- Advertisement -
ಸಿಂದಗಿ: ತಾಲೂಕಿನ ಮಾಡಬಾಳ ಗ್ರಾಮದಲ್ಲಿ ಮಹಾಶಿವರಣೆ ಹೆಮರಡ್ಡಿ ಮಲ್ಲಮ್ಮಳ 605ನೇ ಜಯಂತ್ಯುತ್ಸವದ ನಿಮಿತ್ತ ಮೆರವಣಿಗೆ ಅದ್ದೂರಿಯಾಗಿ ನೆರವೇರಿತು.
ಮೆರವಣಿಗೆಯು ಮಲ್ಲಿಕಾರ್ಜುನ ಕಟ್ಟೆಯಿಂದ ಹೊರಟು ಗಂಗಾಪೂಜೆ ಸಲ್ಲಿಸಿ ಗ್ರಾಮದ ವಿವಿಧ ರಸ್ತೆಗಳಲ್ಲಿ ಶಿವಶರಣೆ ಹೆಮರಡ್ಡಿ ಮಲ್ಲಮ್ಮಳ ಮೆರವಣಿಗೆಯ ರಸ್ತೆಯುದ್ಧಕ್ಕೂ ಯುವಕರು ಪುಷ್ಪಾರ್ಚನೆ, ಮಹಿಳೆಯರು, ಮಕ್ಕಳಾಧಿಯಾಗಿ ಭಜನೆ, ಮಾಡುವ ಮೂಲಕ ವಚನಗಳನ್ನು ಹೇಳುತ್ತಿರುವುದು ಜನಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದಲ್ಲಿ ರಡ್ಡಿ ಸಮಾಜ ಬಾಂಧವರು ಸಕಲ ಗ್ರಾಮಸ್ಥರು ಬಾಗವಹಿಸಿದ್ದರು ನಂತರ ಮಹಾಪ್ರಸಾದದ ವ್ಯವಸ್ಥೆ ಕಲ್ಪಿಸಲಾಯಿತು.