ಕವನ : ಕಪ್ ನಮ್ಮದೆ

Must Read

ಕಪ್ ನಮ್ಮದೆ

ನಿನ್ನೆ ಮೊನ್ನೆ ಮುಗಿದ
ಐ ಪಿ ಎಲ್ ಕ್ರಿಕೆಟ್ ಮ್ಯಾಚ್
ಕಪ್ ನಮ್ಮದೆ
ಕೂಗಾಡಿ ಕಿರುಚಾಡಿ
ಮೈದಾನದುದ್ದಕ್ಕೂ ಉರುಳಾಡಿ
ಮೋಸದ ಭಾಜಿಯ ಆಟ
ಹೂಡಿಕೆದಾರ ಕೈ ಗೊಂಬೆಗಳು
ನಮ್ಮ ಕ್ರಿಕೆಟ್ ಪಟುಗಳು
ಆರಂಭದಲ್ಲಿ ಇವರ ಹರಾಜು
ದುಡ್ಡಿಗಾಗಿ ಆಟ ಜೂಜಾಟ
ಕ್ರಿಕೆಟ್ ಎಂದರೆ ದೇಶ ಪ್ರೇಮ
ಇದು ಕೌರವ ಪಾಂಡವರ ಪಗಡೆ
ಕುತಂತ್ರ ಕುಟಿಲ ನೀತಿ
ಲಕ್ಷ ಕೋಟಿ ವಹಿವಾಟು
ಹರಿದು ಬರುವ ಜಾಹಿರಾತು
ಉದ್ಯಮಿ ಕಳ್ಳರು ಲೂಟಿಕೋರರು
ಜನರಿಗೆ ಉದ್ದೀಪನ ಮದ್ದು
ಜನ ಮರುಳೋ ಜಾತ್ರೆ ಮರುಳೋ
ಅಂತೂ ಇಂತೂ ಆಡಿ
ಮುಗಿಸುತ್ತಾರೆ
ಇವರಿಗೆ ಗೌರವಿಸಲು ಸರ್ಕಾರ ಮುಂದು
ನೂಕು ನುಗ್ಗಲು
ನೋಡು ನೋಡುತ್ತಿದ್ದಂತೆ
ಸತ್ತು ಹೋದವು ಎಳೆಯ ಕುಡಿಗಳು
ಕಾಲ್ತುಳಿತಕ್ಕೆ ಮಣ್ಣಾದವು
ಭವಿಷ್ಯ ಕಾಣದೆ
ಕಪ್ ನಮ್ಮದೆ ಸತ್ತ ಹೆಣಗಳ
ಮೇಲೆ ನಡೆಯುವ ಸಂಭ್ರಮ
ಶೋಕವೋ ಸಂಭ್ರವೋ
ಎಲ್ಲವೂ ವಿಧಿಯಾಟ

ಡಾ.ಶಶಿಕಾಂತ ಪಟ್ಟಣ ಪುಣೆ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group