ಪುಸ್ತಕಗಳ ಲೋಕಾರ್ಪಣೆ

0
111

ಸವದತ್ತಿ: ಪಟ್ಟಣದ ಗುರುಭವನದಲ್ಲಿ ಮಾ.೨೨ರಂದು ಸಂಜೆ ೪ ಗಂಟೆಗೆ ಸೀಮಾ ಶಶಿರಾಜ ವನಕಿಯವರು ರಚಿಸಿದ ಕರಿನೆರಳ ಕೃಷ್ಣೆ ಹಾಗೂ ಅವಳೊಂದು ಪಾರಿಜಾತ ಕೃತಿಗಳ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಮುನವಳ್ಳಿಯ ಶ್ರೀ ಮುರಘೇಂದ್ರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಶಾಸಕ ವಿಶ್ವಾಸ ವೈದ್ಯ ಉದ್ಘಾಟಿಸಲಿದ್ದಾರೆ, ಪುರಸಭೆ ಅಧ್ಯಕ್ಷೆ ಚಿನ್ನವ್ವ ಹುಚ್ಚನ್ನವರ ಅಧ್ಯಕ್ಷತೆ ವಹಿಸುವರು. ಶಂಕರ ಹಲಗತ್ತಿ ಹಾಗೂ ಮಲಗೌಡ ಪಾಟೀಲ ಕೃತಿ ಬಿಡುಗಡೆ ಮಾಡಲಿದ್ದು, ಡಾ.ಬಿ.ಐ.ಚಿನಗುಡಿ ಹಾಗೂ ಉಮೇಶ ಬಡಿಗೇರ ಕೃತಿ ಪರಿಚಯ ಮಾಡಲಿದ್ದಾರೆ.

ತಹಸೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ ದಂಡಿನ, ರತ್ನಾ ಆನಂದ ಮಾಮನಿ, ವಿರುಪಾಕ್ಷ ಮಾಮನಿ, ಡಾ.ಅಭಿನಂದನ ಕಬ್ಬಿಣ, ಬಸವರಾಜ ಕಾರದಗಿ, ಝಕೀರ ನದಾಫ, ಅಲ್ಲಮಪ್ರಭು ಪ್ರಭುನವರ, ಡಾ.ವೈ.ಬಿ.ಕಡಕೋಳ, ಬಸವರಾಜ ಕಪ್ಪಣ್ಣವರ, ಶಿವರಾಜ ವನಕಿ ಭಾಗವಹಿಲಿದ್ದಾರೆ.ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ