ಸಮರದ ಮಾತು
ಅದೆಷ್ಟು ಇವೆ ನಿನ್ನ ಮಾತಿನ
ಸಮರದ ಬಾಣಗಳು
ಎದೆಯ ಗುಂಡಿಗೆಯನು
ಸೀಳಿ ನಿಂತಿವೆ
ವೀರ ಪರಾಕ್ರಮದ
ಕೂಸೂ ನಾನಲ್ಲ
ನಿನ್ನ ಜೊತೆ ಹೋರಾಡಿ
ಜಯಿಸುವ ಶಕ್ತಿಯೂ ನನ್ನಲಿಲ್ಲ ಏಕೆಂದರೆ
ಆ ಶಕ್ತಿ ಎಲ್ಲವನ್ನೂ
ಕಿತ್ತು ಕೊಂಡ
ವೀರ ಯೋಧ
ಮಾತಿನ ಸಮರಾಭ್ಯಾಸ
ನಾನು ಕಲಿತೇ ಇಲ್ಲ
ಕಲಿಸುವಳು
ಮಾತೃ ತನಯದ ತಾಯಿ
ನಾನು
ನಿನ್ನ ಅಂತರಂಗದ
ಒಳಗಿನ ಹೋರಾಟಕೆ
ನಾನಿಂದು ಬಲಿಪಶು ಆದೆ
ಬಾಣಗಳು ನಾಟಿವೆ
ಸಮರ ದೋಣಿಯಲಿ
ಹೊತ್ತು ನಡೆಯಬೇಕಾಗಿದೆ
ಇರುಳಾದರೇನು ?
ಹಗಲಾದರೇನು ?
ಕಿತ್ತು ಹೋರಾಡುವೆ
ಬೀಸಿ ಬರುವ ಮಾತಿನ
ಬಾಣಗಳ
ನಿನ್ನದೇ ಮಾತಿನ
ಸಮರದ ರಣಾಂಗಣದಲ್ಲಿ
ವೀರ ಮರಣ ಅಪ್ಪಿದರೂ
ಚಿಂತೆ ಇಲ್ಲ
—————-
ಸಾವಿತ್ರಿ ಕಮಲಾಪೂರ