spot_img
spot_img

ಶಿವಲಿಂಗ ಟಿರಕಿಯವರಿಗೆ ಸತ್ಕಾರ

Must Read

- Advertisement -

ಮೂಡಲಗಿ – ಬಡ ನೇಕಾರರು ಸಾಲ ಬಾಧೆಯಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ. ಸರ್ಕಾರ ನೇಕಾರರ ನೆರವಿಗೆ ಬರಬೇಕು. ನೇಕಾರರಿಗಾಗಿ ವಿಶೇಷ ಪ್ಯಾಕೇಜ್, ವಿಮಾ ಯೋಜನೆ, ಮಾಸಾಶನಗಳನ್ನು ಮಂಜೂರು ಮಾಡಬೇಕು ಎಂದು ಕರ್ನಾಟಕ ರಾಜ್ಯ ನೇಕಾರ ಸೇವಾ ಸಂಘದ ರಾಜ್ಯಾಧ್ಯಕ್ಷ ಶಿವಲಿಂಗ ಟಿರಕಿ ಹೇಳಿದರು.

ಮೂಡಲಗಿ ಕುರುಹಿನಶೆಟ್ಟಿ ಸಮಾಜದ ವತಿಯಿಂದ ಶ್ರೀ ನೀಲಕಂಠಮಠದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.‌ನೇಕಾರರ ಸಮಸ್ಯೆಗಳ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ನಾವು ಎಲ್ಲಾ ಕಡೆಗೆ ಮನವಿಗಳನ್ನು ನೀಡುತ್ತಿದ್ದೇವೆ ಎಂದು ಅವರು ಹೇಳಿದರು.

ನೀಲಕಂಠ ಮಠದ ಶ್ರೀ ಶಿವಾನಂದ ಸ್ವಾಮೀಜಿಯವರು ಟಿರಕಿಯವರನ್ನು ಸತ್ಕರಿಸಿದರು. ಈ ಸಂದರ್ಭದಲ್ಲಿ ಈಶ್ವರ ಮುರಗೋಡ, ಸೋಮು ಮರೇಗುದ್ದಿ, ಬಿಜೆಪಿ ನೇಕಾರ ಪ್ರಕೋಷ್ಠ ಸಂಚಾಲಕ ಮಹಾಲಿಂಗ ಒಂಟಗೋಡಿ, ಕುಮಾರ ಗಿರಡ್ಡಿ, ಮಡಿವಾಳ ಜಿಡ್ಡಿ, ಬಿಜೆಪಿ ಮುಖಂಡ ಪ್ರಕಾಶ ಮಾದರ, ಶ್ರೀಶೈಲ ಖಾನಾಪೂರ ಇತರರು ಇದ್ದರು.

- Advertisement -
- Advertisement -

Latest News

ಬಸವಣ್ಣನ ವಚನಗಳು ಎಂದೆಂದಿಗೂ ಪ್ರಸ್ತುತ: ಡಾ.ಎಚ್.ಆಯ್.ತಿಮ್ಮಾಪೂರ

ಮೂಡಲಗಿ: ೧೨ನೇ ಶತಮಾನ ವಚನ ಸಾಹಿತ್ಯದ ಸುವರ್ಣಯುಗ. ಶಿವಶರಣರು ಬಸವಣ್ಣನವರ ನೇತೃತ್ವದಲ್ಲಿ ಸಾವಿರಾರು ವಚನಗಳನ್ನು ರಚಿಸುವ ಮೂಲಕ ಸಮಾಜವನ್ನು ಶುದ್ಧಿಕರಿಸಿದ್ದಾರೆ. ಬಸವಣ್ಣನವರ ವಚನಗಳಲ್ಲಿ ಸಮಾನತೆ, ಕಾಯಕ,...
- Advertisement -

More Articles Like This

- Advertisement -
close
error: Content is protected !!
Join WhatsApp Group