ಕವನ : ಬಸವ ಮಾಮರ

Must Read

ಬಸವ ಮಾಮರ

ಬಸವ ನೆಂಬ ಮಾಮರ
ಹಸಿರು ಗಿಳಿ ಕೋಗಿಲೆಗಳಿಗೆ
ತವರೂರು
ನಿತ್ಯ ವಸಂತ ಮಾಮರದಲಿ
ಕುಹೂ ಕುಹೂ
ಚೈತ್ರ ಮಾಸದ ಚಿಗುರು
ಹೂ ಹಣ್ಣು ತಂಬೆಳಲ
ಹಣ್ಣುಕಾಯಿ
ಮಿಡಿ ಹೂ
ಜೋತು ಬಿದ್ದ
ಹದ್ದು ಕಾಗೆಗಳಿಗೂ
ಹೂ ಹಣ್ಣು
ತಿಂದು ತೇಗುವ
ಅಪ್ಪನ ಮಡಿಲು
ಭುವಿ ಸ್ವರ್ಗ
ಸ್ವಾರ್ಥ ವಿಲ್ಲದ
ನಿಷ್ಕಲ್ಮಶ ಭಾವ
ಮೃದು ಧೋರಣೆಯ
ಹರಿಕಾರ ಜಂಗಮ
ಕಾಯದೊಳಗೆ ಕಾಯಕ
ಎಕ ದೇವೋಪಾಸಕ
ಅಂಗವೇ ಲಿಂಗವೆಂದ
ಗುರು ಬಸವೇಶ್ವರ
ಶರಣೆಂದು ಕುಲಕ್ಕೆ
ಶರಣು ಶರಣಾರ್ಥಿ ಹೇಳಿದ
ಹರಳಯ್ಯ ಮಧುವರಸರ
ಮುದ್ದು ಮಕ್ಕಳ ಮದುವೆ
ಚೈತ್ರ ಮಾಸ ದ ಕೋಗಿಲೆ
ಕುಕ್ಕಿ ಕೆಡವಿದವು
ರಣ ಹದ್ದು ಕಾಗೆ ಗೂಬೆಗಳು
ಹೌ ಹಾರಿದ ಶರಣ ಸಂಕುಲ
ತೊರೆದು ಬಿಟ್ಟವು ಗೂಡು
ದಿಕ್ಕಿಗೊಂದು ಶರಣ
ಮುರಗೋಡ ಗೊಡಚಿ ತಿಗಡಿ
ಐಕ್ಯರಾದರು ಶರಣರು
ಉರುಳಿ ಬಿದ್ದಿತು
ಭುವಿಯ ಸ್ವರ್ಗದಲಿ
ಬಸವ ಮಾಮರ
———
ಡಾ.ಸಾವಿತ್ರಿ ಕಮಲಾಪೂರ

Latest News

ಪಾಪನಾಶ ದೇವಾಲಯ ಪ್ರಕರಣ ; ಏಕವಚನದಲ್ಲಿ ಖಂಡ್ರೆ ನಿಂದಿಸಿದ ಖೂಬಾ

ಬೀದರ - ನಗರದ ಪಾಪನಾಶ ದೇವಾಲಯದಲ್ಲಿ ಮಹಾಪೂಜೆ ಕುರಿತಂತೆ ಕೈ ಕಮಲ ಜಟಾಪಟಿಯು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದು ತಮಗೆ ಶಿವನ ದರ್ಶನಕ್ಕೆ ಅವಕಾಶ ಕೊಡಲಿಲ್ಲವೆಂದು...

More Articles Like This

error: Content is protected !!
Join WhatsApp Group