೋಯ್ದು
ಮರ ಬುಡದಲ್ಲಿ ನಿಂತದ್ದು
ಗಾಳಿಯ ಎದುರಿಗೆ
ಮುಗಿಲ ಮುಟ್ಟಿದ ಪಟ
ಓಣಿಕೇರಿಯಲಿ ಲಗೋರಿ
ಹಬ್ಬಕೆ ಪಟಾಕಿ ಸದ್ಧು
ಸಾವಿರ ಮರಗಳನ್ನು ಕಡಿದು
ಹತ್ತು ಸಸಿಗಳನ್ನು ನೆಡುತ್ತೇವೆ .
ಭೂಮಿ ಬಿರಿದಿದೆ
ಬರದ ಅಟ್ಟಹಾಸ ಕುಹಕತನ
ಕವಿ ಮಾರುವ ಹಾಗಿಲ್ಲ
ಪ್ರಶಸ್ತಿ ಪುರಸ್ಕಾರ ವಸ್ತುಗಳನ್ನು
ಮನೆಯಲ್ಲಿ ಮಕ್ಕಳು ಬಿಕ್ಕುತ್ತಿವೆ
ಹಸಿವು ಅನಕ್ಷರತೆ ಬಡತನ
ಇಲ್ಲ ಅಕ್ಕಿ ಗಂಜಿ
ನಿಂತಿಲ್ಲ ಕಾರ್ಮಿಕರ ಶೋಷಣೆ.
ಗುಡಿ ಮಸೀದಿ ಚರ್ಚು ವ್ಯವಹಾರ
ಮುಖವಾಡ ಉದರ ಪೋಷಣೆ
ಮುಸಂಜೆ ಸಮಯದಲ್ಲಿ
ಕವಿಗೆ ನಮನ ಹೊರಗೆಲ್ಲ ನಗಿಸಿ
ಒಳಗೊಳಗೇ ಅತ್ತ ನಿರಲಾ
ಬಾನಲ್ಲಿ ಹಾರಿದವು ಹಕ್ಕಿ ಬಿಚ್ಚಿ ರೆಕ್ಕೆ
ಹೀಗೊಂದು ಮುಂಜಾವು
ಯಾರಿರದ ಹಾದಿಯಲಿ
ಸದ್ದಿಲ್ಲದೇ ಹೊರಟಿತು
ಕವಿಯ ಹೆಣದ ಪಲ್ಲಕ್ಕಿ
ಸತ್ಯ ಶೋಧಕ ನಿತ್ಯ ಭಾಷಿಕ
ಸತ್ತು ಹೋದನು
ಮುಖ ಮುಚ್ಚಿ ಮಣ್ಣಿನ ಹೆಂಟೆಯಲಿ
ಇಂದು ವಿಶ್ವ ಕವಿದಿನ
ನೆನೆಯಬೇಕು ಭಾವನೆಗಳ ಯಜಮಾನನನ್ನು
ಹೃದಯ ಸಿರಿವಂತನನ್ನು
ಕವಿ ಇಲ್ಲವಾದರೂ
ಕಾವ್ಯ ಮೀಟುತ್ತಿದೆ ತಂತಿ.
———————————–

ತಪ್ಪೊಪ್ಪಿಗೆ

ಗೆಳೆಯರೇ
ಇಂದು ವಿಶ್ವ ಕಾವ್ಯ ದಿನ
ನಾನು ಕವಿಯಲ್ಲ
ಒಬ್ಬ ಕಾರ್ಯಕರ್ತ
ಹೋರಾಟಗಾರ

ನಾನು ಬರೆಯುವುದು
ಕವನ ಕಾವ್ಯವಲ್ಲ
ನನ್ನವರ ಕೊಂದು ಬದುಕಿದ
ನೀಚರ ವಿರುದ್ಧ
ನಿತ್ಯ ಅಕ್ಷರಗಳ ದಾಳಿ

ನನ್ನೆಲ್ಲ ಕೋಪ ಆಕ್ರೋಶ
ಸಿಟ್ಟು ತಲ್ಲಣ ವೇದನೆ
ಕಳವಳ ಚಿಂತನೆ
ತಳಮಳ ನೋವುಗಳ
ಬರೆದು ಹಂಚುವ ಕರಪತ್ರ

ರಾತ್ರಿಯಿಡಿ ಮಲಗದೆ
ಶೋಷಣೆ ವಿರುದ್ಧ
ಲೇಖನಿ ಖಡ್ಗವ ಮಾಡಿ
ಪ್ರತೀಕಾರದ ಘೋಷಣೆ
ನಿಮಗೆ ವರದಿ ಒಪ್ಪಿಸುತ್ತೆನೆ

ನಾನಲ್ಲ ಕವಿ ಸಾಹಿತಿ
ರಂಜನೆಗೆ ಬರೆದು ಪ್ರಶಸ್ತಿಗೆ
ಬೆನ್ನು ಬಿದ್ದವನಲ್ಲ
ಬುದ್ಧ ಬಸವ ಅಂಬೇಡ್ಕರರ ಮಗ
ಕವಿಯಲ್ಲ ನನ್ನ ತಪ್ಪೋಪ್ಪಿ ಕೊಳ್ಳಿ
_________________________

ಡಾ. ಶಶಿಕಾಂತ ಪಟ್ಟಣ ರಾಮದುರ್ಗ

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group