ಅಚ್ಚ ಕನ್ನಡತಿ ಪವಿತ್ರ ಮನಸ್ಮಿತೆ
ನಿಮ್ಮಮರಣವೇ ಮಹಾನಮಸ್ತುತೆ
ಅಪರ್ಣ ನಿನಾದೆ ಕನ್ನಡಕ್ಕೆ ಅರ್ಪಣಾ ಶುದ್ಧ ಕನ್ನಡ ಭಾಷೆಗೆ ಸಮರ್ಪಣಾ
ಮಸಣದ ಹೂವಿನಿಂದ ಸಿನಿಮಾರಂಗ. ಕ್ಯಾನ್ಸರಕ್ಕಾಹುತಾಯ್ತೆ ಶ್ವಾಸಕಾಂಗ
ಸದಾ ನಗು ಮುಖದ ಹಸನ್ಮುಖಿ ಸರ್ವಕಾರ್ಯಗಳ ಸ್ಪಷ್ಟ ನಿರೂಪಕಿ
ಮಜಾ ಟಾಕೀಸ ಹಾಸ್ಯದ ವರಲಕ್ಷ್ಮಿ
ಭಾಗ್ಯವಿಧಾತೆಯೇ ದೈವ ಭಾಗ್ಯಲಕ್ಷ್ಮಿ
ಮೆಟ್ರೋ ನಿಲ್ದಾಣದ ಸಂದೇಶವಾಣಿ
ಕೊನೆಯ ನಿಲ್ದಾಣದಿ ಸ್ವರ್ಗವಾಸಿಣಿ
ಕನ್ನಡವವನ್ನಾಡುವ ಗಾನ ಕೋಗಿಲೆ ಎಂದೂ ಮುಗಿಯದು ನಿನ್ನಯ ಲೀಲೆ
ಅಪ್ಪಟ ಕನ್ನಡದ ಗರತಿ ಅಪರಂಜಿ ಕುಲಕೋಟಿ ಮರೆಯದ ಗುಲಗಂಜಿ
ಕನ್ನಡದ ಶುದ್ಧತೆಯ ಉಚ್ಚಾರಣೆ ಜಾನಪದ ಸೊಗಡಿನ ಆಚರಣೆ
ಅಪರ್ಣ ನೀವಾದಿರಿ ಸುವರ್ಣ. ದರ್ಪಣದಂತಾದಿರಿ ನಮಗಾರ್ಪಣ
ಸುಸಂಸ್ಕೃತಿಯ ಸಭ್ಯತೆ ಸುಕುಮಾರಿ ಕರುನಾಡಿನ ಸಾರಥಿ ರಾಯಭಾರಿ
ಮಾತನಾಡಿದರೆ ಮುತ್ತಿನ ಹಾರ. ಸ್ಪಟಿಕೆದ ನುಡಿ ಸಲಾಕೆ ಅಂತಾರ
ಮತ್ತೊಮ್ಮೆ ಮತ್ತೆ ಹುಟ್ಟಿಬಾರಮ್ಮ. ನಿಮಗೆ ನಮ್ಮಕೋಟಿ ನಮಸ್ಕಾರ
ಸೋಮಣ್ಣಬಸವನಬಾಗೇವಾಡಿ ಶಿಕ್ಷಕರು ಉಳ್ಳಿಗಡ್ಡಿ ವಡ್ಡರಹಟ್ಟಿ