ಹಾಸನದ ಚಿತ್ಕಲಾ ಪೌ೦ಡೇಶನ್ವ ತಿಯಿಂದ ಏರ್ಪಡಿಸಿರುವ ಏಕ ವ್ಯಕ್ತಿಚಿತ್ರ ಕಲಾ ಪ್ರದರ್ಶನಕ್ಕೆ ಕದಂಬ ಸೈನ್ಯ ಕನ್ನಡ ಪರ ಸಂಘಟನೆಯ ರಾಜ್ಯಾಧ್ಯಕ್ಷರು ಬೇಕ್ರಿ ರಮೇಶ್ ಸಾಹಿತಿ ಗೊರೂರು ಅನಂತರಾಜು, ಚಿತ್ರ ಕಲಾವಿದ ಯಾಕೂಬ್, ಉಪನ್ಯಾಸಕರು ಎ.ರಾಮಮೂರ್ತಿ ಕದಂಬ ಸೈನ್ಯ ರಾಜ್ಯ ಸಹ ಕಾರ್ಯದರ್ಶಿ ಉಮ್ಮಡಹಳ್ಳಿ ನಾಗೇಶ್ ಭೇಟಿ ನೀಡಿ ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ಬಿ ಎಸ್ ದೇಸಾಯಿಯವರು ಪ್ರಾಸ್ತಾವಿಕ ನುಡಿಗಳನ್ನಾಡುತ್ತಾ ಚಿತ್ಕಲಾ ಫೌಂಡೇಶನ್ ವತಿಯಿಂದ ಹಾಸದ ಜನತೆಗೆ ಶೋಭಾ ರಾಣಿ ಅವರ ಕಲಾಕೃತಿಗಳನ್ನು ಪರಿಚಯಿಸುವ ಉದ್ದೇಶದಿಂದ ಈ ಕಲಾಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣಪತಿ ಅಗ್ನಿಹೋತ್ರಿ ಅವರು “ಕಲೆ ಮತ್ತು ಕಲಾಕೃತಿ” ಎಂಬ ವಿಷಯದ ಕುರಿತು ಮಾತನಾಡುತ್ತಾ ಕಲೆ ಮತ್ತು ಕಲಾಕೃತಿ ಎರಡೂ ಕೂಡ ಅಗಾಧವಾದ ಅರ್ಥವ್ಯಾಪ್ತಿಯನ್ನು ಹೊಂದಿರುತ್ತದೆ. ಇದನ್ನು ಸೀಮಿತವಾಗಿ ನೋಡಲು ಸಾಧ್ಯವಿಲ್ಲ. ವಿಜ್ಞಾನ ದೃಷ್ಟಿಯಿಂದ ಇದಕ್ಕೆ ವ್ಯಾಪಕವಾದ ವಿಸ್ತಾರಗಳಿವೆ. ಐತಿಹಾಸಿಕವಾಗಿ ನೋಡುತ್ತಾ ಹೋದರೂ ಇದಕ್ಕೆ ಸ್ಪಷ್ಟವಾದ ಚಿತ್ರಣ ಸಿಗುವುದಿಲ್ಲ. ಕಲಾಕೃತಿಯ ಬಗ್ಗೆ ಹೇಳುವುದಾದರೆ ಇದು ನಮ್ಮ ಅಭಿವ್ಯಕ್ತಿಯ ನಂತರದ ಭಾಗವಾಗಿದೆ. ಕಲಾಕೃತಿಯಲ್ಲಿ ರೂಪಕಗಳ ಬಳಕೆಯಾದಾಗ ಮೂರ್ತ ಹಾಗೂ ಅಮೂರ್ತ ರೂಪಕ್ಕೂ ಕೊಂಡೊಯ್ಯುತ್ತದೆ. ಶೋಭಾರಾಣಿ ಇವರ ಕಲಾಕೃತಿಗಳಲ್ಲಿ ರೂಪಕ ಬಳಕೆಯು ತುಂಬಾ ಅದ್ಭುತವಾಗಿ ಮೂಡಿಬಂದಿರುತ್ತದೆ. ಈ ಚಿತ್ರಗಳಲ್ಲಿ ಒಂದರ ಮೇಲೊಂದು ಮೀನುಗಳು ಇದ್ದರೂ ಸಹ ಹಿಂದಿರುವ ಮೀನಿನ ಭಾವಗಳು ಗೋಚರವಾಗುತ್ತದೆ. ಈ ಬಗೆಯ ರೂಪಕಗಳು ಚಿತ್ರಗಳಲ್ಲಿ ಕಂಡು ಬಂದಾಗ ಕಲಾಕೃತಿಯ ಮೌಲ್ಯಗಳು ಹೆಚ್ಚುತ್ತವೆ ಹಾಗೂ ಕಲಾಕೃತಿಯನ್ನು ನೋಡುವ ದೃಷ್ಟಿಕೋನ ಬದಲಾಗುತ್ತದೆ. ಇವರ ಕಲಾಕೃತಿಗಳನ್ನು ಗಮನಿಸಿದಾಗ ಇದರಲ್ಲಿರುವ ರೇಖೆಗಳು, ಬಣ್ಣ , ತಂತ್ರಗಾರಿಕೆ , ರೂಪಕಗಳನ್ನು ಗಮನಿಸಿದಾಗ ಇವು ಶ್ರೇಷ್ಠ ಮಟ್ಟಕ್ಕೆ ತಲುಪುವ ಚಿಗುರುಗಳು ಕಾಣುತ್ತವೆ. ಮುಂದಿನ ದಿನಗಳಲ್ಲಿ ಇವು ಒಳ್ಳೆಯ ಕಲಾಕೃತಿಗಳಾಗುವ ಸಾಧ್ಯತೆಗಳಿವೆ , ಏಕೆಂದರೆ ಈ ಕಲಾಕೃತಿಗಳಲ್ಲಿರುವ ರೂಪಕ ಹಾಗೂ ರೇಖೆಗಳ ವೇಗ ಅದನ್ನು ಸೂಚಿಸುತ್ತದೆ ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಶ್ರೀಮತಿ ರೂಪ ಹಾಸನ ರವರು ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡುತ್ತಾ ಬಿ.ಎಸ್. ದೇಸಾಯಿಯವರ ಕುಟುಂಬ ಕಲಾಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಸ್ಮರಿಸಿದರು. ದೇಸಾಯಿಯವರ ಕಲಾಸೇವೆಯ ಮುಂದುವರೆದ ಭಾಗವಾಗಿ ಮೈಸೂರಿನ ಕಲಾವಿದೆ ಶ್ರೀಮತಿ ಶೋಭಾರಾಣಿ ಜಿ. ರವರ ಕಲಾ ಪ್ರದರ್ಶನ ಏರ್ಪಡಿಸಿದ್ದಕ್ಕೆ ಹಾಸನದ ಜನತೆಯ ಪರವಾಗಿ ಧನ್ಯವಾದ ಸಲ್ಲಿಸಿದರು.
ಶೋಭರಾಣಿ ಜಿ. ರವರ ಕಲಾಕೃತಿಗಳನ್ನು ಮೊದಲ ಬಾರಿಗೆ ವೀಕ್ಷಿಸಿದಾಗ ರೋಮಾಂಚನವಾಗುತ್ತದೆ. ಕಲಾಪ್ರದರ್ಶನದ ಶೀರ್ಷಿಕೆ ‘ಮತ್ಸ್ಯ ಹೆಜ್ಜೆ’ ಮೀನಿಗೆ ಕಾಲು ಇಲ್ಲ ಕೈಗಳು ಇಲ್ಲ. ಆದರೆ ಮೀನಿಗೆ ಚಲನೆ ಇದೆ. ಇದನ್ನು ರೂಪಕಾತ್ಮಕವಾಗಿ ನೋಡಿದಾಗ, ಜೀವನ ಕ್ರಮದ ವೈಭವೀಕರಣ. ಅದರ ಪ್ರತಿಯೊಂದು ಜೀವನ ಕ್ರಮದ ದಾಖಲೀಕರಣ ಕಾಣುತ್ತದೆ. ಯಾವುದೇ ಕಲೆಗಳಿಗೆ ಹಾಗೂ ಕವಿತೆಗಳಿಗೆ ಮೂರ್ತರೂಪವಿರುವುದಿಲ್ಲ. ಅಮೂರ್ತ ರೂಪ ಇದ್ದಷ್ಟು ನೋಡುಗನು ಅದರ ಆಳಕ್ಕೆ ಇಳಿಯುತ್ತಾನೆ ಮತ್ತು ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಶೋಭರಾಣಿ ಅವರ ಚಿತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿದ್ದು ಆಳಕ್ಕಿಳಿದು ನೋಡುವಂತೆ ಮಾಡುತ್ತವೆ. ಕಾಡುತ್ತವೆ. ಆಕ್ವೆರಿಯಂ ಒಳಗಿನ ಮೀನಿನಿಂದ ಪ್ರೇರಣೆ ಪಡೆದು ಚಿತ್ರಿಸಿದರೂ ಸಹ ಎಲ್ಲಿಯೂ ಕೂಡ ಆಕ್ವೆರಿಯಂ ಪರಿಕಲ್ಪನೆ ಬಾರದ ಹಾಗೆ ಚಿತ್ರಿಸಿದ್ದಾರೆ.ಇದು ಮೆಚ್ಚುವಂತದ್ದು. ತುಂಬಾ ಮುಕ್ತವಾಗಿ, ಸ್ವತಂತ್ರವಾಗಿ , ಸ್ವೇಚ್ಚೆಯಿಂದ, ಓಡಾಡುತ್ತಿರುವ ಮೀನುಗಳು ಕಾಣುತ್ತವೆ. ಇದನ್ನು ಒಂದು ಹೆಣ್ಣಿಗೆ ಹೋಲಿಸಿ ನೋಡುವುದಾದರೆ, ಯಾವುದೇ ಕವಿ, ಕಲಾವಿದ ಮುಕ್ತತೆಯನ್ನು ಹಾಗೂ ಸ್ವಾತಂತ್ರ್ಯವನ್ನು ಬಯಸುತ್ತಿರುತ್ತಾರೆ. ಸಮಾಜವು ಮಹಿಳೆಯ ಮೇಲೆ ಕಟ್ಟುಪಾಡುಗಳನ್ನು ಹೇರುತ್ತಿದ್ದು ಮಹಿಳೆ ಇದರಿಂದ ಬಿಡಿಸಿಕೊಳ್ಳುವ ಪ್ರಯತ್ನ ಮಾಡುತ್ತಾಳೆ. ಆದರೆ ಇದು ಗೋಚರವಾಗಿಯೇ ಇರಬೇಕೆಂದಿಲ್ಲ. ಸೃಜನಶೀಲ ಅಭಿವ್ಯಕ್ತಿಯಲ್ಲಿ ಅವು ಗೋಚರವಾಗುತ್ತವೆ. ಕವಿತೆ ಹಾಗೂ ಚಿತ್ರಗಳು ತುಂಬಾ ಹತ್ತಿರದ ಸಂಬಂಧ ಹೊಂದಿರುತ್ತವೆ. ಇವರ ಚಿತ್ರಗಳ ಪರಿದಿಯಲ್ಲಿ ಬೇರೆ ಬೇರೆ ಆಯಾಮಗಳನ್ನು ಕಾಣಬಹುದು. ಇದನ್ನು ಮೀರಿ ನೋಡುವುದಾದರೆ ಮೀನುಗಳು ಸ್ವತಂತ್ರವಾಗಿ ಬದುಕಲು ಹಾತೊರೆಯುತ್ತಿರುವುದು ಗೋಚರಿಸುತ್ತದೆ. ಇವರ ಕೃತಿಗಳಲ್ಲಿ ಒಗ್ಗೂಡಿಕೆ , ಸಾಮರಸ್ಯ , ಸೌಮ್ಯತೆ , ಸಮಾನತೆ , ಕೂಡಿ ಬಾಳುವಿಕೆ ಸೂಚಿಸುತ್ತದೆ ಎಂದರು.